ಕೆ.ಆರ್.ಪೇಟೆ,ಜ.19: ತಾಲ್ಲೂಕು ಬೂಕನಕೆರೆ ಹೋಬಳಿಯ ಬಲ್ಲೇನಹಳ್ಳಿ ಹಾಲು ಉತ್ಪಾದಕರ ಸಹಕಾರ ಸಂಘದ ನೂತನ ಆಡಳಿತ ಮಂಡಳಿಗೆ ಇಂದು ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ ಬೆಂಬಲಿತ 8 ಅಭ್ಯರ್ಥಿಗಳು ಭರ್ಜರಿ ಗೆಲುವು ಸಾಧಿಸಿದ್ದಾರೆ. ಜೆಡಿಎಸ್ ಕೇವಲ ಒಂದು ಸ್ಥಾನ ಪಡೆದಿದೆ.
ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷರಾದ ಬಲ್ಲೇನಹಳ್ಳಿ ರಮೇಶ್, ಪ್ರಥಮ ದರ್ಜೆ (ವಿದ್ಯುತ್ ಹಾಗೂ ಸಿವಿಲ್) ಗುತ್ತಿಗೆದಾರ ಬಿ.ಎಸ್.ರಾಮು, ಪಿ.ಎಲ್.ಡಿ.ಬ್ಯಾಂಕ್ ಅಧ್ಯಕ್ಷ ಕಬ್ಬಲಗೆರೆಪುರ ಪುಟ್ಟಸ್ವಾಮೀಗೌಡ ನೇತೃತ್ವದಲ್ಲಿ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳು ಭರ್ಜರಿ ಗೆಲುವು ಸಾಧಿಸುವ ಮೂಲಕ ಅಧಿಕಾರದ ಚುಕ್ಕಾಣಿ ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ. ಚುನಾವಣೆ ಘೋಷಣೆ ಆಗುತ್ತಿದ್ದಂತೆಯೇ ಕಾಂಗ್ರೆಸ್ ಕಾರ್ಯಕರ್ತರು ಹಾಗೂ ಮುಖಂಡರು ಪಟಾಕಿ ಸಿಡಿಸಿ, ಸಿಹಿ ವಿತರಣೆ ಮಾಡಿ ವಿಜಯೋತ್ಸವ ಮಾಡಿದರು.
ಗೆದ್ದ ಅಭ್ಯರ್ಥಿಗಳ ವಿವರ: ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳಾದ ಆಡುನಿಂಗಣ್ಣನ ಬಿ.ಆರ್.ಮಹೇಶ್, ಬಿ.ಸಿ.ಅಶೋಕ್, ನಿಂಗೇಗೌಡ, ಉಮಾಶಂಕರ್, ಬಿ.ಎಲ್.ಶಿಲ್ಪಪುಟ್ಟರಾಜು, ಸಾವಿತ್ರಮ್ಮಕೃಷ್ಣೇಗೌಡ, ಬಿ.ಎಸ್.ಪುಟ್ಟರಾಜು, ಹಾಗೂ ನರಸಿಂಹಶೆಟ್ಟಿ ಭರ್ಜರಿಗೆ ಗೆಲುವು ಸಾಧಿಸಿದ್ದಾರೆ. ಎಲ್ಲಾ ಸ್ಥಾನಗಳಿಗೆ ಸ್ಪರ್ಧಿಸಿದ್ದ ಜೆಡಿಎಸ್ ಅಭ್ಯರ್ಥಿಗಳ ಪೈಕಿ ಬಿ.ಎಸ್.ಪ್ರಸನ್ನಕುಮಾರ್ ಮಾತ್ರ ಜಯ ಸಾಧಿಸಿದ್ದಾರೆ. ಉಳಿದ ಅಭ್ಯರ್ಥಿಗಳು ಪರಾಜಯಗೊಂಡಿದ್ದಾರೆ.

ನೂತನವಾಗಿ ಆಯ್ಕೆಯಾದ ನಿರ್ದೇಶಕರನ್ನು ಅಭಿನಂದಿಸಿ ಕಾಂಗ್ರೆಸ್ ಮುಖಂಡರಾದ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷರಾದ ಬಲ್ಲೇನಹಳ್ಳಿ ರಮೇಶ್, ಕಾಂಗ್ರೆಸ್ ಯುವ ಮುಖಂಡ ಪ್ರಥಮ ದರ್ಜೆ (ವಿದ್ಯುತ್ ಹಾಗೂ ಸಿವಿಲ್) ಗುತ್ತಿಗೆದಾರ ಬಿ.ಎಸ್.ರಾಮು, ಪಿ.ಎಲ್.ಡಿ.ಬ್ಯಾಂಕ್ ಅಧ್ಯಕ್ಷ ಕಬ್ಬಲಗೆರೆಪುರ ಪುಟ್ಟಸ್ವಾಮೀಗೌಡ ಮಾತನಾಡಿದರು. ಒಬ್ಬರು ನಮ್ಮ ಕಾಂಗ್ರೆಸ್ ಅಭ್ಯರ್ಥಿ ಕಡಿಮೆ ಅಂತರದಲ್ಲಿ ಸೋತಿದ್ದು ಅವರಿಗೆ ಖಾಲಿ ಇರುವ ಸರ್ಕಾರಿ ನಾಮಿನಿ ಸದಸ್ಯ ಸ್ಥಾನಕ್ಕೆ ನೇಮಕ ಮಾಡಿಸುವ ಮೂಲಕ ಅವರಿಗೆ ನ್ಯಾಯ ಕೊಡಿಸುವ ಭರವಸೆಯನ್ನು ಮುಖಂಡರಾದ ಬಲ್ಲೇನಹಳ್ಳಿ ರಮೇಶ್ ನೀಡಿದರು.
ಈ ಸಂದರ್ಭದಲ್ಲಿ ಗ್ರಾಮದ ಮುಖಂಡರಾದ ಪಟೇಲ್ ಸ್ವಾಮಿಗೌಡ, ಪಟೇಲ್ ಮಹದೇವ್, ಯೋಗಣ್ಣ, ಡೈರಿ ಕುಮಾರ್, ಪಿಎಲ್ಡಿ ಬ್ಯಾಂಕ್ ನಿರ್ದೇಶಕ ಶೀಳನೆರೆ ರಾಮೇಗೌಡ, ಅಣ್ಣೇಚಾಕನಹಳ್ಳಿ ನಾಗರಾಜು, ಹೊನ್ನೇನಹಳ್ಳಿ ಕೃಷ್ಣೇಗೌಡ, ಕಾಶಿಮುರುಕನಹಳ್ಳಿ ಪ್ರೀತಮ್, ಬಲ್ಲೇನಹಳ್ಳಿ ಪೆಪ್ಸಿ ದಯಾನಂದ್, ಬಿ.ಎನ್.ಮಹೇಶ್, ಜಯರಾಂ, ನಂಜಪ್ಪನ ಕುಮಾರ್, ಶಿವಣ್ಣ, ಸೊಸೈಟಿ ಅಧ್ಯಕ್ಷ ಕುಮಾರ್, ರಾಮಕೃಷ್ಣೇಗೌಡ, ಶ್ರೀನಿವಾಸ್, ಆಡುನಿಂಗಣ್ಣನಸ್ವಾಮಣ್ಣ, ಪುಟ್ಟರಾಜು, ದೇವರಸು, ಆನಂದೇಗೌಡ, ಸಿದ್ದಪ್ಪನ ಕೃಷ್ಣೇಗೌಡ, ಸುರೇಶ್ ಬಿ,ಹೇಮಂತ್, ರೇವಣ್ಣ, ಬಾರೆ ತಮ್ಮಣ್ಣ, ನಾಗರಾಜು, ಸೋಮು, ಕಾರ್ತೀಕ್, ಸಂತೋಷ್, ಮೋಹನ್, ಮಹೇಶ್, ರಾಮು, ಕುಮಾರ್, ನಾಗರಾಜು, ದಿನೇಶ್, ಬಸಂತ, ಮಾಜಿ ಅಧ್ಯಕ್ಷೆ ವಿನೋದಮ್ಮ, ನವೀನ್ ಕುಮಾರ್, ಪುಟ್ಟಪ್ಪ ಟೆಂಪೋ, ನ್ಯಾಯ ಬೆಲೆ ಅಂಗಡಿ ರಮೇಶ್, ಕುಮಾರ್, ಶಿವಲಿಂಗಣ್ಣ, ರಾಮಣ್ಣ, ಮಂಡಿ ಮಹದೇವ್, ಕೆ ಟಿ ಕುಮಾರ್, ಸುಬ್ಬಣ್ಣ ಸುಧಾಕರ್, ವಿಶ್ವನಾಥ್, ರೂಪೇಶ್, ಗಣೇಶ್, ಕಟ್ಟೇರಿ ಚಂದ್ರು, ಸತೀಶ್, ಶಾಂತ, ಕರುಣಾಕರ, ಹೇಮಂತ್ ಗೌಡ, ಸೇರಿದಂತೆ ಗ್ರಾಮದ ಹಿರಿಯ ಮುಖಂಡರು, ಯುವಕರು ಸೇರಿದಂತೆ ಇತರರು ಹಾಜರಿದ್ದರು.
ಚುನಾವಣಾಧಿಕಾರಿಯಾಗಿ ವಾಸಿಂಪಾಷಾ ಕಾರ್ಯನಿರ್ವಹಣೆ ಮಾಡಿದರು.
– ಶ್ರೀನಿವಾಸ್ ಆರ್.
