ಕೊರಟಗೆರೆ:- ದಕ್ಷಿಣ ಕಾಶಿ ಎಂದೇ ಪ್ರಸಿದ್ಧವಾಗಿರುವ ದೇವಾಲಯಗಳ ತವರೂರು ಪಟ್ಟಣದ ತೇರಿನ ಬೀದಿ ಹಾಗೂ ಕೋಟೆ ಬೀದಿಯ ಸಮೀಪ ನೆಲೆಸಿರುವ ಇತಿಹಾಸ ಪ್ರಸಿದ್ಧ ಶ್ರೀಶನೇಶ್ವರ ಸ್ವಾಮಿಯ ದೇವಾಲಯದಲ್ಲಿ ಕಾರ್ತಿಕ ಮಾಸದ ಅಂಗವಾಗಿ 16ನೇ ವಾರ್ಷಿಕೋತ್ಸವ ಹಾಗೂ ಶನೇಶ್ವರ ಸ್ವಾಮಿಯ ಉತ್ಸವವನ್ನು ಈರುಳ್ಳಿ ತಿಮ್ಮಪ್ಪನವರ ಕುಟುಂಬ ಹಾಗೂ ಭಕ್ತಾದಿಗಳ ಸಹಕಾರದಿಂದ ನೆರವೇರಿಸಲಾಯಿತು.
ಶನಿದೇವರ ಸೇವಾ ಟ್ರಸ್ಟ್ ಅಧ್ಯಕ್ಷ ಎಂ.ಜಿ ಸುಧೀರ್ ಮಾತನಾಡಿ, ತೇರಿನ ಬೀದಿಯಲ್ಲಿರುವ ಶನೇಶ್ವರ ಸ್ವಾಮಿ ದೇವಾಲಯದಲ್ಲಿ ವಾರ್ಷಿಕೋತ್ಸವವನ್ನು ಈರುಳ್ಳಿ ತಿಮ್ಮಣ್ಣ ಕುಟುಂಬವು ಪ್ರತಿವರ್ಷ ವಿಜೃಂಭಣೆಯಿಂದ ನಡೆಸಿಕೊಂಡು ಬಂದಿದೆ. ವಾರ್ಷಿಕೋತ್ಸವಕ್ಕೆ ಸಹಕಾರ ನೀಡಿದ ಕುಟುಂಬಕ್ಕೆ ಹಾಗೂ ಭಕ್ತಾದಿಗಳಿಗೆ ಸ್ವಾಮಿಯು ಹೆಚ್ಚಿನ ಅನುಕೂಲ ಕಲ್ಪಿಸಿ ಸ್ವಾಮಿಯು ಆಶೀರ್ವಾದಿಸಬೇಕಿದೆ ಎಂದು ತಿಳಿಸಿದರು.
ಗೌರವಾಧ್ಯಕ್ಷ ಕೆ.ಪಿ ರಾಜಣ್ಣ ಮಾತನಾಡಿ, ಭಕ್ತಾದಿಗಳ ಸಹಕಾರದಿಂದ ಇತಿಹಾಸವುಳ್ಳ ಶ್ರೀಶನೇಶ್ವರ ಸ್ವಾಮಿ ದೇವಾಲಯ ಅಭಿವೃದ್ಧಿ ಕಂಡಿದೆ. ಸ್ವಾಮಿ ಅನುಗ್ರಹದಿಂದ ಟ್ರಸ್ಟ್ ಎಲ್ಲಾ ಪದಾಧಿಕಾರಿಗಳು ದೇವಾಲಯ ಅಭಿವೃದ್ಧಿಗೆ ವಿಶೇಷ ಆಸಕ್ತಿ ತೋರುತ್ತ ತಮ್ಮ ಕೆಲಸವನ್ನು ಅಚ್ಚುಕಟ್ಟಾಗಿ ನಿಭಾಯಿಸುತ್ತಿದ್ದಾರೆ ಎಂದು ಹೇಳಿದರು.
ಉಪಾಧ್ಯಕ್ಷ ಕೆ.ಆರ್ ರಾಜಣ್ಣ ಮಾತನಾಡಿ, ಪಟ್ಟಣದ ಪ್ರಮುಖ ಬೀದಿಗಳಲ್ಲಿ ಶ್ರೀ ಶನೇಶ್ವರ ಸ್ವಾಮಿಯ ಉತ್ಸವ ಮೂರ್ತಿ ಮೆರವಣಿಗೆ ಶನೇಶ್ವರ ಸ್ವಾಮಿಯ ದೇವಾಲಯದಲ್ಲಿ ನೆಲೆಸಿರುವ ಶನೇಶ್ವರ ಸ್ವಾಮಿಗೆ ವಿಶೇಷ ಹೂವಿನ ಅಲಂಕಾರವನ್ನು ನೆರವೇರಿಸಿ ವಿಶೇಷ ಪೂಜೆಯನ್ನು ಸಲ್ಲಿಸಲಾಯಿತು ದೇವಸ್ಥಾನಕ್ಕೆ ಆಗಮಿಸಿದ ಭಕ್ತಾದಿಗಳಿಗೆ ವಿಶೇಷ ಪ್ರಸಾದ ವ್ಯವಸ್ಥೆ ಕಲ್ಪಿಸಲಾಗಿತ್ತು ಎಂದರು.
ನಿರ್ದೇಶಕ ಕೆ.ವಿ ಪುರುಷೋತ್ತಮ್ ಮಾತನಾಡಿ, ಶ್ರೀಶನೇಶ್ವರ ಸ್ವಾಮಿ ದೇವಾಲಯಕ್ಕೆ 150ರಿಂದ 170ವರ್ಷಗಳ ಇತಿಹಾಸವನ್ನು ಹೊಂದಿದೆ. ಪಾರಂಪರಿಕ ಇತಿಹಾಸವಿರುವ ದೇವಾಲಯಗಳಲ್ಲಿ ಶನೈಶ್ಚರ ಸ್ವಾಮಿ ದೇವಾಲಯ ಕೂಡ ಒಂದು. ಅಭಿವೃದ್ಧಿಗೆ ಆಡಳಿತ ಮಂಡಳಿಯು ಹೆಚ್ಚಿನ ಶ್ರಮ ವಹಿಸಿ ಕೆಲಸ ಮಾಡುತ್ತಿದೆ ಎಂದರು.
ಈ ವೇಳೆ ಕಾರ್ಯದರ್ಶಿ ಹೆಚ್.ಎಲ್ ನಾರಾಯಣ, ಖಚಾಂಚಿ ವೆಂಕಟಾಚಲ ಶೆಟ್ಟಿ, ಕೆ.ಆರ್ ಅನುಪ್ರಸಾದ್, ಕೆ.ಎನ್ ಲಕ್ಷ್ಮೀನಾರಾಯಣ, ಕುಂಭೀನರಸಿಂಹಾಚಾರ್, ಉಮೇಶ್, ಕೆ.ಆರ್ ಚಂದ್ರಶೇಖರ್, ಸತ್ಯನಾರಾಯಣ, ಕೆ.ಪರಶುರಾಮ್, ಕೆ.ಎಚ್ ಅಂಜನ್ಕುಮಾರ್, ಅರ್ಚಕರಾದ ಕುಂಬಿ ನರಸಿಂಹಾಚಾರ್, ನರೇಂದ್ರದೀಕ್ಷಿತ್, ಯಶ್ವಂತ್ ಆಚಾರ್, ಉತ್ಸವದ ಆಯೋಜಕರಾದ ಈರುಳ್ಳಿ ತಿಮ್ಮಣ್ಣನವರ ಕುಟುಂಬದ ಪ್ರಸನ್ನ ಕುಮಾರ್, ಶೃತಿ, ಜಿಯಾನ್ ಭವನ್, ತಿಮ್ಮರಾಜು, ಭರತ್ ಕುಮಾರ್, ಅಂಜಲಿ,ವೆಂಕಟೇಶ್, ಸುಜಾತ, ಸೇರಿದಂತೆ ಭಕ್ತಾದಿಗಳು ಉಪಸ್ಥಿತರಿದ್ದರು.
-ಶ್ರೀನಿವಾಸ್ ಕೊರಟಗೆರೆ
