ಈಗಿನ ಕಾಲದಲ್ಲಿ ವೃದ್ದರಿಗೆ ಮಾತ್ರವಲ್ಲ ಯುವ ಸಮೂಹಕ್ಕೂ ಕೂಡ ಈ ನಡಿಗೆ ಎಂಬುದು ಅನಿವಾರ್ಯವಾಗಿದೆ. ಏಕೆಂದರೆ ದಿನದಿಂದ ದಿನಕ್ಕೆ ವಾತಾವರಣದ ಬದಲಾವಣೆ, ಜೀವನಶೈಲಿ, ಹಾಗೂ ಒತ್ತಡದ ಕೆಲಸ ಇವುಗಳನ್ನು ದೇಹದಲ್ಲಿರುವ ಸಾಮಾರ್ಥ್ಯವನ್ನು ಕಡಿಮೆ ಮಾಡುತ್ತಿದೆ, ಇದನ್ನು ತಪ್ಪಿಸಲು ನಾವು ನಡಿಗೆ ವ್ಯಾಯಾಮದಂತಹ ಚಟುವಟಿಕೆಯನ್ನು ಮಾಡುತ್ತದೆ.
ಆದರೆ ನಡಿಗೆಗಳು ಹೇಗಿರಬೇಕು. ನಿಮ್ಮ ಅನುಕೂಲಕ್ಕೆ ತಕ್ಕಂತೆ ಇರಬಾರದು. ಈ ನಡೆಯುದಾದರೆ ಜಪನ್ (Japanese fitness ) ಜನರು ನಡೆಯುವಂತೆ ನಡೆಯಿರಿ. ಹೌದು ಈ ಬಗ್ಗೆ ಗ್ಯಾಸ್ಟ್ರೋಎಂಟರಾಲಜಿಸ್ಟ್ ಡಾ. ಸೇಥಿನಡಿಗೆ ಸಂಬಂಧಿಸಿದಂತೆ ಕೆಲವೊಂದು ವಿಚಾರಗಳನ್ನು ಇನ್ಸ್ಟಾದಲ್ಲಿ ಹೇಳಿದ್ದಾರೆ. ಸಾಮಾನ್ಯ ನಡಿಗೆಯೂ ಸದೃಢವಾಗಿರಿಸುತ್ತದೆ ಮತ್ತು ರಕ್ತದೊತ್ತಡದಂತಹ ಅನೇಕ ಸಮಸ್ಯೆಗಳು ಕಡಿಮೆಯಾಗುತ್ತವೆ. ಇದರ ಜತೆಗೆ ಜೀರ್ಣಕ್ರಿಯೆ, ರಕ್ತದ ಹರಿವನ್ನು ಸುಧಾರಿಸುತ್ತದೆ. ಆದರೆ ಜಪಾನೀಸ್ ವಾಕಿಂಗ್ನಿಂದ ಅನೇಕ ಪ್ರಯೋಜನಗಳು ಇದೆ. ಅದು ಹೇಗೆ ಎಂಬ ಬಗ್ಗೆ ಡಾ. ಸೇಥಿ ವಿವರಿಸಿದ್ದಾರೆ.
ಜಪಾನೀಸ್ ವಾಕಿಂಗ್ ತಂತ್ರ:
ಜಪಾನಿನ ಜನರು ತಮ್ಮ ಆರೋಗ್ಯವನ್ನು ಉತ್ತಮವಾಗಿಡಲು ಹೊಸ ರೀತಿಯ ನಡಿಗೆ ತಂತ್ರವನ್ನು ಅಭಿವೃದ್ಧಿಪಡಿಸಿದ್ದಾರೆ. ಇದನ್ನು ಮಧ್ಯಂತರ ನಡಿಗೆ ಎಂದು ಹೆಸರಿಸಲಾಗಿದೆ. ಈ ನಡಿಗೆಯ ಪ್ರಕಾರ ಮೊದಲ ಮೂರು ನಿಮಿಷಗಳ ಕಾಲ ನಿಧಾನವಾಗಿ ನಡೆಯಬೇಕು. ನಂತರದ ಮೂರು ನಿಮಿಷಗಳ ಕಾಲ ತುಂಬಾ ವೇಗವಾಗಿ ನಡೆಯಬೇಕು. ಪ್ರತಿದಿನ 30 ನಿಮಿಷಗಳ ಕಾಲ ಹೀಗೆ ಮಾಡಬೇಕು. ನೀವು ಪ್ರತಿದಿನ ಅರ್ಧ ಗಂಟೆ ಮಧ್ಯಂತರ ನಡಿಗೆ ಮಾಡಿದರೆ ಆರೋಗ್ಯದಲ್ಲಿ ಒಂದು ಮ್ಯಾಜಿಕ್ ಆಗುವುದು ಖಂಡಿತ. ಈ ರೀತಿಯ ನಡಿಗೆ ಹೃದಯರಕ್ತನಾಳದ ಆರೋಗ್ಯವನ್ನು ಸುಧಾರಿಸುತ್ತದೆ ಮತ್ತು ಸದೃಢವಾಗಿರಿಸುತ್ತದೆ ಎಂದು ಡಾ. ಸೇಥಿ ಹೇಳುತ್ತಾರೆ.
