ನವದೆಹಲಿ: ಭಾರತೀಯ ಕೈಗಾರಿಕಾ ಒಕ್ಕೂಟ (ಸಿಐಐ) ಹಾಗೂ ಭಾರತ ಸರ್ಕಾರದ ರೈಲ್ವೆ ಸಚಿವಾಲಯ ಸಹಭಾಗಿತ್ವದಲ್ಲಿ 16ನೇ ಅಂತರರಾಷ್ಟ್ರೀಯ ರೈಲ್ವೆ ಸಲಕರಣೆ ಪ್ರದರ್ಶನ (IREE 2025) ಅಕ್ಟೋಬರ್ 15ರಿಂದ 17ರವರೆಗೆ ನವದೆಹಲಿಯ ಭಾರತ್ ಮಂಟಪದಲ್ಲಿ ನಡೆಯಲಿದೆ.
ಈ ವರ್ಷದ ಆವೃತ್ತಿಯು ಇದುವರೆಗಿನ ಅತ್ಯಂತ ಅದ್ಭುತ ಪ್ರದರ್ಶನವಾಗಲಿದ್ದು, 15 ಕ್ಕೂ ಹೆಚ್ಚು ದೇಶಗಳಿಂದ ಬಂದಿರುವ 450 ಕ್ಕೂ ಹೆಚ್ಚು ಪ್ರದರ್ಶಕರು ರೈಲು ಮತ್ತು ಮೆಟ್ರೋ ವಲಯಕ್ಕೆ ಸಂಬಂಧಿಸಿದ ಅತ್ಯಾಧುನಿಕ ತಂತ್ರಜ್ಞಾನಗಳು, ಪರಿಹಾರಗಳು ಮತ್ತು ಸೇವೆಗಳನ್ನು ಪ್ರದರ್ಶಿಸಲಿದ್ದಾರೆ.
ಇದನ್ನು ಓದಿ: ಮೊರಾಕೊದಲ್ಲಿ ಭಾರತದ ಮೊದಲ ವಿದೇಶಿ ರಕ್ಷಣಾ ಉತ್ಪಾದನಾ ಘಟಕ ಉದ್ಘಾಟನೆ
1990ರಲ್ಲಿ ಪ್ರಾರಂಭವಾದ IREE, ಸಿಐಐ ಮತ್ತು ರೈಲ್ವೆ ಸಚಿವಾಲಯದ ನಡುವಿನ ನಿರಂತರ ಸಹಕಾರವನ್ನು ಪ್ರತಿಬಿಂಬಿಸುವ ಹೆಗ್ಗುರುತು ಕಾರ್ಯಕ್ರಮವಾಗಿ ಬೆಳೆಯುತ್ತಾ ಬಂದಿದೆ.
ಈ ಪ್ರದರ್ಶನವನ್ನು ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಅವರು ಉದ್ಘಾಟಿಸಲಿದ್ದು, ಭಾರತದ ರೈಲು ಕ್ಷೇತ್ರದಲ್ಲಿ ತಂತ್ರಜ್ಞಾನ ಅಭಿವೃದ್ಧಿಗೆ ಇದು ಮಹತ್ವದ ವೇದಿಕೆಯಾಗಿ ಪರಿಣಮಿಸಲಿದೆ ಎಂದು ಆಯೋಜಕರು ತಿಳಿಸಿದ್ದಾರೆ.
