ಚೆನ್ನೈ, ಅ.21: ಭಾರತದ ತಂತ್ರಜ್ಞಾನ ಕ್ಷೇತ್ರದಲ್ಲಿ ಮಹತ್ವದ ಮುಂದಳುವರಿಯಾಗಿ, ಐಐಟಿ ಮದ್ರಾಸ್ (IIT Madras) ಸಂಶೋಧಕರ ತಂಡವೊಂದು 7 ನ್ಯಾನೋಮೀಟರ್ ಪ್ರೊಸೆಸರ್ “ಶಕ್ತಿ ಚಿಪ್” ಅಭಿವೃದ್ಧಿಪಡಿಸುವ ಕಾರ್ಯದಲ್ಲಿ ಅಂತಿಮ ಹಂತ ತಲುಪಿದೆ.
ತಜ್ಞರ ಪ್ರಕಾರ, ಈ ಅತ್ಯಾಧುನಿಕ ಪ್ರೊಸೆಸರ್ 2028ರೊಳಗೆ ಫ್ಯಾಬ್ರಿಕೇಶನ್ಗೆ ಸಿದ್ಧವಾಗುವ ಸಾಧ್ಯತೆ ಇದೆ. ಸಂಪೂರ್ಣವಾಗಿ ಭಾರತೀಯ ಸಂಶೋಧಕರಿಂದ ಅಭಿವೃದ್ಧಿಪಡಿಸಲಾದ ಈ ಚಿಪ್ ಭಾರತದ ತಂತ್ರಜ್ಞಾನ ಸ್ವಾವಲಂಬನೆಗೆ ದೊಡ್ಡ ಹೆಜ್ಜೆ ಎಂದು ಪರಿಗಣಿಸಲಾಗಿದೆ.
“ಶಕ್ತಿ ಚಿಪ್” ಎಂಬ ಹೆಸರಿನ ಈ ಪ್ರೊಸೆಸರ್ ಐಐಟಿ ಮದ್ರಾಸ್ನ ಶಕ್ತಿ ಮೈಕ್ರೋಪ್ರೊಸೆಸರ್ ಪ್ರೋಗ್ರಾಂ ಅಡಿಯಲ್ಲಿ ರೂಪುಗೊಂಡಿದೆ. ಈ ಯೋಜನೆಯ ಉದ್ದೇಶ, ಭಾರತದಲ್ಲಿ ವಿಶ್ವದ ಮಟ್ಟದ ಪ್ರೊಸೆಸರ್ ತಂತ್ರಜ್ಞಾನವನ್ನು ಸ್ವಂತವಾಗಿ ನಿರ್ಮಿಸುವುದು.
ನ್ಯಾನೋಮೀಟರ್ ಎಂದರೆ ಏನು?
ಒಂದು ಮೀಟರ್ ಅನ್ನು 100 ಕೋಟಿಗೆ ವಿಭಜಿಸಿದರೆ ಅದರ ಒಂದು ಭಾಗವೇ ನ್ಯಾನೋಮೀಟರ್ (nm). ಇದು ಟ್ರಾನ್ಸಿಸ್ಟರ್ಗಳ ನಡುವಿನ ಅಂತರವನ್ನು ಸೂಚಿಸುತ್ತದೆ.
ಉದಾಹರಣೆಗೆ, 90nm, 28nm ಮತ್ತು 7nm ತಂತ್ರಜ್ಞಾನಗಳು ವಿಭಿನ್ನ ಗಾತ್ರದ ಚಿಪ್ ತಂತ್ರಜ್ಞಾನವನ್ನು ಸೂಚಿಸುತ್ತವೆ. ಎಷ್ಟು ಕಡಿಮೆ nm ಇರಲೋ ಅಷ್ಟು ಹೆಚ್ಚು ಟ್ರಾನ್ಸಿಸ್ಟರ್ಗಳನ್ನು ಒಂದೇ ಚಿಪ್ನಲ್ಲಿಡಬಹುದು, ಪರಿಣಾಮವಾಗಿ ಅದರ ವೇಗ ಮತ್ತು ಕಾರ್ಯಕ್ಷಮತೆ ಹೆಚ್ಚುತ್ತದೆ.
ಪ್ರಸ್ತುತ ಭಾರತದಲ್ಲಿ 28nm ಚಿಪ್ಗಳು ತಯಾರಾಗುತ್ತಿವೆ. ಆದರೆ 7nm ತಂತ್ರಜ್ಞಾನವನ್ನು ಅಭಿವೃದ್ಧಿಪಡಿಸಬಲ್ಲ ದೇಶಗಳು ವಿಶ್ವದಾದ್ಯಂತ ತುಂಬಾ ಕಡಿಮೆ. ಐಐಟಿ ಮದ್ರಾಸ್ನ ಈ ಸಾಧನೆ ಭಾರತವನ್ನು ಆ ಮುಂಚೂಣಿ ರಾಷ್ಟ್ರಗಳ ಸಾಲಿಗೆ ಸೇರಿಸಲಿದೆ ಎಂದು ತಜ್ಞರು ನಿರೀಕ್ಷಿಸುತ್ತಿದ್ದಾರೆ.
ಈ ಯೋಜನೆ ಯಶಸ್ವಿಯಾದರೆ, ಭಾರತದ ಎಲೆಕ್ಟ್ರಾನಿಕ್ ಉತ್ಪಾದನೆ ಮತ್ತು ಆಮದು ಅವಲಂಬನೆಯು ಗಣನೀಯವಾಗಿ ಕಡಿಮೆಯಾಗಲಿದೆ.

Very good, informations are being spread
exlently