ಕರ್ನಾಟಕದ 99% ಮಕ್ಕಳಿಗೆ ಮೊಬೈಲ್ ಗೀಳು: ಹೊಸ ಅಧ್ಯಯನದ ಎಚ್ಚರಿಕೆ!

ಹೊಸ ಸಮೀಕ್ಷೆಯ ಪ್ರಕಾರ, ಕರ್ನಾಟಕದ ಶೇ.99ರಷ್ಟು ಮಕ್ಕಳಿಗೆ ಮೊಬೈಲ್‌ ವ್ಯಸನವಾಗಿರುವ ಆತಂಕಕಾರಿ ಸ್ಥಿತಿ ಬೆಳಕಿಗೆ ಬಂದಿದೆ. ಆನ್ಲೈನ್‌ ಕ್ಲಾಸುಗಳಿಂದ ಆರಂಭವಾದ ಗಾಜಿನ ಪರದೆ ಬಳಕೆ, ಇದೀಗ ಆಟಗಳು, ಯೂಟ್ಯೂಬ್‌, ಸಾಮಾಜಿಕ ಜಾಲತಾಣಗಳಿಂದ ದೂರಹೋಗಲಾಗದ ಮಟ್ಟಿಗೆ ತಲುಪಿದೆ. ಇದು ಮಕ್ಕಳ ಭಾವನೆ, ನಿದ್ರೆ, ಆರೋಗ್ಯ ಮತ್ತು ಓದು ಮೇಲೆ ಗಂಭೀರ ಪರಿಣಾಮ ಬೀರುತ್ತಿದೆ ಎಂಬ ಎಚ್ಚರಿಕೆಯನ್ನು ತಜ್ಞರು ನೀಡಿದ್ದಾರೆ.