ಆಲೂರು, ಬೇಲೂರು ಸೇರಿ ರಾಜ್ಯದ 53 ತಾಲೂಕುಗಳು ಬರಪೀಡಿತ ಪಟ್ಟಿಗೆ-ಬೆಳೆ ಹಾನಿ ವಾಸ್ತವ ಸಮೀಕ್ಷೆಗೆ ಸರ್ಕಾರ ಆದೇಶ; ಸೆ.19–20ರಂದು ಅಧಿಕಾರಿಗಳಿಂದ ಜಮೀನುಗಳಿಗೆ ಭೇಟಿ

ಹಾಸನದ ಆಲೂರು, ಬೇಲೂರು ಸೇರಿ ರಾಜ್ಯದ 17 ಜಿಲ್ಲೆಗಳ 53 ತಾಲೂಕುಗಳನ್ನು ಬರಪೀಡಿತ ಪಟ್ಟಿಗೆ ಪರಿಗಣಿಸಿ ವಾಸ್ತವಿಕ ಬೆಳೆ ಹಾನಿ ಸಮೀಕ್ಷೆಗೆ ಸರ್ಕಾರ ಆದೇಶಿಸಿದೆ. ಸೆ.19–20ರಂದು ಜಮೀನುಗಳಿಗೆ ಭೇಟಿ ನೀಡಿ ಅಧಿಕಾರಿಗಳು ಬೆಳೆ ನಷ್ಟ ಪರಿಶೀಲಿಸಲಿದ್ದಾರೆ.