ಚನ್ನರಾಯಪಟ್ಟಣ: ಪೂಮ್ಮಡಿಹಳ್ಳಿ ಕೃಷಿ ಪತ್ತಿನ ಸಹಕಾರ ಸಂಘದ ನೂತನ ಅಧ್ಯಕ್ಷರಾಗಿ ಮಲ್ಲೇನಹಳ್ಳಿ ಎಂಪಿ ಪ್ರಸನ್ನಕುಮಾರ್ ಅವಿರೋಧವಾಗಿ ಆಯ್ಕೆಗೊಂಡರು. ನಿಕಟಪೂರ್ವ ಅಧ್ಯಕ್ಷರಾದ ಶ್ರೀಮತಿ ರೇಣುಕಾ ರವರ ರಾಜಿನಾಮೆಯಿಂದ ತೆರವಾಗಿದ್ದ ಅಧ್ಯಕ್ಷ ಸ್ಥಾನಕ್ಕೆ ಈ ದಿನ ಚುನಾವಣೆ ನಡೆದು ಪ್ರಸನ್ ಕುಮಾರ್ ಅವಿರೋಧವಾಗಿ ಆಯ್ಕೆಗೊಂಡರು.
ಈ ಸಂದರ್ಭದಲ್ಲಿ ಶ್ರವಣಬೆಳಗೊಳ ಕ್ಷೇತ್ರದ ಜನಪ್ರಿಯ ಶಾಸಕರಾದ ಶ್ರೀಯುತ ಸಿ ಎನ್ ಬಾಲಣ್ಣರವರ ಮಾರ್ಗದರ್ಶನದಲ್ಲಿ ನೂತನ ಅಧ್ಯಕ್ಷರನ್ನು ಆಯ್ಕೆಯನ್ನು ಮಾಡಲಾಗಿತ್ತು. ಈ ಸಭೆಯ ಅಧ್ಯಕ್ಷತೆಯನ್ನು ಉಪಾಧ್ಯಕ್ಷರಾದ ಶ್ರೀಮತಿ ಪ್ರೇಮಿಳ ರಂಗೇಗೌಡ ವಹಿಸಿದರು.
ಇದೇ ಸಂದರ್ಭದಲ್ಲಿ ವಿಸ್ತರಣಾಧಿಕಾರಿ ಮಧು, ಕಾರ್ಯ ನಿರ್ವಹಣಾಧಿಕಾರಿ ಪ್ರಕಾಶ್,ಮಾಜಿ ತಾಲೂಕು ಪಂಚಾಯಿತಿ ಸದಸ್ಯರಾದ ಪಿ ಕೆ ಮಂಜೇಗೌಡ, ದೊಡ್ಡೇಗೌಡ, ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಮಾಜಿ ಅಧ್ಯಕ್ಷರಾದ ದಾಸರಹಳ್ಳಿ ರಂಗೇಗೌಡ, ಪಿ ಬಿ ಬೋರೇಗೌಡ, ಉಪಾಧ್ಯಕ್ಷರಾದ ಪ್ರಮೀಳಾ ರಂಗೇಗೌಡರು, ಮುಖಂಡರುಗಳಾದ ಬಸವರಾಜು, ಎ .ಟಿ ದೇವರಾಜು,ರಮೇಶ್ ಬ್ಯಾಡರಹಳ್ಳಿ ಧರಣೇಂದ್ರ, ಸುನಿಲ್ ಕುಮಾರ್ ಮದನೆ, ಶ್ರೀನಿವಾಸ್, ರೇಣುಕಮ್ಮ,ರಾಮಯ್ಯ, ಹಾಜರಾಗಿದ್ದರು.
– ಮಂಜುನಾಥ್ ಐ.ಕೆ
