ಹಾಸನ: ನಗರದ ಕೆ.ಎಸ್.ಆರ್.ಟಿ.ಸಿ ತರಬೇತಿ ಕೇಂದ್ರದಲ್ಲಿ ಕೆ.ಎಸ್.ಆರ್.ಟಿ.ಸಿ ತರಬೇತಿ ಕೇಂದ್ರ, ಹಾಸನ ಮತ್ತು ರೋಟರಿ ಕ್ಲಬ್ ಹಾಸನ್ ಸನ್ ರೈಸ್ ಸಂಸ್ಥೆ ವತಿಯಿಂದ ಹಮ್ಮಿಕೊಂಡಿದ್ದ “ಯೋಗ ಪ್ರಾಣಯಾಮ ಮತ್ತು ಆರೋಗ್ಯದ ಮಹತ್ವ” ಕುರಿತ ಕಾರ್ಯಗಾರವು ಇಂದು ಬೆಳಿಗ್ಗೆ 6 ಗಂಟೆಯಿಂದ 8 ಗಂಟೆಯವರೆಗೆ ನಡೆಯಿತು.
ಈ ಕಾರ್ಯಗಾರವನ್ನು ಯೋಗ ಗುರು ಚೇತನ್ ಗುರೂಜಿ ನಡೆಸಿದರು. 80ಕ್ಕೂ ಹೆಚ್ಚು ಕೆ.ಎಸ್.ಆರ್.ಟಿ.ಸಿ ನೌಕರರು ಭಾಗವಹಿಸಿ ತಮ್ಮ ಶಾರೀರಿಕ ಮತ್ತು ಮಾನಸಿಕ ಆರೋಗ್ಯವನ್ನು ಸುಧಾರಿಸಲು ಅಗತ್ಯವಾದ ಯೋಗ ಮತ್ತು ಪ್ರಾಣಯಾಮ ತಂತ್ರಗಳನ್ನು ಕಲಿತುಕೊಂಡರು.
ಇದೇ ವೇಳೆ ಮಾತನಾಡಿದ ಚೇತನ್ ಗುರೂಜಿ, ನೌಕರರ ಶಾರೀರಿಕ ಮತ್ತು ಮಾನಸಿಕ ಸ್ಥಿತಿಯನ್ನು ಸದೃಢಗೊಳಿಸಲು ಈ ರೀತಿಯ ಕಾರ್ಯಕ್ರಮಗಳನ್ನು ನಿಯಮಿತವಾಗಿ ಆಯೋಜಿಸುವ ಅಗತ್ಯವಿದೆ ಎಂದು ಅಭಿಪ್ರಾಯಪಟ್ಟರು.
ಕಾರ್ಯಕ್ರಮದಲ್ಲಿ ಕೆ.ಎಸ್.ಆರ್.ಟಿ.ಸಿ ತರಬೇತಿದಾರ ಸಂತೋಷ್ , ರೋಟರಿ ಕ್ಲಬ್ ಆಫ್ ಹಾಸನ್ ಸನ್ ರೈಸ್ ನ ಅಧ್ಯಕ್ಷ ರೋ. ಎಚ್ ಡಿ ವಜ್ರಕುಮಾರ್, ಕಾರ್ಯದರ್ಶಿ ಕೆ.ಎಸ್. ಯೋಗೇಶ್, ಸದಸ್ಯರಾದ ಕರುಣೇಶ್ , ಲೋಕೇಶ್ ಇತರರು ಉಪಸ್ಥಿತರಿದ್ದರು.
