ಹಾಸನ: ಯುವ ಕಲಾವಿದರ ತಂಡ ಅಭಿನಯಿಸಿರುವ ಸತ್ಯ ಪಿಕ್ಚರ್ ಬ್ಯಾನರ್ ಅಡಿ ತಯಾರಾಗಿರುವ ಎಕ್ಸ್ ಅಂಡ್ ವೈ ಚಿತ್ರ ಇದೇ ತಿಂಗಳ 26 ರಂದು ತೆರೆಗೆ ಬರಲಿದೆ ಎಂದು ನಿರ್ದೇಶಕ ಹಾಸನ ಮೂಲದವರೇ ಆದ ಡಿ.ಸತ್ಯ ಪ್ರಕಾಶ್ ತಿಳಿಸಿದರು.
ಇಂದು ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಅಥರ್ವ ಪ್ರಕಾಶ್ ನಾಯಕ ನಟನಾಗಿ ಅಭಿನ ಯಿಸಿದ್ದು, ಬೃಂದಾ ಆಚಾರ್ಯ ನಾಯಕಿಯಾಗಿದ್ದಾರೆ ಎಂದರು.
ರಾಮಾ ರಾಮಾ ರೇ, ಒಂದಲ್ಲ, ಎರಡಲ್ಲಾ, ಮ್ಯಾನ್ಆಫ್ ಮ್ಯಾಚ್ ನಂತರ ಇದು 4ನೇ ಚಿತ್ರ. ಇತ್ತೀಚೆಗೆ ಬಿಡುಗಡೆಯಾಗಿರುವ ಟ್ರೇಲರ್ ಸಾಕಷ್ಟು ಸದ್ದು ಮಾಡಿದೆ. ವಿಭಿನ್ನ ಕಂಟೆಂಟ್ ಹೊಂದಿರುವ ಸಿನಿಮಾ, ಎಲ್ಲರಿಗೂ ಇಷ್ಟವಾಗಲಿದೆ ಎಂದರು.
ದೊಡ್ಡಣ್ಣ, ವೀಣಾ ಸುಂದರ್ ಮೊದಲಾದ ಕಲಾವಿದರು ಅಭಿನಯಿಸಿದ್ದಾರೆ. ಸಿನಿಮಾ ಜನರಿಗೆ ತಲುಪಿಸಬೇಕು, ಮುಂದಿನ ಜನರೇಷನ್ಗೆ ಗಾಳಿ ಉಳಿಸಬೇಕು, ಹಿಂದಿನ ಸಿನಿಮಾಗಳಿಗೆ ಪ್ರಶಸ್ತಿ ಪಡೆದಿದ್ದೆ, ಈಗ ಪ್ರಶಸ್ತಿ ಬೇಡ. ಜನರು ಚಿತ್ರ ಮಂದಿರಕ್ಕೆ ಬಂದು ನೋಡಿದರೆ ಅದೇ ನನಗೆ ಬಹುಮಾನ ಎಂದರು. ಹಾಸನ ಜನ ಕನ್ನಡ ಸಿನಿಮಾ ನೋಡುತ್ತಾರೆ, ಜನರಿಗೆ ತಲುಪಿಸುವ ಕೆಲಸವನ್ನು ಮೀಡಿಯಾಗಳು ಮಾಡಬೇಕು.
ಹೀರೇಮಗಳೂರು ಸಿನಿಮಾ ಬಿಡುಗಡೆ ನಮ್ಮ ಸಿನಿಮಾ ಗೂ ಬೆಂಬಲಿಸಿ ನಾಯಕ-ನಾಯಕಿ ಮಾತನಾಡಿ, ಇದೊಂದು ವಿಭಿನ್ನ ಕಥಾ ಹಂದಲವುಳ್ಳಸಿನಿಮಾ ಎಲ್ಲರೂ ಬೆಂಬಲಿಸಿ ಎಂದು ವಿನಂತಿಸಿದರು.
ಸುದ್ದಿಗೋಷ್ಟಿಯಲ್ಲಿ ಅಖಿಲ ಭಾರತ ವೀರಶೈವ ಮಹಾಸಭಾದ ತಾಲೂಕು ಅಧ್ಯಕ್ಷ ಕಟ್ಟಾಯ ಶಿವಕುಮಾರ್ ಮೊದಲಾದವರಿದ್ದರು.

[…] ಇದನ್ನು ಓದಿ: ಸತ್ಯ ಪಿಕ್ಚರ್ ಬ್ಯಾನರ್ ಅಡಿ ತ… […]