ಕೊರಟಗೆರೆ:- ರಾಜ್ಯ ಸರಕಾರದಿಂದ ಕೊರಟಗೆರೆ ಕ್ಷೇತ್ರಕ್ಕೆ 2025-26ನೇ ಆರ್ಥಿಕ ವರ್ಷಕ್ಕೆ 218ಕೋಟಿಗೆ ಮಂಜೂರು. ಪ್ರಸ್ತುತ 60ಕೋಟಿಯ ವಿವಿಧ ನೀರಾವರಿ ಮತ್ತು ರಸ್ತೆ ಕಾಮಗಾರಿಗಳಿಗೆ ಅಡಿಗಲ್ಲು ಹಾಕಿದ್ದೇನೆ. ಬಜೇಟ್ನಲ್ಲಿಯು ನೀರಾವರಿ ಯೋಜನೆಗೆ ಪ್ರಮುಖ ಆಧ್ಯತೆ ನೀಡುತ್ತೇನೆ ಎಂದು ಗೃಹಸಚಿವ ಡಾ.ಜಿ.ಪರಮೇಶ್ವರ ತಿಳಿಸಿದರು.
ಕೊರಟಗೆರೆ ತಾಲೂಕಿನ ಹೊಳವನಹಳ್ಳಿ ಹೋಬಳಿಯ ಗರುಡಾಚಲ, ಸುವರ್ಣಮುಖಿ ಮತ್ತು ಜಯಮಂಗಲಿ ನದಿಗಳಿಗೆ ಅಡ್ಡಲಾಗಿ ಚೇಕ್ಡ್ಯಾಂ ಕಂಬ್ರೀಡ್ಜ್ ಮತ್ತು ವಿವಿಧ ರಸ್ತೆ ಕಾಮಗಾರಿಗಳಿಗೆ ಸೋಮವಾರ ಭೂಮಿಪೂಜೆ ನೇರವೇರಿಸಿ ಮಾತನಾಡಿದರು.
ಶಾಶ್ವತ ನೀರಾವರಿಗೆ ಎತ್ತಿನಹೊಳೆ ಯೋಜನೆಯಿಂದ 69ಕೆರೆಗಳಿಗೆ ನೀರು ಹರಿಸುವ ಪೈಪ್ಲೈನ್ ಕಾಮಗಾರಿ ಪ್ರಗತಿಯಲ್ಲಿದೆ. ಅಂತರ್ಜಲ ಅಭಿವೃದ್ದಿಗೆ ಗರುಡಾಚಲ, ಜಯಮಂಗಲಿ, ಸುವರ್ಣಮುಖಿ ನದಿಗಳಿಗೆ ಅಡ್ಡಲಾಗಿ 38ಕೋಟಿ ಅನುಧಾನದಿಂದ 10ಕಡೆ ಚೇಕ್ಡ್ಯಾಂ ಕಂಬ್ರೀಡ್ಜ್ ನಿರ್ಮಾಣ. ಚುನಾವಣೆ ವೇಳೆ ನಾನು ರೈತರಿಗೆ ನೀಡಿದ ನೀರಾವರಿ ಭರವಸೆ ಈಡೇರುತ್ತಿದೆೆ ಎಂದರು.
ಎತ್ತಿನಹೊಳೆ ಯೋಜನೆ ಮಳೆಗಾಲಕ್ಕೆ ಅರಸಿಕೆರೆಗೆ ಬರುತ್ತೇ. ಅರಸಿಕೆರೆಯಿಂದ ತುಮಕೂರು ನಡುವೆ ಅರಣ್ಯ ಇಲಾಖೆ ಅನುಮತಿ ಸಮಸ್ಯೆಯಿಂದ ಕಾಮಗಾರಿ ಸ್ವಲ್ಪ ವಿಳಂಬವಾಗಿದೆ. ಕೇಂದ್ರ ಸಚಿವರ ಜೊತೆ ನಮ್ಮ ನೀರಾವರಿ ಸಚಿವ ಶಿವಕುಮಾರ್ ಈಗಾಗಲೇ ಚರ್ಚಿಸಿದ್ದಾರೆ. ಕೇಂದ್ರ ಸರಕಾರ ಅನುಮತಿ ನೀಡಿದರೇ ಈವರ್ಷವೇ ತುಮಕೂರಿಗೆ ಎತ್ತಿನಹೊಳೆ ನೀರು ಹರಿಯಲಿದೆ ಎಂದು ಹೇಳಿದರು.
ಗರುಡಾಚಲ, ಜಯಮಂಗಲಿ ಮತ್ತು ಸುವರ್ಣಮುಖಿ ನದಿಗಳಿಗೆ ಅಡ್ಡಲಾಗಿ ಕೊರಟಗೆರೆ ತಾಲೂಕಿನ 10ಕಡೆಗಳಲ್ಲಿ 38ಕೋಟಿ ವೆಚ್ಚದ ಚೇಕ್ಡ್ಯಾಂ ಕಂಬ್ರೀಡ್ಜ್ ಕಾಮಗಾರಿ ಹಾಗೂ 22ಕೋಟಿ ವೆಚ್ಚದಲ್ಲಿ 14ವಿವಿಧ ರಸ್ತೆ ಕಾಮಗಾರಿಗಳಿಗೆ ಅಡಿಗಲ್ಲು ಹಾಕಿದರು. ನಂತರ ಹಾಲು ಉತ್ಪಾದಕರ ಸಹಕಾರ ಸಂಘ, ಅಂಬೇಡ್ಕರ್ ಭವನ, ವಿಎಸ್ಎಸ್ಎನ್ ಕಟ್ಟಡಗಳ ಉದ್ಘಾಟನೆ ನೇರವೇರಿಸಿದರು.
ಕಾರ್ಯಕ್ರಮದಲ್ಲಿ ಎಸ್ಪಿ ಅಶೋಕ್, ಎಸಿ ಗೋಟೊರು ಶಿವಪ್ಪ, ಸಣ್ಣ ನೀರಾವರಿ ಇಇ ಸುರೇಶ್, ಎಇಇ ತಿಪ್ಪೇಸ್ವಾಮಿ, ರಮೇಶ್, ಪಿಡಬ್ಲ್ಯೂಡಿ ಎಸ್ಇ ಜಗದೀಶ್, ಎಇಇ ದೀಪಕ್, ತಾಪಂ ಇಓ ಅಪೂರ್ವ, ಎಸ ಕೆಪಿಸಿಸಿ ಕಾರ್ಯದರ್ಶಿ ದಿನೇಶ್, ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷ ಅರಕೆರೆಶಂಕರ್, ಅಶ್ವತ್ಥನಾರಾಯಣ್, ಯುವಧ್ಯಕ್ಷ ಬೈರೇಶ್, ವಿನಯ್, ಮುಖಂಡರಾದ ಮಹಾಲಿಂಗಪ್ಪ ಸೇರಿದಂತೆ ಇತರರು ಇದ್ದರು.
ಸರಕಾರಿ ಆಸ್ಪತ್ರೆಗಳಿಗೆ ಹೈಟೇಕ್ ಸ್ಪರ್ಶ..
ತೋವಿನಕೆರೆಗೆ ಸರಕಾರದಿಂದ 36ಕೋಟಿಯ ಹೈಟೇಕ್ ಆಸ್ಪತ್ರೆಯು ಉದ್ಘಾಟನೆಗೆ ಸಿದ್ದವಾಗಿದೆ. ಕೊರಟಗೆರೆ ಪಟ್ಟಣಕ್ಕೆ ಹೈಟೇಕ್ ಆಸ್ಪತ್ರೆಗೆ 40ಕೋಟಿಯ ಅನುಧಾನ ಮಂಜೂರಾಗಿದ್ದು ಅಡಿಗಲ್ಲು ಹಾಕಬೇಕಿದೆ. 2026-27ನೇ ಸಾಲಿನ ಬಜೇಟ್ನಲ್ಲಿ ಕೋಳಾಲಕ್ಕೆ ಹೈಟೇಕ್ ಆಸ್ಪತ್ರೆ ಮಂಜೂರಾಗುತ್ತೇ. ಕಾರ್ಮಿಕ ಇಲಾಖೆಯ 32ಕೋಟಿಯ ವಸತಿನಿಲಯ ತೋವಿನಕೆರೆಯಲ್ಲಿ ನಿರ್ಮಾಣ ಆಗುತ್ತೇ ಎಂದು ಗೃಹಸಚಿವರು ತಿಳಿಸಿದರು.
-ಶ್ರೀನಿವಾಸ್ ಕೊರಟಗೆರೆ.
