ಕೆ.ಆರ್.ಪೇಟೆ: ತಾಲ್ಲೂಕಿನ ಕೃಷ್ಣಾಪುರ ಗ್ರಾಮದ ಸರ್ಕಾರಿ ಪ್ರೌಢಶಾಲೆ ಹಾಗೂ ಸರ್ಕಾರಿ ಪ್ರಾಥಮಿಕ ಶಾಲೆ ಇವರ ಸಂಯುಕ್ತ ಆಶ್ರಯದಲ್ಲಿ ದೇಶದ ಹೆಮ್ಮೆಯ 77ನೇ ವರ್ಷದ ಗಣತಂತ್ರ ಮತ್ತು ಪ್ರಜಾಸತ್ತಾತ್ಮಕ ದಿನವನ್ನು ಗಣರಾಜ್ಯೋತ್ಸವ ದಿನವಾಗಿ ಬಲಿಷ್ಟ ಏಕತೆಯ ದಿನಾಚರಣೆಯನ್ನಾಗಿ ಆಚರಿಸಲಾಯಿತು.

ಶಾಲೆಯ ಎಸ್.ಡಿ.ಎಂ.ಸಿ ಅಧ್ಯಕ್ಷೆ ಲಕ್ಷ್ಮೀ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಶಿಕ್ಷಕ ರಮೇಶ್ ಮತ್ತು ಮುಖಂಡರು ಧ್ವಜಾರೋಹಣ ನೆರವೇರಿಸಿದರು.

ಗ್ರಾಮದ ಮುಖಂಡರಾದ ನಾರಾಯಣಸ್ವಾಮಿ, ಎಸ್ ಡಿ ಎಂ ಸಿ ,ಉಪಾಧ್ಯಕ್ಷರಾದ ಶ್ರೀನಿವಾಸ್, ಸದಸ್ಯರಾದ ಲಕ್ಷ್ಮಿ,ಕುಸುಮ, ಪ್ರಾಥಮಿಕ ಶಾಲೆಯ ಮುಖ್ಯ .ಶಿಕ್ಷಕ ಶಿವನಂಜಪ್ಪ, ಶಿಕ್ಷಕರಾದ ಮಮತ,ಅಧ್ಯಕ್ಷರಾದ ರಶ್ಮಿ ,ಮಕ್ಕಳು ಹಾಜರಿದ್ದರು.
ಮಕ್ಕಳಿಗೆ ಪ್ರೌಢಶಾಲಾ ಶಿಕ್ಷಕರಾದ ಗೋವರ್ಧನ್, ಶಿವನಂಜಪ್ಪ, ನಾರಾಯಣಸ್ವಾಮಿ,ಪ್ರಮೀಳ ಶಿಕ್ಷಕರಾದ ರಾಘವೇಂದ್ರ,ಅಸ್ಪಿಯಾ ತಬಸ್ಸುಂ,ಅಂಜು ಸಿ ಗೌಡ ,ಗ್ರಾಮಸ್ಥರು ,ಬಿಸಿಯೂಟದ ಸಿಬ್ಭಂದಿ ಹಾಜರಿದ್ದರು.
ಮಕ್ಕಳ ದೇಶಭಕ್ತಿ ಗೀತೆಯ ಸಾಂಸ್ಕೃತಿಕ ಕಾರ್ಯಕ್ರಮಗಳು ಗಮನ ಸೆಳೆದವು.

-ಶ್ರೀನಿವಾಸ್ ಆರ್.
