ಕಲ್ಲು ಚೂರಾಗಿ
ಆಯಿತದೇ ಮರಳು
ಉಸುಕು ಒಂದಾಗಿ
ಆಯಿತದೇ ಮನೆ-ನೆರಳು!
ಛಿದ್ರಗೊಳ್ಳದೇ ಮೋಡ_
ಸುರಿಯುವುದೆಲ್ಲಿ ಮಳೆ?
ಯುದ್ಧ ವೈರುಧ್ಯಗಳ ಕೂಡ
ಕರಗಿದಲ್ಲೆಲ್ಲಾ ಹಸಿರು ಇಳೆ!
ಆತ್ಮರಕ್ಷಣೆಯ ಆಯುಧಗಳೆಲ್ಲ
ಆತ್ಮಘಾತುಕರ ಕೈಗೆ ಸಿಕ್ಕಿವೆ…..
ಒಳಿತಿಗಾಗಿಯೆ ಅಳಿಯುವುದೆಲ್ಲ
ನಂಬು.. ನಿನ್ನ ನೀನೇ ನಂಬು ಮನವೇ!
ಅವರವರ ರಾಜ್ಯದಲ್ಲಿ ರಾಕ್ಷಸರು ಕೂಡ ದೇವರೇ!
ರಾವಣನದು ಒಂದೇ ಮುಖ! ರಾಮನಿಗೆ ಹತ್ತಾರು! ಖರೆ!!
**. ಚಂಸು
