ಐಪಿಎಲ್ 2025ರಲ್ಲಿ ಆರ್ಸಿಬಿ (RCB) ಹಾಗೂ ವಿರಾಟ್ ಕೊಹ್ಲಿ 18 ವರ್ಷಗಳ ನಿರೀಕ್ಷೆಗೆ ಪೂರ್ಣವಿಟ್ಟು ಕೊನೆಗೂ ಚಾಂಪಿಯನ್ ಆಗಿ ಹೊರಹೊಮ್ಮಿದರು. ಈ ಐತಿಹಾಸಿಕ ಕ್ಷಣವನ್ನು ನೋಡಿ ಅಲ್ಲು ಅರ್ಜುನ್ ಅವರ ಪುತ್ರ ಅಯಾನ್ ಭಾವುಕರಾಗಿ ಕಣ್ಣೀರಿಟ್ಟರು.
ಆರ್ಸಿಬಿಯ ವಿಜಯದ ಸಂತೋಷದಲ್ಲಿ ಅಯಾನ್ ತಮಗೇ ತಿಳಿಯದ ರೀತಿಯಲ್ಲಿ ನೆಲಕ್ಕೆ ಬಿದ್ದು ನಮಸ್ಕಾರ ಹಾಕಿದರು. ಬಳಿಕ ಖುಷಿಯಲ್ಲಿ ಏನು ಮಾಡಬೇಕು ಎಂಬುದು ಅರಿಯದೇ ತಲೆಯ ಮೇಲೆ ತಣ್ಣೀರನ್ನು ಸುರಿದುಕೊಂಡು ಹರ್ಷ ವ್ಯಕ್ತಪಡಿಸಿದ್ದಾರೆ.
ಈ ಅಪರೂಪದ ಭಾವನಾತ್ಮಕ ಕ್ಷಣದ ವಿಡಿಯೋವನ್ನೆಲ್ಲಾ ಅಲ್ಲು ಅರ್ಜುನ್ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ತಮ್ಮ ಮಗನ ಭಾವೋದ್ರೇಕದ ಪ್ರತಿಕ್ರಿಯೆ ಎಲ್ಲರ ಮನ ಗೆದ್ದು, ವಿಡಿಯೋ ವೈರಲ್ ಆಗಿದೆ.
