
ನೋಂದಣಿ ಮತ್ತು ಮುದ್ರಾಂಕ ಇಲಾಖೆಯ ಆಸ್ತಿ ನೋಂದಣಿಗೆ ಸಂಬಂಧಿಸಿದ 2.0 ತಂತ್ರಾಂಶ ವ್ಯವಸ್ಥೆಯಲ್ಲಿನ ಇತ್ತೀಚಿನ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಿ ತನಿಖೆಗೆ ಕ್ರಮವಹಿಸಲಾಗಿದೆ ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ತಿಳಿಸಿದ್ದಾರೆ.
ಆಸ್ತಿ ನೋಂದಣಿ ಪ್ರಕ್ರಿಯೆಗಳನ್ನು ಅಡ್ಡಿಪಡಿಸಲು ನಮ್ಮ ಐಟಿ ವ್ಯವಸ್ಥೆಯ ಮೇಲೆ ಉದ್ದೇಶಪೂರ್ವಕ ದಾಳಿ ನಡೆದಿದ್ದರೆ ಅಂತಹ ದಾಳಿಕೋರ ವ್ಯಕ್ತಿ/ ಸಂಸ್ಥೆಗಳು ಯಾರು ಎಂಬುದನ್ನು ತನಿಖೆ ನಡೆಸಲು ಈಗಾಗಲೇ ಎಐಆರ್ ದಾಖಲಿಸಲಾಗಿದೆ.
ಕಳೆದ ಎರಡು ತಿಂಗಳಿಂದ ಸರ್ವರ್ ಡೌನ್ ಸಮಸ್ಯೆಯಿಂದ ಆಸ್ತಿ ನೋಂದಣಿ ವಹಿವಾಟಿನ ಮೇಲೆ ಅಡ್ಡ ಪರಿಣಾಮಬೀರಿತ್ತು. ಕಾವೇರಿ 2.0 ತಂತ್ರಾಂಶದ ಮೇಲೆ ಸೈಬರ್ ದಾಳಿಯಿಂದಾಗಿ ೆಬ್ರವರಿ ಮೊದಲ ವಾರದಿಂದ ಆಸ್ತಿ ನೋಂದಣಿ ವ್ಯತ್ಯಯವಾಗಿತ್ತು.
ಇದರಿಂದಾಗಿ ಉಪ ನೋಂದಣಾಧಿಕಾರಿ ಕಚೇರಿಗಳಿಗೆ ಜನರ ಅಲೆದಾಟ, ಅಧಿಕಾರಿಗಳಿಗೆ ಹೆಚ್ಚಿದ ಒತ್ತಡ, ಸರ್ಕಾರದ ಖಜಾನೆಗೆ ಆದಾಯ ಕೂಡ ಖೋತಾ ಆಯಿತು. ನಿರಂತರ ಪರಿಶ್ರಮದಿಂದ ಈ ಸಮಸ್ಯೆ ಬಗೆಹರಿಸಲಾಗಿದ್ದು, ಕಾವೇರಿ 2.0 ತಂತ್ರಾಂಶವು ಸೋಮವಾರದಿಂದ ಎಂದಿನಂತೆ ಕಾರ್ಯನಿರ್ವಹಣೆ ಆರಂಭಿಸಿದ್ದನ್ನು ಉಲ್ಲೇಖಿಸಬಹುದು