ರಾ ಜಸ್ಥಾನ ರಾಯಲ್ನ ಯುವ ಆಟಗಾರ ವೈಭವ್ ಸೂರ್ಯವಂಶಿ ತಮ್ಮ ಅದ್ಭುತ ಇನ್ನಿಂಗ್ಸ್ನಿಂದ ಕ್ರಿಕೆಟ್ ಲೋಕದ ಗಮನ ಸೆಳೆದಿದ್ದಾರೆ. ಕೇವಲ 14 ವರ್ಷ 32 ದಿನಗಳ ವಯಸ್ಸಿನ ಈ ಬಾಸ್ ಬೇಬಿ ಗುಜರಾತ್ ಟೈಟಾನ್ಸ್ ವಿರುದ್ಧದ ಪಂದ್ಯದಲ್ಲಿ ಅದ್ಭುತ ಶತಕ ಗಳಿಸಿದರು.
- ಈ ಗೆಲುವಿನೊಂದಿಗೆ ಅವರು 2009 ರಲ್ಲಿ ಮನೀಶ್ ಪಾಂಡೆ ನಿರ್ಮಿಸಿದ್ದ 19 ವರ್ಷ ಮತ್ತು 253 ದಿನಗಳ ದಾಖಲೆಯನ್ನು ಮುರಿದರು
- 210 ರನ್ಗಳ ಬೃಹತ್ ಗುರಿಯನ್ನು ಬೆನ್ನಟ್ಟಲು ಓಪನರ್ ಆಗಿ ಜೈಸ್ವಾಲ್ ಜೊತೆ ಬಂದ ಸೂರ್ಯವಂಶಿ ತಮ್ಮ ವಯಸ್ಸಿಗೂ ಮೀರಿದ ಪ್ರಬುದ್ಧತೆ ಮತ್ತು ಧೈರ್ಯದಿಂದ ಬ್ಯಾಟಿಂಗ್ ಮಾಡಿದರು.
ಪವರ್ಪ್ಲೇನಲ್ಲಿ ರಾಜಸ್ಥಾನ್ ರಾಯಲ್ಸ್ ತಂಡದ 87/0 ಸ್ಕೋರ್ನಲ್ಲಿ ಅವರ ವೇಗದ ಬ್ಯಾಟಿಂಗ್ ಪ್ರಮುಖ ಪಾತ್ರ ವಹಿಸಿತು. ಸೂರ್ಯವಂಶಿ 38 ಎಸೆತಗಳಲ್ಲಿ 101 ರನ್ ಗಳಿಸಿದರು. ಪ್ರಸಿದ್ಧ್ ಕೃಷ್ಣ ಅವರ ಅದ್ಭುತ ಯಾರ್ಕರ್ನಿಂದ ಕ್ಲೀನ್ ಬೌಲ್ಡ್ ಆದರು. ಆದರೆ ಇಡೀ ಕ್ರೀಡಾಂಗಣ ಎದ್ದು ನಿಂತು ಅವರಿಗೆ ಚಪ್ಪಾಳೆ ತಟ್ಟಿತು.
ವೈಭವ್ ಸೂರ್ಯವಂಶಿ ರಚಿಸಿದ ದಾಖಲೆಗಳು:
ಐಪಿಎಲ್ ಇತಿಹಾಸದಲ್ಲಿ ಶತಕ ಗಳಿಸಿದ ಅತ್ಯಂತ ಕಿರಿಯ ಆಟಗಾರ (14 ವರ್ಷ 32 ದಿನಗಳು): ವೈಭವ್ ಸೂರ್ಯವಂಶಿ ಐಪಿಎಲ್ ಇತಿಹಾಸದಲ್ಲಿ ಶತಕ ಗಳಿಸಿದ ಅತ್ಯಂತ ಕಿರಿಯ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾದರು. ವೈಭವ್ ಸೂರ್ಯವಂಶಿ ಅವರನ್ನು ಭಾರತೀಯ ಕ್ರಿಕೆಟ್ನ ಭವಿಷ್ಯ ಎಂದು ಪರಿಗಣಿಸಲಾಗುತ್ತಿದೆ.
ಮಾಜಿ ಕ್ರಿಕೆಟಿಗರು ಅವರ ಶಾಟ್-ಹಿಟ್ಟಿಂಗ್ ಅನ್ನು “ಪ್ರೈಮ್ ಯುವರಾಜ್ ಸಿಂಗ್” ಶೈಲಿಗೆ ಹೋಲಿಸಿದ್ದಾರೆ. 14ನೇ ವಯಸ್ಸಿನಲ್ಲಿ ಇಷ್ಟೊಂದು ಧೈರ್ಯದಿಂದ ಆಡಿದ್ದು ಕ್ರಿಕೆಟ್ ಜಗತ್ತನ್ನು ಅಚ್ಚರಿಗೊಳಿಸಿದೆ. ಇದನ್ನೆಲ್ಲಾ ನೋಡುವಾಗ ಇದು ವೈಭವ್ ಸೂರ್ಯವಂಶಿಯವರ ಪ್ರಯಾಣದ ಆರಂಭವಷ್ಟೇ ಎಂದು ತೋರುತ್ತದೆ. ಪಿಕ್ಚರ್ ಅಭಿ ಬಾಕಿ ಹೈ ಎಂಬಂತಿದೆ.
ಒಂದೇ ಟಿ20 ಪಂದ್ಯದಲ್ಲಿ ಶತಕ ದಾಖಲಿಸಿ ಅತ್ಯಂತ ಕಿರಿಯ ಆಟಗಾರ: ವೈಭವ್ ಸೂರ್ಯವಂಶಿ ಐಪಿಎಲ್ನಲ್ಲಿ ಮಾತ್ರವಲ್ಲದೆ ಇಡೀ ಟಿ20 ಇತಿಹಾಸದಲ್ಲಿ ಶತಕ ಗಳಿಸಿದ ಅತ್ಯಂತ ಕಿರಿಯ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾದರು. ಅವರು 2013 ರಲ್ಲಿ ವಿಜಯ್ ಜೋಲ್ ರಚಿಸಿದ್ದ 18 ವರ್ಷ 118 ದಿನಗಳ ದಾಖಲೆಯನ್ನು ಮುರಿದರು.
ಐಪಿಎಲ್ 2025 ರಲ್ಲಿ ಅತಿ ವೇಗದ ಅರ್ಧ ಶತಕ: ವೈಭವ್ ಸೂರ್ಯವಂಶಿ ಸ್ಫೋಟಕ ಬ್ಯಾಟಿಂಗ್ ಮೂಲಕ ಕೇವಲ 17 ಎಸೆತಗಳಲ್ಲಿ 50 ರನ್ ಪೂರೈಸಿದರು. ಈ ಮೂಲಕ ಐಪಿಎಲ್ 2025 ರಲ್ಲಿ ಅತಿ ವೇಗದ ಅರ್ಧ ಶತಕ ಸಿಡಿಸಿದರು. 3 ಬೌಂಡರಿ ಮತ್ತು 6 ಸಿಕ್ಸರ್ ಬಾರಿಸಿದ್ದಾರೆ.
