ಚನ್ನರಾಯಪಟ್ಟಣ:ನಾಡಪ್ರಭು ಕೆಂಪೇಗೌಡ ವೇದಿಕೆ ವತಿಯಿಂದ ಪಟ್ಟಣದಲ್ಲಿ ಕೆಂಪೇಗೌಡರ 516ನೇ ಜನ್ಮದಿನದ ಅಂಗವಾಗಿ ಸಂಭ್ರಮದ ಜಯಂತ್ಯೋತ್ಸವ ಆಚರಣೆ ಮಾಡಲಾಯಿತು.
ಕೆಂಪೇಗೌಡರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಹಾಗೂ ಮಾಲಾರ್ಪಣೆ ಮಾಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ನಂತರ, ಭಾವಚಿತ್ರವನ್ನು ಬೆಳ್ಳಿಯ ರಥದ ಮೆರವಣಿಗೆಯಲ್ಲಿ ಹೊಸ ಬಸ್ ನಿಲ್ದಾಣ ಮಾರ್ಗವಾಗಿ ಸಾಗಿಸಿ, ಕೆಂಪೇಗೌಡ ಸರ್ಕಲ್ವರೆಗೆ ಕೊಂಡೊಯ್ಯಲಾಯಿತು. ಅಲ್ಲಿ ಕೆಂಪೇಗೌಡರ ನಾಮಫಲಕಕ್ಕೆ ಪುಷ್ಪಾರ್ಚನೆ ನೆರವೇರಿಸಲಾಯಿತು.

ಈ ಸಂದರ್ಭದಲ್ಲಿ ಕಾಳೆನಹಳ್ಳಿ ಆನಂದ್ ಅವರು ಮಾತನಾಡಿ, “ಬೆಂಗಳೂರು ನಗರದ ಸ್ಥಾಪಕರಾದ ನಾಡಪ್ರಭು ಕೆಂಪೇಗೌಡರ ಜಯಂತಿಯನ್ನು ರಾಜ್ಯ ಸರ್ಕಾರವೇ ಆಚರಣೆ ಮಾಡುತ್ತಿರುವುದು ಸಂತಸದ ಸಂಗತಿ. ಮುಂದಿನ ದಿನಗಳಲ್ಲಿ ಚನ್ನರಾಯಪಟ್ಟಣದ ಕೆಂಪೇಗೌಡ ಸರ್ಕಲ್ನಲ್ಲಿ ಅವರ ಕಂಚಿನ ಪ್ರತಿಮೆ ನಿರ್ಮಿಸಬೇಕೆಂದು ನಾವು ಆಗ್ರಹಿಸುತ್ತೇವೆ,” ಎಂದರು.
ಕಾರ್ಯಕ್ರಮದಲ್ಲಿ ಆನಂದ್ ಕುಮಾರ್, ವಸ್ತ್ರ ವಿನ್ಯಾಸಕಾರ ಮಲ್ಲವನಘಟ್ಟ ನಾಗರಾಜ್, ವೆಂಕಟೇಶ್, ನವೀನ್, ಕೆರೆ ಬೀದಿ ಜಗದೀಶ್, ಡಿ.ಎಂ. ರವಿ, ಬಾಬು, ಉಮೇಶ್, ಸುರೇಶ್ ಗೌಡ ಸೇರಿದಂತೆ ಹಲವಾರು ಅಭಿಮಾನಿಗಳು ಹಾಗೂ ಸದಸ್ಯರು ಭಾಗವಹಿಸಿದ್ದರು.
ವೀನ್, ಕೆರೆ ಬೀದಿ ಜಗದೀಶ್,ಡಿ ಎಂ ರವಿ,ಬಾಬು,ಉಮೇಶ್, ಸುರೇಶ್ ಗೌಡ ಸೇರಿದಂತೆ ಇತರರು ಹಾಜರಿದ್ದರು.
- ಮಂಜುನಾಥ್ ಐ .ಕೆ.
