ಬೆಂಗಳೂರು: ರಾಜ್ಯಾದ್ಯಂತ ಶಾಲಾ ಮಕ್ಕಳಿಗೆ ಸೆಪ್ಟೆಂಬರ್ 20ರಿಂದ ದಸರಾ ರಜೆ ಘೋಷಿಸಲಾಗಿದೆ. ಸಾರ್ವಜನಿಕ ಶಿಕ್ಷಣ ಇಲಾಖೆಯ ಪ್ರಕಟಣೆಯ ಪ್ರಕಾರ, ಈ ಬಾರಿ ದಸರಾ ರಜೆ ಒಟ್ಟು 18 ದಿನಗಳು ಇರಲಿದ್ದು, ಅಕ್ಟೋಬರ್ 7ರವರೆಗೆ ಮುಂದುವರಿಯಲಿದೆ.
2025-26ನೇ ಶೈಕ್ಷಣಿಕ ಸಾಲಿನಂತೆ, ಅಕ್ಟೋಬರ್ 8ರಿಂದ ಶಾಲೆಯ 2ನೇ ಅವಧಿ ಆರಂಭವಾಗಲಿದ್ದು, 2026ರ ಏಪ್ರಿಲ್ 10ರವರೆಗೆ ತರಗತಿಗಳು ನಡೆಯಲಿವೆ.
ಶೈಕ್ಷಣಿಕ ವರ್ಷದ ಆರಂಭದಲ್ಲಿಯೇ ಸಾರ್ವಜನಿಕ ಶಿಕ್ಷಣ ಇಲಾಖೆ ರಜೆ ಮತ್ತು ಕಾರ್ಯಚಟುವಟಿಕೆಗಳ ವೇಳಾಪಟ್ಟಿಯನ್ನು ಪ್ರಕಟಿಸಿತ್ತು. ಅದರ ಅನುಸಾರವಾಗಿ ಈ ಬಾರಿ ದಸರಾ ರಜೆಗಳನ್ನು ಘೋಷಿಸಲಾಗಿದೆ.
ಈ ನಿರ್ಧಾರದಿಂದ ರಾಜ್ಯದ ಎಲ್ಲಾ ಸರ್ಕಾರಿ, ಅನುದಾನಿತ ಹಾಗೂ ಖಾಸಗಿ ಶಾಲೆಗಳ ವಿದ್ಯಾರ್ಥಿಗಳು ಮತ್ತು ಶಿಕ್ಷಕರು ದಸರಾ ಹಬ್ಬವನ್ನು ಕುಟುಂಬದೊಂದಿಗೆ ಸಂಭ್ರಮದಿಂದ ಆಚರಿಸಿಕೊಳ್ಳಲು ಅವಕಾಶ ಸಿಕ್ಕಿದೆ.
