ನವದೆಹಲಿ, ಜೂನ್ 18: ರಾಷ್ಟ್ರೀಯ ಹೆದ್ದಾರಿಗಳಲ್ಲಿ ತಡೆರಹಿತ, ಸುಲಭ ಹಾಗೂ ಆರ್ಥಿಕ ಪ್ರಯಾಣ ಸಾಧ್ಯವಾಗಿಸುವ ನಿಟ್ಟಿನಲ್ಲಿ ಮಹತ್ವದ ಘೋಷಣೆಯೊಂದನ್ನು ಕೇಂದ್ರ ಸಾರಿಗೆ ಸಚಿವ ನಿತಿನ್ ಗಡ್ಕರಿ ಅವರು ಮಾಡಿದ್ದಾರೆ. ಅವರು ಪರಿಚಯಿಸಿರುವ ಹೊಸ ಯೋಜನೆಯ ಪ್ರಕಾರ, FASTag ಆಧಾರಿತ ವಾರ್ಷಿಕ ಪಾಸ್ ವ್ಯವಸ್ಥೆಯನ್ನು ಈ ವರ್ಷದ ಆಗಸ್ಟ್ 15ರಿಂದ ಜಾರಿಗೆ ತರಲಾಗುತ್ತಿದೆ.
ಈ ವಾರ್ಷಿಕ ಪಾಸ್ ಬೆಲೆ ₹3,000 ಆಗಿದ್ದು, ಇದು ಸಕ್ರಿಯಗೊಳಿಸಿದ ದಿನಾಂಕದಿಂದ ಒಂದು ವರ್ಷ ಅಥವಾ 200 ಟ್ರಿಪ್ಗಳವರೆಗೆ (ಯಾವುದು ಮೊದಲೋ ಆವರೆಗೆ) ಮಾನ್ಯವಾಗಿರಲಿದೆ. ಈ ಸೌಲಭ್ಯವು ವಾಣಿಜ್ಯ ವಾಹನಗಳಿಗೆ ಅನ್ವಯಿಸದ, ಕಾರು, ಜೀಪ್ ಮತ್ತು ವ್ಯಾನ್ಗಳಿಗೆ ಮಾತ್ರ ಸೀಮಿತವಾಗಿರುತ್ತದೆ.
ಪಾಸಿನ ಮೂಲಕ ಪ್ರಯಾಣಿಕರು ಟೋಲ್ಗೇಟ್ನಲ್ಲಿ ನಿರಂತರ ನಿಲ್ಲುವ ಅಗತ್ಯವಿಲ್ಲದೆ ತ್ವರಿತ ಪ್ರಯಾಣ ಮಾಡಬಹುದು. ಇದರಿಂದ ವಾಹನ ಚಾಲಕರಿಗೆ ಸಮಯ, ಹಣ ಉಳಿತಾಯವಾಗುವುದರ ಜೊತೆಗೆ ರಸ್ತೆಯಲ್ಲಿ ಹೂಡಿಕೆ ಮಾಡಿದವರಿಗೆ ನಿಗದಿತ ಆದಾಯವೂ ಖಚಿತವಾಗಲಿದೆ.
ಉಳಿತಾಯ ಕಿ ವಿದ್ಯಾ™ಅಭಿಯಾನ: ಕೈಜೋಡಿಸಿದ ಫೆಡರಲ್ ಬ್ಯಾಂಕ್ ಮತ್ತು ಲುಲು ಗ್ರೂಪ್

[…] […]