ಮಂಗಳೂರು: ಕರ್ನಾಟಕ ಬ್ಯಾಂಕ್ನ ವ್ಯವಸ್ಥಾಪಕ ನಿರ್ದೇಶಕ ಹಾಗೂ ಕಾರ್ಯನಿರ್ವಹಣಾ ನಿರ್ದೇಶಕರ ರಾಜೀನಾಮೆಯು ಬ್ಯಾಂಕ್ನ ಹಣಕಾಸು ಸ್ಥಿತಿಗತಿಗೆ ಯಾವುದೇ ಸಂಬಂಧವಿಲ್ಲ ಎಂದು ಆಲ್ ಇಂಡಿಯಾ ಬ್ಯಾಂಕ್ ಎಂಪ್ಲಾಯೀಸ್ ಅಸೋಸಿಯೇಶನ್ನ ಪ್ರಧಾನ ಕಾರ್ಯದರ್ಶಿ,ಸಿ.ಹೆಚ್. ವೆಂಕಟಚಲಂ ಸ್ಪಷ್ಟಪಡಿಸಿದ್ದಾರೆ.
ಅವರು ಬುಧವಾರ ಪ್ರಕಟಣೆಯಲ್ಲಿ, “ಬ್ಯಾಂಕ್ ಸಂಪೂರ್ಣ ಸುರಕ್ಷಿತವಾಗಿದ್ದು, ಯಾವುದೇ ಹಣಕಾಸಿನ ಹಗರಣದಿಂದ ಮುಕ್ತವಾಗಿದೆ. ಗ್ರಾಹಕರ ಹಾಗೂ ಠೇವಣಿದಾರರ ಹಿತಾಸಕ್ತಿಗೆ ಏನೂ ಧಕ್ಕೆಯಾಗಿಲ್ಲ,” ಎಂದು ತಿಳಿಸಿದ ಅವರು “ಮಾಧ್ಯಮಗಳಲ್ಲಿ ಹರಡುತ್ತಿರುವ ಸುಳ್ಳು ಪ್ರಚಾರವನ್ನು ಕಡೆಗಣಿಸಿ. ಬ್ಯಾಂಕ್ ಸಿಬ್ಬಂದಿ, ಠೇವಣಿದಾರರು ಮತ್ತು ಗ್ರಾಹಕರು ತಮ್ಮ ನಂಬಿಕೆಯನ್ನು ಕಾಪಾಡಿಕೊಳ್ಳಬೇಕೆಂದು ನಾವು ವಿನಂತಿಸುತ್ತೇವೆ.” ಎಂದು ಮನವಿ ಮಾಡಿದ್ದಾರೆ.
‘ಹೆಚ್ಚು ಭಯ ಹುಟ್ಟಿಸುವ ಮಾಧ್ಯಮದ ಕುತಂತ್ರ’
ಕರ್ಣಾಟಕ ಬ್ಯಾಂಕ್ನ ಎಂಡಿ ಮತ್ತು ಈಡಿಗಳ ರಾಜೀನಾಮೆಯ ಹಿನ್ನೆಲೆಯಲ್ಲಿ ಕೆಲವು ಮಾಧ್ಯಮಗಳಲ್ಲಿ ಭ್ರಾಂತಿ ಹಾಗೂ ಭಯ ಹುಟ್ಟಿಸುವ ರೀತಿಯ ಅಸತ್ಯ ಮಾಹಿತಿ ಹರಡಲಾಗುತ್ತಿದೆ. ಇದರಿಂದ ಬ್ಯಾಂಕ್ನ ಗ್ರಾಹಕರು ಹಾಗೂ ಸಾರ್ವಜನಿಕರಲ್ಲಿ ಅನಗತ್ಯ ಆತಂಕ ಉಂಟಾಗಿದೆ. ಈ ಎಲ್ಲವೂ ಬೆದರಿಕೆ ಉಂಟುಮಾಡುವ ಕೃತ್ಯಗಳೆಂದು, ಅವರು ಖಂಡಿಸಿದರು.
ಇದನ್ನು ಓದಿ: ‘ಹೃದಯಾಘಾತ’ ಎಂಬ ಮೌನ ಮಹಾಮಾರಿ ಬಗ್ಗೆ ಬೇಡ ಆತಂಕ – ❤️ ಇರಲಿ ಎಚ್ಚರ
100 ವರ್ಷದ ಪ್ರಚಾರ್ಯ ಬ್ಯಾಂಕ್
“ಮಂಗಳೂರನ್ನು ಆಧಾರ ಕೇಂದ್ರವಾಗಿಸಿಕೊಂಡಿರುವ ಶತಮಾನ ಪ್ರಾಚೀನ ಕರ್ನಾಟಕ ಬ್ಯಾಂಕ್ ಅತ್ಯಂತ ಸಮರ್ಥ ಮತ್ತು ಗ್ರಾಹಕ ಸ್ನೇಹಿ ಬ್ಯಾಂಕ್ ಆಗಿ ಬೆಳೆದಿದೆ. ಬ್ಯಾಂಕ್ನ ಒಟ್ಟು ವ್ಯವಹಾರ 1.82 ಲಕ್ಷ ಕೋಟಿ ರೂ. ಆಗಿದ್ದು, 76,000 ಕೋಟಿ ರೂ. ಸಾಲದಲ್ಲಿ ಶುದ್ಧ ಎನ್ಪಿಎ ಕೇವಲ 1000 ಕೋಟಿ ರೂ. ಮಾತ್ರ ಇದೆ. 20% ಕಾಪಿಟಲ್ ಅಡೀಕ್ವೆಸಿ ರೇಷಿಯೋ ಇರುವುದೇ ಅದರ ಆರ್ಥಿಕ ಸ್ಥಿರತೆಗೆ ಸಾಕ್ಷಿಯಾಗಿದೆ. ಮಾರ್ಚ್ 2025 ರ ತನಕ ಬ್ಯಾಂಕ್ ಶುದ್ಧ ಲಾಭ 1272 ಕೋಟಿ ರೂ. ಆಗಿದೆ,” ಎಂದು ವೆಂಕಟಚಲಂ ವಿವರಿಸಿದರು.
ಭರವಸೆಯ ಅಂಕಿಅಂಶಗಳು
“ದೇಶಾದ್ಯಂತ 950ಕ್ಕೂ ಹೆಚ್ಚು ಶಾಖೆಗಳನ್ನು ಹೊಂದಿರುವ ಈ ಬ್ಯಾಂಕ್ನಲ್ಲಿ ಸದ್ಯ 9000ಕ್ಕೂ ಹೆಚ್ಚು ತರಬೇತುಗೊಂಡ ಸಿಬ್ಬಂದಿ ಹಾಗೂ ಅಧಿಕಾರಿ ವರ್ಗವಿದೆ. ಎಲ್ಲಾ ಹಣಕಾಸು ಸೂಚ್ಯಂಕಗಳಲ್ಲಿ ಬ್ಯಾಂಕ್ ಉತ್ತಮ ಸ್ಥಿತಿಯಲ್ಲಿದೆ. ಯಾವುದೇ ರೀತಿಯ ಆತಂಕವಿಲ್ಲ,” ಎಂದು ಮಾಹಿತಿ ನೀಡಿದ್ದಾರೆ.

[…] […]