ಬೆಂಗಳೂರು: ಕೋವಿಡ್ ಲಸಿಕೆ ಮತ್ತು ಯುವಜನರಲ್ಲಿ ಸಂಭವಿಸಿದ ಅಕಾಲಿಕ ಹೃದಯಾಘಾತ ಸಾವುಗಳ ನಡುವಿನ ಸಂಬಂಧವನ್ನು ಪರಿಶೀಲಿಸಲು ರಾಜ್ಯ ಸರ್ಕಾರ ರಚಿಸಿದ್ದ ತಜ್ಞರ ಸಮಿತಿಯು ಮಹತ್ವದ ವರದಿಯನ್ನು ಬಿಡುಗಡೆ ಮಾಡಿದೆ. ಸಮಿತಿಯ ಅಭಿಪ್ರಾಯದಂತೆ, ಹೃದಯಾಘಾತದಿಂದ ಸಂಭವಿಸಿದ ಅಕಾಲಿಕ ಸಾವು ಮತ್ತು ಕೋವಿಡ್ ಲಸಿಕೆ ಅಥವಾ ಸೋಂಕಿನ ನಡುವೆ ಯಾವುದೇ ನೇರ ಸಂಬಂಧ ಕಂಡುಬಂದಿಲ್ಲ.
ಇದನ್ನು ಓದಿ: ನರ ದೌರ್ಬಲ್ಯಕ್ಕೆ ಕಾರಣವಾಗುವ ಆಹಾರ ಪದಾರ್ಥಗಳಿವು ಯಾವುದೇ ಕಾರಣಕ್ಕೂ ಇವುಗಳನ್ನು ಸೇವಿಸಬೇಡಿ!
ಈ ಸಮಿತಿ 2025ರ ಏಪ್ರಿಲ್ 1 ರಿಂದ ಮೇ 31ರ ವರೆಗೆ ಶ್ರೀ ಜಯದೇವ ಹೃದ್ರೋಗ ವಿಜ್ಞಾನ ಸಂಸ್ಥೆಯಲ್ಲಿ 45 ವರ್ಷಕ್ಕಿಂತ ಕಡಿಮೆ ವಯಸ್ಸಿನ 251 ರೋಗಿಗಳ ಮೇಲೆ ಅಧ್ಯಯನ ನಡೆಸಿ, ಅವರ ಪೂರ್ವ ವೈದ್ಯಕೀಯ ಇತಿಹಾಸ, ಕೋವಿಡ್ ಸೋಂಕಿನ ಗಂಭೀರತೆ, ಲಸಿಕೆಗಳ ಡೋಸುಗಳು, ಲಸಿಕೆಯ ತಕ್ಷಣದ ಪರಿಣಾಮಗಳು ಸೇರಿದಂತೆ ವಿವಿಧ ಅಂಶಗಳನ್ನು ವಿಶ್ಲೇಷಿಸಿ ತೀರ್ಮಾನ ನೀಡಿದೆ.
ಮುಖ್ಯ ಅಂಶಗಳು:
-
ಕೋವಿಡ್ ನಂತರ ತಕ್ಷಣದ ಹಂತದಲ್ಲಿ ದೇಹದಲ್ಲಿ ಉರಿಯೂತ ಸ್ಥಿತಿ ಹೆಚ್ಚಾಗಿ ಹೃದಯಾಘಾತದ ಸಂಭವ ಹೆಚ್ಚಾಗಿದ್ದರೂ, ದೀರ್ಘಕಾಲೀನವಾಗಿ (1 ವರ್ಷಕ್ಕಿಂತ ಹೆಚ್ಚು) ಯಾವುದೇ ಸ್ಪಷ್ಟ ಸಂಬಂಧವಿಲ್ಲ ಎಂದು ಸಮಿತಿ ಹೇಳಿದೆ.
-
ಜಾಗತಿಕ ಮಟ್ಟದಲ್ಲಿ ಪ್ರಕಟವಾದ ಅಧ್ಯಯನಗಳನ್ನೂ ಸಮಿತಿ ಪರಿಗಣಿಸಿದ್ದು, ಅತ್ಯಧಿಕ ಅಧ್ಯಯನಗಳು ಲಸಿಕೆ ಮತ್ತು ಹೃದಯಾಘಾತ ನಡುವಿನ ನೇರ ಸಂಬಂಧವನ್ನು ನಿರಾಕರಿಸಿವೆ.
-
“ವಾಸ್ತವದಲ್ಲಿ, ಕೋವಿಡ್ ಲಸಿಕೆಗಳು ದೀರ್ಘಕಾಲೀನವಾಗಿ ಹೃದಯಾಘಾತಗಳಿಂದ ರಕ್ಷಣೆ ನೀಡಬಹುದು” ಎಂದು ವರದಿ ಉಲ್ಲೇಖಿಸಿದೆ.
ಈ ವರದಿ ಜನರಲ್ಲಿ ಹಬ್ಬುತ್ತಿದ್ದ ಗೊಂದಲ ಮತ್ತು ತಪ್ಪುಮಾಹಿತಿಗೆ ತಡೆ ನೀಡುವಲ್ಲಿ ಸಹಾಯವಾಗಲಿದೆ ಎಂದು ವೈದ್ಯಕೀಯ ವಲಯ ಅಭಿಪ್ರಾಯಪಟ್ಟಿದೆ.

[…] […]
[…] […]