ದೆಹಲಿ, ಜುಲೈ 6: ಭಾರತದ ಯುನೈಫೈಡ್ ಪೇಮೆಂಟ್ಸ್ ಇಂಟರ್ಫೇಸ್ (UPI) ತಂತ್ರಜ್ಞಾನ ಇನ್ನೊಂದು ಹಂತಕ್ಕೆ ಪಾದಾರ್ಪಣೆ ಮಾಡಿದ್ದು, ಟ್ರಿನಿಡಾಡ್ ಅಂಡ್ ಟೊಬಾಗೋದಲ್ಲಿ ಭೀಮ್ ಆ್ಯಪ್ ಲಾಂಚ್ ಆಗಿದೆ. ಈ ಮೂಲಕ ಯುಪಿಐ ಸಿಸ್ಟಂ ಅಳವಡಿಸಿದ ಮೊದಲ ಕೆರೆಬಿಯನ್ ದೇಶ ಎನಿಸಿದೆ “ಟ್ರಿನಿಡಾಡ್”, ಯುಪಿಐ ಸಿಸ್ಟಂ ಅಳವಡಿಸಿದ ಎಂಟನೇ ದೇಶವಾಗಿದೆ.
ಈ ಸಾಂದರ್ಭಿಕ ಬೆಳವಣಿಗೆಯ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಟ್ರಿನಿಡಾಡ್ ರಾಷ್ಟ್ರವನ್ನು ಅಭಿನಂದಿಸಿದ್ದಾರೆ. ಜುಲೈ 3-4ರಂದು ಪ್ರಧಾನಿ ಮೋದಿ ಅವರು ಟ್ರಿನಿಡಾಡ್ಗೆ ಭೇಟಿ ನೀಡಿದ ಸಂದರ್ಭದಲ್ಲಿ, ಡಿಜಿಟಲ್ ಸಹಕಾರ ಹಾಗೂ ಟೆಕ್ ಜ್ಞಾನ ಬದಲಾಗಿಸುವ ಕುರಿತಂತೆ ಉಭಯ ರಾಷ್ಟ್ರಗಳು ಒಪ್ಪಂದಕ್ಕೆ ಬಂದವು.
ಇದನ್ನು ಓದಿ: ಭಾರತ-ಅಮೆರಿಕ ಮಧ್ಯಂತರ ವ್ಯಾಪಾರ ಒಪ್ಪಂದ: ಭಾರತ ತನ್ನ ನಿಲುವು ಸ್ಪಷ್ಟ – ವಾಷಿಂಗ್ಟನ್ ಕ್ರಮ ನಿರ್ಣಾಯಕ
ಭಾರತದ ‘ಇಂಡಿಯಾ ಸ್ಟ್ಯಾಕ್’ ಪರಿಹಾರಗಳು – ಜಾಗತಿಕ ಉತ್ಸಾಹ
UPI ಜೊತೆಗೆ ಭಾರತದಲ್ಲಿ ಯಶಸ್ವಿಯಾಗಿ ಕಾರ್ಯನಿರ್ವಹಿಸುತ್ತಿರುವ ಡಿಜಿಲಾಕರ್, ಇ-ಸೈನ್, ಗವರ್ನ್ಮೆಂಟ್ ಇ-ಮಾರ್ಕೆಟ್ಪ್ಲೇಸ್ (GeM) ಸೇರಿದಂತೆ ‘India Stack’ ಪರಿಹಾರಗಳನ್ನು ಟ್ರಿನಿಡಾಡ್ ದೇಶಕ್ಕೂ ವಿಸ್ತರಿಸುವ ಬಗ್ಗೆ ಒಪ್ಪಂದ ಆಗಿದೆ. ಭಾರತ ಈ ತಂತ್ರಜ್ಞಾನ ಜಾರಿಗೆ ತಾಂತ್ರಿಕ ನೆರವು ನೀಡಲಿದೆ.
UPI ಗಡಿ ದಾಟುತ್ತಿದೆ:
ಈ ಮೊದಲು ಫ್ರಾನ್ಸ್, ಯುಎಇ, ಭೂತಾನ್, ನೇಪಾಳ, ಮಾರಿಷಸ್, ಶ್ರೀಲಂಕಾ, ಸಿಂಗಾಪುರ ರಾಷ್ಟ್ರಗಳು ಯುಪಿಐ ತಂತ್ರಜ್ಞಾನವನ್ನು ಅಳವಡಿಸಿಕೊಂಡಿದ್ದು, ಈಗ ಟ್ರಿನಿಡಾಡ್ ಈ ಪಟ್ಟಿಗೆ ಸೇರ್ಪಡೆಯಾಗಿದೆ. ಈ ದೇಶಗಳಲ್ಲಿ QR ಕೋಡ್ ಬಳಸಿ ಯುಪಿಐ ಪಾವತಿಗಳನ್ನು ನೇರವಾಗಿ ಭಾರತಕ್ಕೆ ಅಥವಾ ಸ್ಥಳೀಯವಾಗಿ ಮಾಡಬಹುದು.
ಇದು ಭಾರತೀಯ ಡಿಜಿಟಲ್ ಆರ್ಥಿಕತೆಯ ವಿಶ್ವಮಟ್ಟದ ಪ್ರಭಾವವನ್ನು ಸೂಚಿಸುತ್ತದೆ.

[…] ಇದನ್ನು ಓದಿ: ಯುಪಿಐ ಸಿಸ್ಟಂ ಅಳವಡಿಸಿದ ಮೊದಲ ಕೆರೆಬಿಯನ್… […]