ಟಿ.ನರಸೀಪುರ : ಖಾಸಗಿ ಶಾಲೆಗಳಲ್ಲಿ ವಿದ್ಯಾರ್ಥಿಗಳು ಅ್ಯಂಡ್ರಾಯಿಡ್ ಮೊಬೈಲ್ ಬಳಕೆ. ಒಂದನೇ ತರಗತಿ ಮಕ್ಕಳಿಂದಿಡಿದು ಹತ್ತನೇ ತರಗತಿಯ ಮಕ್ಕಳವರೆಗೆ ಮೊಬೈಲ್ ಬಳಸುತ್ತಿದ್ದು ಇದರಿಂದ ಮುಂದೆ ಆಗುವ ಅನಾಹುತಗಳಿಗೆ ಶಾಲೆಯ ಮುಖ್ಯಸ್ಥರು ಅಥವಾ ಪೋಷಕರು ಜವಾಬ್ದಾರಿ ಹೊರುವರೇ…ಎಂಬುದು ಆತಂಕದ ವಿಷಯವಾಗಿದೆ.
ಪಟ್ಟಣದ ಕೆಲವು ಖಾಸಗಿ ಶಾಲೆಗಳಲ್ಲಿ ಕಳೆದ ವರ್ಷದಿಂದ ಮೊಬೈಲ್ ಪೋನ್ ಗಳಲ್ಲಿ ಹೋಂ ವರ್ಕ್ ಹಾಗೂ ಪಾಠ,ಪ್ರವಚನಗಳಿಗೆ ಸಂಬಂಧಿಸಿದಂತೆ ಪೋನ್ ಬಳಕೆ ಮಾಡಿಸುತ್ತಿದ್ದು ಇದು ವಿದ್ಯಾರ್ಥಿಗಳ ಮುಂದಿನ ಜೀವನ ಶೈಲಿಗೆ ಮಾರಕವಾಗಲಿದೆಯೇ ಎಂಬುದರ ಆಳ,ಅಗಲ ಅರಿಯದೇ ಶಾಲಾ ಆಡಳಿತ ಮಂಡಳಿ ಹಾಗೂ ಪೋಷಕರು ಮೊಬೈಲ್ ಬಳಕೆಗೆ ಉತ್ತೇಜನ ನೀಡುತ್ತಿರುವುದು ಬಹಳ ಆತಂಕಕಾರಿ ವಿಷಯವಾಗಿದೆ.
ಕೊರೋನ ಸಂದರ್ಭದಲ್ಲಿ ಶಾಲಾ,ಕಾಲೇಜುಗಳಿಗೆ ಹೋಗಲಾರದ ಪರಿಸ್ಥಿತಿ ಇದ್ದಾಗ ಅನಿವಾರ್ಯವಾಗಿ ಹತ್ತನೇ ತರಗತಿ,ಪಿಯು,ಪದವಿ ಹಾಗೂ ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ ಆನ್ ಲೈನ್ ನಲ್ಲಿ ಪಾಠ,ಪ್ರವಚನ ಮಾಡುವ ಪರಿಸ್ಥಿತಿ ಬಂದೊದಗಿದ್ದರಿಂದ ಮೊಬೈಲ್ ಬಳಕೆ ಆ ಸಂದರ್ಭಕ್ಕೆ ಉಪಯುಕ್ತವಾಗಿತ್ತು.ಆದರೀಗ ಕೊರೋನ ವೈರಸ್ ನನ್ನು ಸರ್ಕಾರ ಹಾಗೂ ಜನತೆಯ ಸಹಕಾರದಿಂದ ಇಲ್ಲದಂತೆ ಮಾಡಿದೆ.

ಟಿ.ನರಸೀಪುರ ಪಟ್ಟಣದಲ್ಲಿ ಇರುವ ಕೆಲವು ಖಾಸಗಿ ಶಾಲೆಗಳಲ್ಲಿ ಮೊಬೈಲ್ ಪೋನ್ ಮೂಲಕ ಆರು ವರ್ಷ ವಯಸ್ಸಿನ ಮಕ್ಕಳಿಂದಿಡಿದು 17 ವರ್ಷದ ವಿದ್ಯಾರ್ಥಿಗಳಿಗೆ ಮೊಬೈಲ್ ಮೂಲಕ ಪಾಠ,ಪ್ರವಚನ ಮಾಡುತ್ತಿರುವುದು ಎಷ್ಟರ ಮಟ್ಟಿಗೆ ಸರಿ ಎಂದು ಪೋಷಕರು ಆತಂಕ ವ್ಯಕ್ತಪಡಿಸುತ್ತಿದ್ದಾರೆ.ಆಡಳಿತ ಮಂಡಳಿಗೆ ಹೆದರಿ ಪೋಷಕರಿಗೆ ಇಷ್ಟವಿಲ್ಲದಿದ್ದರು ಪೋನ್ ಕೊಡಿಸಿದ್ದಾರೆ.
ಇದನ್ನು ಓದಿ: screen time ಎಂದರೇನು ಗೋತ್ತಾ ?
ಈಗ್ಗೆ ಕೆಲವು ದಿನಗಳ ಹಿಂದೆ ಸರ್ಕಾರಿ ಆಸ್ಪತೆಯಲ್ಲಿ ಪೋಷಕರು ತಮ್ಮ ಮಗುವನ್ನು ಆಸ್ಪತ್ರೆಗೆ ಕರೆದುಕೊಂಡು ಬಂದಿದ್ದರು.ಮಗುವಿನ ತಂದೆ ವೈದ್ಯರ ಬಳಿ ತೋರಿಸಲು ಕ್ಯೂನಲ್ಲಿ ನಿಂತಿದ್ದ ಸಂಧರ್ಭ ಎದುರಿನ ಆಸನದಲ್ಲಿ ಆತನ ಮಡದಿ ಹಾಗೂ ಒಂದನೇ ತರಗತಿಯಲ್ಲಿ ಓದುತ್ತಿರುವ ಪುಟ್ಚ ಮಗುವೊಂದರ ಕೈಯಲ್ಲಿ ಆ್ಯಂಡ್ರಾಯ್ಡ್ ಮೊಬೈಲ್ ಇದ್ದು ಅದರಲ್ಲಿ ತಾಯಿ ಹೋಂ ವರ್ಕ್ ಮಾಡಿಸುತ್ತಿದದ್ದು ನೋಡಿ ಗಾಬರಿ ಹುಟ್ಟಿತು.ಆಗ ಆ ತಾಯಿಯನ್ನು ವಿಚಾರಿಸಲಾಗಿ ಹೌದು ಸರ್ ಹೋಂ ವರ್ಕ್ ಎಲ್ಲಾ ಪೋನ್ ನಲ್ಲೇ ಮಾಡ್ಬೇಕು.ಏನೇ ವಿಷಯಗಳಿದ್ದರೂ ಪೋನ್ ನಲ್ಲೇ ಮೆಸೇಜ್ ಹಾಕ್ತಾರೆ ನಾವು ನೋಡಿಕೊಂಡು ಅದನ್ನು ಪಾಲಿಸಬೇಕಿದೆ ಎಂದು ಉತ್ತರಿಸಿದಾಗ ಗಾಬರಿ ಜೊತೆಗೆ ಮುಂದಿನ ದಿನಗಳಲ್ಲಿ ಆ ಮಕ್ಕಳ ಭವಿಷ್ಯ ನೆನೆದು ಆತಂಕ ಕೂಡ ಉಂಟಾಯಿತು.

ಮೊಬೈಲ್ ಪೋನ್ ಗಳು ಅನೇಕ ಪ್ರಯೋಜನಗಳನ್ನು ಹೊಂದಿದ್ದರೂ ವಯಸ್ಸಿನ ಪರಿಮಿತಿಯನ್ವು ಅಳೆದು ತೂಗಿ ಪೋನ್ ಕೊಡಿಸಬೇಕಾಗುತ್ತದೆ.ಇದರಿಂದ ಎಂತಹ ದುಷ್ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ ಎಂಬ ಪರಿಜ್ಞಾನ ಆಡಳಿತ ಮಂಡಳಿಯವರಿಗೆ ಇದೆಯೇ…?ಸಣ್ಣ ವಯಸ್ಸಿನಲ್ಲಿಯೇ ಇದರ ಬಳಕೆಯನ್ನು ಮಾಡಿಸಿದಾಗ ಪೋನ್ ನಿಂದ ಹೊರ ನೀಲಿ ಬೆಳಕು ನಿದ್ಸೂರೆಯ ಹಾರ್ಸುಮೋನ್ವ ಆದ ಮೆಲಟೋನಿನ್ ಉತ್ಪಾದನೆಯನ್ನು ತಡೆಯುತ್ತದೆ.ಮಾನಸಿಕ ಒತ್ತಡ,ಕಣ್ಣಿನ ತೊಂದರೆಗಳು ಸೇರಿದಂತೆ ವ್ಯಸನಕ್ಕೆ ಗುರಿಯಾಗಬೇಕಾಗುತ್ತದೆ.
ಇದನ್ನು ಓದಿ: ಮಕ್ಕಳ ಮಾನಸಿಕ ಆರೋಗ್ಯದ ಮಹತ್ವ-ಅಗತ್ಯತೆ
ಪೋನ್ ಗಳ ನಿರಂತರ ಬಳಕೆಯಿಂದ ನೋಡಬಾರದವುಗಳನ್ನೆಲ್ಲಾ ನೋಡುವಂತಹ,ಯಾವ ವಯಸ್ಸಿನಲ್ಲಿ ಏನು ತಿಳಿದುಕೊಳ್ಳಬೇಕೋ ಅದನ್ನು ವಯಸ್ಸಿಗೂ ಮೀರಿ ತಿಳಿದುಕೊಳ್ಳುವಂತಹ ಹಂತಕ್ಕೆ ತಮಗರಿವಿಲ್ಲದಂತೆ ಹೋಗಿ ಬಿಡುತ್ತಾರೆ.ಇದರ ಅಗಾಧ ಬಳಕೆಯಿಂದ ಎಲ್ಲಾ ವಯೋಮಾನದ ಜನರಲ್ಲಿ ದೈಹಿಕ ಚಟುವಟಿಕೆ ಕಡಿಮೆಯಾಗುತ್ತದೆ.ಸಾಮಾಜಿಕ ಜಾಲತಾಣಗಳ ಮೂಲಕ ಹಲವಾರು ಆಟಗಳು,ಸ್ಕ್ರೋಲಿಂಗ್,ಚಲನಚಿತ್ರಗಳ ವೀಕ್ಷಣೆ (ಅಶ್ಲೀಲವೂ ಸೇರಿದಂತೆ) ಇವೆಲ್ಲದರ ಅತಿಯಾದ ಸ್ಕ್ರೀನ್ ಸಮಯವು ವ್ಯಾಯಾಮ,ಹೊರಾಂಗಣ ದೈಹಿಕ ಚಟುವಟಿಕೆಗಳಿಂದ ದೂರವಾಗಿ ಉಳಿದು ಬಿಡುತ್ತೇವೆ.
ಪೋಷಕರು ಆಡಳಿತ ಮಂಡಳಿಯೊಂದಿಗೆ ಮಾತನಾಡಿ, ಮೊಬೈಲ್ ಬಳಕೆಯನ್ನು ಕಡ್ಡಾಯವಾಗಿ ಮಾಡಿಸದಂತೆ ಒತ್ತಡ ಹೇರಬೇಕಿದೆ.ಎಲ್ಲಾ ಪೋಷಕರ ಮಾತಿಗೆ ಬಗ್ಗದಿದ್ದಾಗ ಕ್ಷೇತ್ರ ಶಿಕ್ಷಣಾಧಿಕಾರಿಗಳನ್ನು ಭೇಟಿ ಮಾಡಿ ಅಂತಹ ಶಾಲೆಯ ವಿರುದ್ಧ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ತಮ್ಮ ಮಕ್ಕಳ ಜವಾಬ್ದಾರಿಯನ್ನು ತಾವೇ ಕಾಪಾಡಿಕೊಳ್ಳುವುದು ಅತ್ಯವಶ್ಯಕವಾಗಿದೆ.
” ಸರ್ಕಾರಿ ಶಾಲಾ ಕಾಲೇಜುಗಳಲ್ಲಿ ಮೊಬೈಲ್ ನಿಂದ ಯಾವುದೇ ಪಾಠ,ಪ್ರವಚನ ಹಾಗೂ ಹೋಂ ವರ್ಕ್ ಮಾಡಿಸುತ್ತಿಲ್ಲ.ಕೊರೊನ ಸಂದರ್ಭದಲ್ಲಿ ಮಾತ್ರ ಆ ವ್ಯವಸ್ಥೆ ಇತ್ತು.ಖಾಸಗಿ ಶಾಲೆಗಳಲ್ಲಿ ವಿದ್ಯಾರ್ಥಿಗಳಿಗೆ ಪೋನ್ ಬಳಕೆ ಮಾಡಿಸುತ್ತಿದ್ದರೆ ಕೂಡಲೇ ಸಭೆ ಕರೆದು ಮುಖ್ಯಸ್ಥರ ಬಳಿ ಮಾತನಾಡಿ ಆ ರೀತಿ ಪೋನ್ ಬಳಕೆ ಮಾಡಿಸುತ್ತಿದ್ದರೆ ಅದನ್ನು ನಿಲ್ಲಿಸುವಂತೆ ತಿಳಿಸಲಾಗುವುದು.”

– ಶಿವಮೂರ್ತಿ
ಕ್ಷೇತ್ರ ಶಿಕ್ಷಣಾಧಿಕಾರಿಗಳು, ಟಿ.ನರಸೀಪುರ
“ಸಾವಿರಾರು ರೂಪಾಯಿ ಡೊನೇಷನ್,ಫೀಸ್ ನೀಡಿ ಮಕ್ಕಳನ್ನು ಶಾಲೆಗೆ ಸೇರಿಸಿದ್ದೀವಿ.ಅವರು ಹೇಳಿದಂತೆ ಮಾಡಿಲ್ಲವೆಂದರೆ ಮಕ್ಕಳನ್ನು ಫೇಲ್ ಮಾಡಿ ಬಿಡುತ್ತಾರೆ ಎನ್ನುವ ಭಯ.ನಮಗೂ ಪೋನ್ ಕೊಡಿಸಲು ಇಷ್ಟವಿಲ್ಲ.ಇದರಿಂದ ಮಕ್ಕಳಿಗೆ ಮುಂದೆ ಆಗುವ ಅನಾಹುತಗಳಿಗೆ ಹೊಣೆ ಯಾರು ಎಂಬ ಪ್ರಶ್ನೆ ನಮ್ಮನ್ನು ಕಾಡುತ್ತಿದೆ”
ಲೋಕೇಶ್ , ಪೋಷಕರು,
ಅಸಾಯಕರು
ಮಾನಸಿಕ ತಜ್ಞರ ಎಚ್ಚರಿಕೆ:
“ಅವಧಿಮೀರಿದ ಸ್ಕ್ರೀನ್ ಸಮಯ, ಅಶ್ಲೀಲತೆಯ ನಿಖರ ಪ್ರವೇಶ, ದೈಹಿಕ ಚಟುವಟಿಕೆಯ ಕೊರತೆ — ಇವು ಎಲ್ಲಾ ಮಕ್ಕಳ ಮೇಲೆ ಕಾಳಜಿಯ ಅಂಶಗಳಾಗಿವೆ” ಎಂಬುದು ತಜ್ಞರ ಅಭಿಪ್ರಾಯ.
ಎಳೆಯ ಮನಸ್ಸುಗಳ ಮೇಲೆ ಬಹಳಷ್ಟು ಪ್ರಭಾವ ಬೀರುವ ಇಂತಹ ಅವೈಜ್ಞಾನಿಕ ಹೇರಿಕೆಗಳು ಮುಂದಿನ ದಿನಗಳಲ್ಲಿ ವಿದ್ಯಾರ್ಥಿಗಳಿಗೆ ದುಷ್ಪರಿಣಾಮ ಬೀರುತ್ತವೆ.ಮಿತಿ ಮೀರಿದ ಮಾಹಿತಿ,ಪ್ರಚೋದನೆಗಳಿಂದ ಮನಸ್ಸು ಹಾಗೂ ದೈನಂದಿನ ಚಟುವಟಿಕೆಗಳ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತದೆ.ಇದನ್ನು ನಾವು ಸಹಿಸುವುದಿಲ್ಲ.ಪೋಷಕರ ಸಹ ಆಡಳಿತ ಮಂಡಳಿ ವಿರುದ್ಧ ದನಿ ಎತ್ತಬೇಕು. ಶಿಕ್ಷಣ ಸಚಿವರಿಗೆ ಪತ್ರ ಬರೆದು ಸಂಬಂಧಿಸಿದ ಖಾಸಗಿ ಶಾಲಾ,ಕಾಲೇಜುಗಳ ವಿರುದ್ಧ ಕ್ರಮ ಜರುಗಿಸುವಂತೆ ಒತ್ತಾಯಿಸಲಾಗುವುದು.

