ಬೆಂಗಳೂರು, ಜುಲೈ 2: ಹಾಸನ ಜಿಲ್ಲೆಯಲ್ಲಿ ಸಂಭವಿಸುತ್ತಿರುವ ಹೃದಯಾಘಾತದ ಸರಣಿ ಸಾವುಗಳು ಸರ್ಕಾರಕ್ಕೂ ಆರೋಗ್ಯ ಇಲಾಖೆಗೂ ಭಾರೀ ಎಚ್ಚರಿಕೆಯ ಘಂಟೆ ಗಂಟಿಸಿವೆ. ಕೇವಲ 42 ದಿನಗಳ ಅವಧಿಯಲ್ಲಿ 26 ಮಂದಿ ಮೃತಪಟ್ಟಿದ್ದು, ಈ ನಿಗೂಢ ಸಾವಿನ ಮೇಲೆ ತಾಂತ್ರಿಕ ಸಮಿತಿ ತನ್ನ ಪ್ರಾಥಮಿಕ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಿದೆ.
ಈ ಕುರಿತು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತೀವ್ರ ಕಳವಳ ವ್ಯಕ್ತಪಡಿಸಿದ್ದು, ಬೆಂಗಳೂರಿನ ಜಯದೇವ ಹೃದ್ರೋಗ ಆಸ್ಪತ್ರೆಯ ನಿರ್ದೇಶಕರ ನೇತೃತ್ವದಲ್ಲಿ 12 ತಜ್ಞರ ಸಮಿತಿಯು ರಚನೆಗೊಂಡಿದೆ. ಸಮಿತಿಗೆ 10 ದಿನಗಳ ಕಾಲಾವಕಾಶ ನೀಡಲಾಗಿದ್ದರೆ, ಈಗಾಗಲೇ ಪ್ರಾಥಮಿಕ ವರದಿ ಲಭ್ಯವಾಗಿದೆ.
ವಿಶ್ಲೇಷಣೆಯಲ್ಲಿ ಕಂಡುಬಂದಿರುವ ಅಂಶಗಳು:
-
ಅತಿಯಾದ ಒತ್ತಡ, ಕೊಬ್ಬು, ಧೂಮಪಾನ, ಮದ್ಯಪಾನ ಮತ್ತು ಫಾಸ್ಟ್ ಫುಡ್ ಸೇವನೆ ಈ ಸಾವುಗಳಿಗೆ ಕಾರಣವಾಗಿರಬಹುದು ಎಂಬ ಅನುಮಾನ ತಜ್ಞರ ನಡುವೆ ವ್ಯಕ್ತವಾಗಿದೆ.
-
ಮುಖ್ಯವಾಗಿ ರೆಡ್ ಮೀಟ್ ಸೇವನೆಯು ಕೊಲೆಸ್ಟ್ರಾಲ್ ಮಟ್ಟ ಹೆಚ್ಚಿಸಿ ಹೃದಯಾಘಾತಕ್ಕೆ ಕಾರಣವಾಗಿರುವ ಸಾಧ್ಯತೆ ತೀವ್ರವಾಗಿದೆ.
-
ಇನ್ನಷ್ಟು ವಿವರಗಳಿಗಾಗಿ ಸಮಿತಿ ಆಳವಾದ ಅಧ್ಯಯನಕ್ಕೆ ಮುಂದಾಗುತ್ತಿದೆ.
ಹೃದಯಾಘಾತದಿಂದ ನಿನ್ನೆ ಮತ್ತೆ ಮೂವರು ಮೃತಪಟ್ಟಿದ್ದು, ಸರಕಾರಿ ವೈದ್ಯರೇ ಆಗಿದ್ದಾರೆ. ಯುವಕರಿಂದ ಹಿಡಿದು ಬಾಣಂತಿಯವರೆಗೆ ಈ ಅಘಾತ ಸಾವುಗಳನ್ನು ಕಂಡು ಸಾರ್ವಜನಿಕರಲ್ಲಿ ಆತಂಕದ ವಾತಾವರಣ ವಾಪಸಾಗಿದೆ.
ಆರೋಗ್ಯ ಇಲಾಖೆ ಕಮಿಷನರ್ ಪ್ರತಿಕ್ರಿಯೆ:
ರಾಜ್ಯದ 86 ತಾಲೂಕುಗಳಲ್ಲಿ ಈಗಾಗಲೇ ಚಾಲನೆಯಲ್ಲಿರುವ ಸ್ಟೆಮಿ (STEMI) ಯೋಜನೆಯನ್ನು ಇಡೀ ರಾಜ್ಯದ ಎಲ್ಲಾ ತಾಲೂಕುಗಳಿಗೂ ವಿಸ್ತರಿಸಲು ತೀರ್ಮಾನಿಸಲಾಗಿದೆ. ಜೊತೆಗೆ, ಹೃದಯಾಘಾತ ಸಂದರ್ಭದಲ್ಲಿ ಅತ್ಯಗತ್ಯವಾಗಿರುವ CPR (Cardiopulmonary Resuscitation) ತರಬೇತಿ ನೀಡಲು ವ್ಯವಸ್ಥೆ ಮಾಡಲಾಗುತ್ತಿದೆ.

[…] ಹಾಸನದಲ್ಲಿ ಹೃದಯಾಘಾತದ ಅಬ್ಬರ: 42 ದಿನದಲ್ಲಿ… […]