ಎಷ್ಟು ಚೆಂದವೋ..
ಕವಿತೆಗಳ ಸಂಗ.!
ಭಾವಗಳ ಶೃಂಗ.!
ಪದಾಮೋದ ರಂಗ.!
ನವರಸಗಳ ರಮ್ಯ
ಭವ್ಯ ಲೀಲಾವಿನೋದ.!
ನವಭಾವಗಳ ದಿವ್ಯ
ನವ್ಯ ರಾಗನೀನಾದ.!
ನೆನಪುಗಳ ನರ್ತನ
ಕನಸುಗಳ ಕೀರ್ತನ
ಉಪಮೆಗಳ ಚಿತ್ತಾರ
ಚಿಂತನೆಗಳ ಮಂದಾರ.!
ಮನದ ಗುಡಿಯಲಿ
ಅಕ್ಷರ ದೀವಣಿಗೆ.!
ಎದೆಯ ಗೂಡಿನಲಿ
ಕಾವ್ಯದ ಮೆರವಣಿಗೆ.!
ಕಲ್ಪನೆಗಳ ಮುಗಿಲು
ತನುಮನ ನವಿಲು.!
ಉಕ್ಕುವುದು ಒಡಲು
ಮೊರೆವ ಜೀವಗಡಲು.!
ನೋವಿರಲಿ ನಲಿವಿರಲಿ
ಏನಿರಲಿ ತೊಳಲಾಟ..
ಉಸಿರಿನೊಂದಿಗಿರಲಿ
ಕಾವ್ಯದ ಒಡನಾಟ.!
– ಎ.ಎನ್.ರಮೇಶ್. ಗುಬ್ಬಿ.

[…] ಭಾವ ವೀಣೆ.. […]