ಚಿಕ್ಕಮಗಳೂರು, ಜುಲೈ 1: ಜಿಲ್ಲೆಯ ಮೂಡಿಗೆರೆ ತಾಲೂಕಿನ ಸುಪ್ರಸಿದ್ಧ ಪರಿಸರ ಪ್ರವಾಸಿ ತಾಣ ಎತ್ತಿನ ಭುಜ ಪ್ರದೇಶದಲ್ಲಿ ನಿರಂತರ ಮಳೆಯಿಂದ ನೆಲ ಜಾರುವ ಸ್ಥಿತಿ ಉಂಟಾಗಿದ್ದು, ಮುಂಜಾಗ್ರತಾ ಕ್ರಮವಾಗಿ ಅರಣ್ಯ ಇಲಾಖೆ ಚಾರಣಕ್ಕೆ ಒಂದು ತಿಂಗಳ ಕಾಲ ಸಂಪೂರ್ಣ ನಿಷೇಧ ಹೇರಿದೆ.
7 ಕಿ.ಮೀ. ನಡಿಗೆಯ ಮೂಲಕ ಎತ್ತಿನ ಭುಜದ ನೈಸರ್ಗಿಕ ಸೌಂದರ್ಯವನ್ನು ಅನುಭವಿಸುತ್ತಿದ್ದ ಪ್ರವಾಸಿಗರಿಗೆ ಈ ತಾತ್ಕಾಲಿಕ ನಿರ್ಧಾರ ನಿರಾಸೆಯಾಗಿದೆ. ಆದರೆ ಮಳೆ, ಕಾಡುಪ್ರಾಣಿಗಳ ಸದ್ದು ಹಾಗೂ ಜಾರುವ ಪ್ರದೇಶಗಳಿಂದಾಗುವ ಅಪಾಯಗಳ ಹಿನ್ನೆಲೆಯಲ್ಲಿ ಈ ಕ್ರಮವನ್ನು ಅರಣ್ಯ ಇಲಾಖೆ ತುರ್ತುವಾಗಿ ತೆಗೆದುಕೊಂಡಿದೆ. ಸ್ಥಳಕ್ಕೆ ಯಾವುದೇ ವಾಹನ ಪ್ರವೇಶವಿಲ್ಲದ ಕಾರಣ, ತುರ್ತು ಸಂದರ್ಭದಲ್ಲಿ ರಕ್ಷಣಾ ಕಾರ್ಯವೂ ಕಠಿಣವಾಗುತ್ತದೆ ಎಂದು ಅಧಿಕಾರಿಗಳು ತಿಳಿಸಿದರು.
ಇದನ್ನು ಓದಿ: SHOCKING : ಹಾಸನದಲ್ಲಿ ‘ಹೃದಯಾಘಾತಕ್ಕೆ’ ಒಂದುವರೆ ತಿಂಗಳ ಬಾಣಂತಿ ಬಲಿ
ಸ್ಥಳೀಯರ ಆಗ್ರಹದ ಮೇರೆಗೆ ಪ್ರವೇಶ ನಿಯಂತ್ರಣಕ್ಕೆ ಕ್ರಮ ಜರುಗಿಸಲಾಗಿದ್ದು, ಎತ್ತಿನ ಭುಜದಲ್ಲಿ ಒಂದು ಕಾವಲುಗಾರನನ್ನು ನಿಯೋಜಿಸಲು ಜಿಲ್ಲಾಡಳಿತ ಸೂಚನೆ ನೀಡಿದೆ. ಇಂದಿನಿಂದಲೇ ಈ ನಿಷೇಧ ಜಾರಿಯಾಗುತ್ತಿದ್ದು, ಪ್ರವಾಸಿಗರು ಚಾರಣಕ್ಕೆ ಹೋಗದೆ ನಿರ್ಧಾರವನ್ನು ಗೌರವಿಸಲು ಇಲಾಖೆ ಮನವಿ ಮಾಡಿದೆ.

[…] […]