ಕೆ.ಆರ್.ಪೇಟೆ– ಬಿಜಿಎಸ್ ಶಿಕ್ಷಣ ಸಂಸ್ಥೆ ಗುಣಮಟ್ಟದ ಶಿಕ್ಷಣದ ಜೊತೆಗೆ ನಮ್ಮ ಸಂಸ್ಕೃತಿ ಸಂಸ್ಕಾರದ ಉಳಿವಿನ ಕೇಂದ್ರ ಸ್ಥಳವಾಗಿದೆ ಎಂದು ಮಾಜಿ ಶಾಸಕ ಬಿ.ಪ್ರಕಾಶ್ ಹೇಳಿದರು.
ಅವರು ತಾಲ್ಲೂಕಿನ ಕಸಬಾ ಹೋಬಳಿಯ ಹೇಮಗಿರಿ ಬಿಜಿಎಸ್ ಶಾಲಾ ಮಕ್ಕಳಿಗೆ ಅಕ್ಷರಾಭ್ಯಾಸ ಹಾಗೂ ಪರಿಸರ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ಬಿಜಿಎಸ್ ಶಿಕ್ಷಣ ಸಂಸ್ಥೆ ಎಂದರೆ ಮೊದಲಿಗೆ ನೆನಪಾಗುವುದೇ ಗುಣಮಟ್ಟದ ಶಿಕ್ಷಣದ ಜೊತೆಗೆ ಒಂದು ವಿಶೇಷ ಸಂಸ್ಕಾರ ಸಂಸ್ಕೃತಿ ಧಾರ್ಮಿಕ ಕಾರ್ಯಕ್ರಮಗಳ ತುಂಬಿರುವ ಕಣಜ, ಹಾಗೂ ಹೇಮಗಿರಿ ಶಾಖಾ ಮಠದ ಪ್ರಧಾನ ಕಾರ್ಯದರ್ಶಿಗಳಾದ ಡಾ|| ಜೆ.ಎನ್ ರಾಮಕೃಷ್ಣೇಗೌಡ ಮಾರ್ಗದರ್ಶನದಲ್ಲಿ ಪ್ರತಿಯೊಂದು ವಿಶೇಷ ವಿಭಿನ್ನ ಅರ್ಥಪೂರ್ಣ ಕಾರ್ಯಕ್ರಮ ರೂಪಿಸಲಾಗುತ್ತಿದೆ.
ನಮ್ಮ ಪೂರ್ವಿಕರು ಅಕ್ಷರ ಕಲಿಯುವಾಗ ಗುರುಕುಲದಲ್ಲಿ ಮಲಿನ ಮೇಲೆ – ಹಾಗೂ ಅಕ್ಕಿಯ ಮೇಲೆ ಅಕ್ಷರ ಅಭ್ಯಾಸ ಮಾಡುತ್ತಿದ್ದರು.ದೇಶ ಅಮೃತ ಮಹೋತ್ಸವ ಆಚರಣೆ ಮಾಡುವಂತಹ ಸಂದರ್ಭದಲ್ಲಿ ಇಂತಹ ಕಾರ್ಯಕ್ರಮಗಳು ಅವಶ್ಯಕವಾಗಿದೆ. ಜಗತ್ತು ನಿಂತಿರುವುದು ಅಕ್ಷರದಿಂದ ಆದಿ, ಅಂತ್ಯ ಯಾವುದಕ್ಕೆ ಇಲ್ಲವೋ ಅದು ಅಕ್ಷರವಾಗಿದೆ. ಈ ಜಗತ್ತು ಅಕ್ಷರದಿಂದ ಜಗತ್ತು ಉಗಮವಾಗಿದೆ. ಕಣ್ಣಿಗೆ ಕಾಣುವ ಸಕಲ ಜೀವರಾಶಿಗಳಲ್ಲೂ ಅಕ್ಷರ ಅಡಕವಾಗಿದೆ’ ಅನ್ನ ಕೊಡುವ ಯಾವುದೇ ವಿದ್ಯೆಯನ್ನು ಕಲಿಯಲು ಅಕ್ಷರ ಬೇಕು. ಅದು ಸುಲಭವಾಗಿ ಧಕ್ಕುವುದಿಲ್ಲ. ಸಾಕಷ್ಟು ಅಭ್ಯಾಸ ಮಾಡಬೇಕು’ಮಕಳಿಗೆ ಇದು ಸಂಭ್ರಮದ ದಿನ ಮಕ್ಕಳು ಆರಂಭದಲ್ಲಿ ತಮ್ಮ ತಂದೆ ತಾಯಿಗಳಿಂದ ಅಕ್ಷರಾಭ್ಯಾಸವನ್ನು ಪ್ರಾರಂಭಿಸುತ್ತಾರೆ. ಮಕ್ಕಳಿಗೆ ಯಾರೇ ಶಿಕ್ಷಣ ಕಲಿಸಿದರೂ, ಮೊದಲು ತಾಯಿಯಿಂದ ಕಲಿಯುವಂತಹ ಶಿಕ್ಷಣಕ್ಕೆ ಬೆಲೆ ಕಟ್ಟಲು ಸಾಧ್ಯವಿಲ್ಲ ಎಂದರು.

ಬಳಿಕ ಕಾರ್ಯಕ್ರಮದ ನೇತೃತ್ವ ವಹಿಸಿ ಮಾತನಾಡಿದ ಹೇಮಗಿರಿ ಶಾಖಾ ಮಠದ ಪ್ರಧಾನ ಕಾರ್ಯದರ್ಶಿ ಡಾ:ಜೆ.ಎನ್ ರಾಮಕೃಷ್ಣೇಗೌಡ ಸಂಸ್ಕಾರ ಸಂಸ್ಕೃತಿಯನ್ನು ಮೈಗೂಡಿಸಿ ಕೊಳ್ಳುವಂತಹ ಮಕ್ಕಳು ಜೀವನದಲ್ಲಿ ಉತ್ತಮ ಪ್ರಜೆಗಳಾಗಿ ಹೊರಹೊಮ್ಮಲು ಯಾಗುತ್ತದೆ.
ಬಿಜಿಎಸ್ ಮಠದ ಶಿಕ್ಷಣ ಸಂಸ್ಥೆಯಾಗಿರುವುದರಿಂದ ಮಕ್ಕಳಿಗೆ ಶಿಕ್ಷಣ ಜತೆಗೆ ಸಂಸ್ಕಾರವನ್ನು ಬೆಳೆಸುವ ಕೆಲಸ ಮಾಡುತಿದ್ದೇವೆ.ಅದೇ ಮಾದರಿಯಲ್ಲಿ ಮಕ್ಕಳಿಗೆ ಸಂಸ್ಕಾರ, ಮೌಲ್ಯಗಳನ್ನು ಕಲಿಸಿ ಸನ್ಮಾರ್ಗದತ್ತ ನಡೆಯುವಂತೆ ಪ್ರೇರೇಪಿಸುವ ಜೊತೆಗೆ ಗುಣಮಟ್ಟದ ಶಿಕ್ಷಣ ನೀಡುವುದು ಶಿಕ್ಷಕರ ಮಹತ್ತರ ಜವಾಬ್ದಾರಿಯಾಗಿದೆ, ವಿದ್ಯಾರ್ಥಿ ದಿಸೆಯಲ್ಲಿಯೇ ಮೌಲ್ಯಗಳನ್ನು ಮೈಗೂಡಿಸಿಕೊಂಡು ದೇಶದ ಭದ್ರ ಬುನಾದಿಗೆ ಹಗಲಿರುಳು ಶ್ರಮಿಸಬೇಕು.ಗ್ರಾಮೀಣ ಭಾಗದ ಮಕ್ಕಳಿಗೆ ಅನುಕೂಲವಾಗಲೆಂಬ ಮತ್ತು ಗುಣಮಟ್ಟದ ಶಿಕ್ಷಣ ಪಡೆಯಲೆಂಬ ಸದುದ್ದೇಶದಿಂದ ಬಿಜಿಎಸ್ ಸಂಸ್ಥೆ ವತಿಯಿಂದ ಆಧುನಿಕ ಸೌಲಭ್ಯಗಳನ್ನು ಕಲ್ಪಿಸಲಾಗಿದ್ದು ವಿದ್ಯಾರ್ಥಿಗಳು ಪ್ರಯೋಜನ ಪಡೆಯಬೇಕು ಎಂದರು.
ಕಾರ್ಯಕ್ರಮದಲ್ಲಿ ಅಕ್ಷರ ಅಭ್ಯಾಸ ಪೂಜಾ ಕಾರ್ಯಕ್ರಮದಲ್ಲಿ ಐವತ್ತಕ್ಕೂ ಹೆಚ್ಚು ಪುಟ್ಟ ಮಕ್ಕಳು ತಮ್ಮ ಪೋಷಕರ ಜೊತೆ ಪಾಲ್ಗೊಂಡಿದ್ದರು. ಶ್ರೀ ಸರಸ್ವತಿಯ ಐದು ಅವತಾರಗಳ ವೇಷಭೂಷಣ ಧರಿಸಿ ವೇದಿಕೆಗೆ ಮೆರವ ತುಂಬಿದರು.
ಕಾರ್ಯಕ್ರಮದಲ್ಲಿ ಕಸಾಪ ಮಾಜಿ ಅಧ್ಯಕ್ಷ ಹರಿಚರಣ್ ತಿಲಕ್, ಪುರಸಭಾ ಮಾಜಿ ಸದಸ್ಯ ಕೆ ಆರ್ ನೀಲಕಂಠ, ಅಗ್ರಹಾರಬಾಚಹಳ್ಳಿ ಗ್ರಾ. ಪಂ ಸದಸ್ಯ ಶ್ರೀನಿವಾಸ್ ಸಜ್ಜನ್, ಮುಖಂಡ ಮಡುವಿನಕೂಡಿ ಉಮೇಶ್, ಹೇಮಗಿರಿ ವಿಡಿಯೋ ಶಿಕ್ಷಣ ಸಂಸ್ಥೆಯ ಮುಖ್ಯ ಶಿಕ್ಷಕರು ಸೇರಿದಂತೆ ವಿದ್ಯಾರ್ಥಿಗಳಿದ್ದರು.
ಸುದ್ದಿಯೊಂದಿಗೆ ಮನು ಮಾಕವಳ್ಳಿ ಕೆ ಆರ್ ಪೇಟೆ
