ಮನ ಸೆಳೆಯುವ ಶೀರ್ಷಿಕೆ ಭರವಸೆ ಚಿತ್ರದ ಟ್ರೇಲರ್ ಬಿಡುಗಡೆ ಸಮಾರಂಭ ಶ್ರೀ ರೇಣುಕಾಂಬ ಸ್ಟುಡಿಯೋದಲ್ಲಿ ಅದ್ದೂರಿಯಾಗಿ ನಡೆಯಿತು. ಉಚ್ಚ ನ್ಯಾಯಲಯದ ವಕೀಲರು, ಸರ್ಕಾರಿ ಅಧಿಕಾರಿಗಳು, ರಾಜಕೀಯ ಧುರೀಣರು ಕಾರ್ಯಕ್ರಮಕ್ಕೆ ಚಾಲನೆ ನೀಡಿ ತಂಡಕ್ಕೆ ಶುಭ ಹಾರೈಸಿದರು. ’ಪ್ರೀತ್ಸೋ ಹೃದಯಕ್ಕೆ’ ಎಂಬ ಕ್ಯಾಚಿ ಅಡಬರಹ ಇರಲಿದೆ. ಆರ್.ಆರ್.ಮೂವೀ ಮೇಕರ್ಸ್ ಅಡಿಯಲ್ಲಿ ಶಿವಮೊಗ್ಗದ ಕಂಟ್ರಾಕ್ಟರ್, ಉದ್ಯಮಿ ನಾಗರಾಜ್ ಅವರು ಪತ್ನಿ ಲಕ್ಷೀನಾಗರಾಜ್ ಹೆಸರಿನಲ್ಲಿ ನಿರ್ಮಾಣ ಮಾಡಿರುವುದು ಹೊಸ ಅನುಭವ. ಮುತ್ತು ಗಂಗೂರ ಸಿನಿಮಾಕ್ಕೆ ಕಥೆ,ಚಿತ್ರಕಥೆ, ಸಂಭಾಷಣೆ ಬರೆದು ಮೊದಲ ಬಾರಿ ನಿರ್ದೇಶನ ಮಾಡಿದ್ದಾರೆ.
ತಾರಾಗಣದಲ್ಲಿ ವಿನಾಯರಾಜ್, ಅಹಲ್ಯಸುರೇಶ್, ಹೊನ್ನವಳ್ಳಿಕೃಷ್ಣ, ಶೋಭರಾಜ್, ಮನಮೋಹನ್ರೈ, ಕಿಲ್ಲರ್ವೆಂಕಟೇಶ್, ಕೆಂಪೆಗೌಡ ಮುಂತಾದವರು ನಟಿಸಿದ್ದಾರೆ.

ಬೆಂಗಳೂರು, ಶಿವಮೊಗ್ಗ, ಮಂಗಳೂರು, ಉಡುಪಿ ಸುಂದರ ತಾಣಗಳಲ್ಲಿ ಚಿತ್ರೀಕರಣ ನಡೆಸಲಾಗಿದೆ. ಸ್ಟಾರ್ ಸಿಂಗರ್ಸ್ಗಳಾದ ರಾಜೇಶ್ಕೃಷ್ಣನ್, ವಿಜಯಪ್ರಕಾಶ್, ಶಮಿತಾಮಲ್ನಾಡ್, ಅನುರಾಧಭಟ್, ಸುಪ್ರಿಯಲೋಹಿತ್ ಹಾಡಿರುವುದು ವಿಶೇಷ. ಸಂಗೀತ ಶ್ರೀಹರ್ಷ ಕಾಗೋಡ್, ಛಾಯಾಗ್ರಹಣ ವೀನಸ್ ಮೂರ್ತಿ, ಸಾಹಸ ಸ್ಟಂಟ್ ಸಿದ್ದು, ಸಂಕಲನ ಕುಮಾರ್.ಸಿ.ಹೆಚ್, ಸಾಹಿತ್ಯ ಶ್ರೀತೇಜ-ಅಭಿಜಿತ್ ತೀರ್ಥಹಳ್ಳಿ ಅವರದಾಗಿದೆ. ಸೆನ್ಸಾರ್ನಿಂದ ಪ್ರಶಂಸೆ ಪಡೆದುಕೊಂಡಿರುವ ಸಿನಿಮಾವು ಆಗಸ್ಟ್ ತಿಂಗಳಿನಲ್ಲಿ ತೆರೆ ಕಾಣಲಿದೆ.
-ಶ್ರೀ ಸಾಯಿ ಎಸ್ ಮಂಜು
