ಬೆಂಗಳೂರು: ದೇಶದ ಕುಗ್ರಾಮಗಳಲ್ಲಿ ಶಾಲೆಯಿಂದ ಹೊರಗುಳಿದ ಹೆಣ್ಣುಮಕ್ಕಳ ಶಿಕ್ಷಣಕ್ಕಾಗಿ ಶ್ರಮಿಸುತ್ತಿರುವ ಭಾರತೀಯ ಲಾಭರಹಿತ ಸಂಸ್ಥೆ Educate Girls ಗೆ 2025ನೇ ಸಾಲಿನ ಪ್ರತಿಷ್ಠಿತ ರಾಮನ್ ಮ್ಯಾಗ್ಸೆಸೆ ಪ್ರಶಸ್ತಿ ಲಭಿಸಿದೆ.
ಈ ಪ್ರಶಸ್ತಿಯನ್ನು ಪಡೆದ ಮೊದಲ ಭಾರತೀಯ ಸಂಸ್ಥೆಯಾಗಿ Educate Girls ಇತಿಹಾಸ ನಿರ್ಮಿಸಿದೆ. ನೊಬೆಲ್ ಪ್ರಶಸ್ತಿಗೆ ಏಷ್ಯಾದ ಸಮಾನವೆಂದು ಪರಿಗಣಿಸಲಾದ ಈ ಪ್ರಶಸ್ತಿಯನ್ನು ಏಷ್ಯಾದ ಜನರಿಗೆ ನಿಸ್ವಾರ್ಥ ಸೇವೆಗಾಗಿ ನೀಡಲಾಗುತ್ತದೆ.
67ನೇ ರಾಮನ್ ಮ್ಯಾಗ್ಸೆಸೆ ಪ್ರಶಸ್ತಿ ಪ್ರದಾನ ಸಮಾರಂಭ ನವೆಂಬರ್ 7ರಂದು ಮನಾಲಿನಲ್ಲಿ ನಡೆಯಲಿದೆ.
ಮ್ಯಾಗ್ಸೆಸೆ ಪ್ರಶಸ್ತಿಯ ಕುರಿತು:
ರಾಮೋನ್ ಮ್ಯಾಗ್ಸೆಸೆ ಫಿಲಿಪ್ಪೈನ್ಸ್ ದೇಶದ ಏಳನೇ ಅಧ್ಯಕ್ಷರಾಗಿದ್ದರು. 1957 ಮಾರ್ಚ್ 17ರಂದು ವಿಮಾನ ಅಪಘಾತದಲ್ಲಿ ಸಾವನ್ನಪ್ಪಿದ ಮ್ಯಾಗ್ಸೆಸೆ ಅವರು ಪ್ರಜಾತಂತ್ರ ಆಡಳಿತದ ಪ್ರಾಮಾಣಿಕತೆ, ಪಾರದರ್ಶಕತೆ ಮತ್ತು ಆದರ್ಶಕ್ಕೆ ಪ್ರತೀಕವಾಗಿದ್ದರು.
ಈ ಹೆಸರಿನಲ್ಲಿ 1957 ಏಪ್ರಿಲ್ ತಿಂರಿಂದ ಫಿಲಿಪ್ಪೈನ್ಸ್ ಸರ್ಕಾರ ಹಾಗೂ ಅಮೆರಿಕದ ರಾಕ್ಫೆಲ್ಲರ್ ಬ್ರದರ್ಸ್ ಫಂಡ್ ಸಹಯೋಗದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುತ್ತಿದೆ.
