ಬೆಂಗಳೂರಿನ ಯಲಹಂಕ ವಾಯುಪಡೆ ನೆಲೆಯಲ್ಲಿ ಇಂದಿನಿಂದ 5 ದಿನಗಳ ಕಾಲ ಏರೋ ಇಂಡಿಯಾ ಶೋ ನಡೆಯಲಿದ್ದು, ಏಷ್ಯಾದ ಅತಿದೊಡ್ಡ ವೈಮಾನಿಕ ಪ್ರದರ್ಶನಕ್ಕೆ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ಚಾಲನೆ ನೀಡಲಿದ್ದಾರೆ.
ಏರೋ ಇಂಡಿಯಾದಲ್ಲಿ ಒಟ್ಟು 90 ದೇಶಗಳು ಪಾಲ್ಗೊಳ್ಳುತ್ತಿದ್ದು, ಏರ್ ಶೋದಲ್ಲಿ 70 ಕ್ಕೂ ಹೆಚ್ಚು ಪ್ರದರ್ಶನ ನೀಡಲಿರುವ ಯುದ್ದ ವಿಮಾನ, ಸರಕು ,ತರಬೇತಿ ವಿಮಾನಗಳು.
ಏರ್ ಶೋ ನೋಡಲು 5 ದಿನಗಳಲ್ಲಿ 7 ಲಕ್ಷ ಜರು ಆಗಮಿಸುವ ನಿರೀಕ್ಷೆ ಇದೆ.
ಏರ್ ಶೋ 2025 ಫೆಬ್ರವರಿ 10ರಿಂದ ಫೆಬ್ರವರಿ 14ರ ವರೆಗೆ ಪ್ರತಿದಿನವೂ ಬೆಳಿಗ್ಗೆ 9ರಿಂದ ಸಂಜೆ 6ರವರೆಗೆ ನಡೆಯಲಿದೆ. ಫೆಬ್ರವರಿ 13 ಹಾಗೂ 14ರಂದು ಸಾರ್ವಜನಿಕರಿಗೆ ಅವಕಾಶ ಇರಲಿದೆ.
ಈ ಮಾರ್ಗದಲ್ಲಿ ಸಂಚಾರ ನಿರ್ಬಂಧ
ಈ ಬಗ್ಗೆ ಪತ್ರಿಕಾ ಪ್ರಕಟಣೆಯಲ್ಲಿ ಬೆಂಗಳೂರು ನಗರ ಸಂಚಾರ ಪೊಲೀಸರು ಮಾಹಿತಿ ಹಂಚಿಕೊಂಡಿದ್ದು, ಬೆಂಗಳೂರು ನಗರ ಯಲಹಂಕ ಸಂಚಾರ ಪೊಲೀಸ್ ಠಾಣಾ ವ್ಯಾಪ್ತಿಯ ಯಲಹಂಕ ವಾಯುಸೇನಾ ನೆಲೆಯಲ್ಲಿ ದಿನಾಂಕ: 10-02-2025 ರಿಂದ ದಿನಾಂಕ:14-02-2025 ರವರೆಗೆ ಪ್ರತಿಷ್ಠಿತ ಏರೋ ಇಂಡಿಯಾ- 2025 ವೈಮಾನಿಕ ಪ್ರದರ್ಶನವನ್ನು ಹಮ್ಮಿಕೊಳ್ಳಲಾಗಿರುತ್ತದೆ ಎಂದು ತಿಳಿಸಿದೆ.

ಟಿಕೆಟ್ ದರ ಎಷ್ಟು?
ಭಾರತೀಯರಿಗೆ 2,500 ರೂಪಾಯಿ ಇದ್ದರೆ, ವಿದೇಶಿಗರಿಗೆ 50 ಯುಎಸ್ ಡಾಲರ್ ಇರಲಿದೆ.
ಎಡಿವಿಎ ಪಾಸ್: ಭಾರತೀಯರಿಗೆ 1,000 ರೂ
ವಿದೇಶಿಗರಿಗೆ 50 ಯುಎಸ್ ಡಾಲರ್
ವ್ಯಾಪಾರ ಪಾಸ್ : ಭಾರತೀಯರಿಗೆ 5,000 ರೂ.
ವಿದೇಶಿಗರಿಗೆ : 50 ಯುಎಸ್ ಡಾಲರ್ ಇರಲಿದೆ.
ಏರ್ ಶೋ 2025ರ ಟಿಕೆಟ್ ಬುಕ್ ಮಾಡುವುದು ಹೇಗೆ?
ನೀವು ಮೊದಲು ಏರೋ ಇಂಡಿಯಾದ ವೆಬ್ಸೈಟ್ aeroindia.gov.in ಅನ್ನು ಓಪನ್ ಮಾಡಬೇಕು
ವೆಬ್ಸೈಟ್ನ ಹೋಮ್ ಪೇಜ್ನಲ್ಲಿ ಟಿಕೆಟ್ಸ್ ಅಂತ ಕಾಣಿಸುತ್ತೆ. ಅಲ್ಲಿ ವಿಸಿಟರ್ಸ್ ರಿಜಿಸ್ಟ್ರೇಶನ್ ಎಂಬ ಆಯ್ಕೆಯ ಮೇಲೆ ಕ್ಲಿಕ್ ಮಾಡಿ.
ಯಾವ ಪಾಸ್ ಬೇಕು ಎಂದು ಆಯ್ಕೆ ಮಾಡಬೇಕು.
ನಿಮ್ಮ ಹೆಸರು ಹಾಗೂ ಮೊಬೈಲ್ ನಂಬರ್, ಅಗತ್ಯ ವಿವರಗಳನ್ನು ಆಪ್ ಲೋಡ್ ಮಾಡಬೇಕು.
ಬಳಿಕ ಹಣ ಪಾವತಿ ಮಾಡಿ. ಸಬ್ಮಿಟ್ ಬಟನ್ ಮೇಲೆ ಕ್ಲಿಕ್ ಮಾಡಿದ್ರೆ ಟಿಕೆಟ್ ಬುಕ್ ಆಗಲಿದೆ.