ನವದೆಹಲಿ: ‘ಲಾಸ್ ಏಂಜಲೀಸ್ 23ನೇ ಭಾರತೀಯ ಚಿತ್ರೋತ್ಸವ’ (IFFLA 2025) ಇದೇ ಮೇ 6ರಿಂದ ಮೇ 10ರವರೆಗೆ ಅಮೆರಿಕದ ಲಾಸ್ ಏಂಜಲೀಸ್ನಲ್ಲಿ ಆಯೋಜನೆಗೊಂಡಿದೆ.
ಚಿತ್ರೋತ್ಸವದಲ್ಲಿ 28 ಸಿನಿಮಾಗಳು, ಒಂದು ಡಾಕ್ಯುಮೆಂಟರಿ ಹಾಗೂ 8 ಶಾರ್ಟ್ ಫಿಲ್ಮ್ಗಳು ಪ್ರದರ್ಶನಗೊಳ್ಳಲಿವೆ ಎಂದು IFFLA ಪ್ರಕಟಣೆ ತಿಳಿಸಿದೆ.
ದಕ್ಷಿಣ ಏಷ್ಯಾದ ಚಲನಚಿತ್ರಗಳ ವೈವಿಧ್ಯಮಯ ಮಿಶ್ರಣದ ಜೊತೆ ಅಂತರರಾಷ್ಟ್ರೀಯ ಚಲನಚಿತ್ರಗಳ ವೈವಿದ್ಯತೆಯನ್ನು ಇಲ್ಲಿ ಬಿಂಬಿಸಲಾಗುತ್ತದೆ ಎಂದು ತಿಳಿಸಿದೆ.
ಪಾಸ್ ಹಾಗೂ ಟಿಕೆಟ್ಗಳನ್ನು www.indianfilmfestival.org ನಲ್ಲಿ ಪಡೆಯಬಹುದು ಎಂದು ಪ್ರಕಟಣೆ ತಿಳಿಸಿದೆ.
