ಅಕ್ಕಮಹಾದೇವಿ
~~~~~~~~~~~~
1. ಕನ್ನಡದ ಮೊದಲ ಮಹಿಳಾ ಕವಿಯತ್ರಿ
1)ಆಯ್ದಕ್ಕಿ ಲಕ್ಕಮ್ಮ 2)ಅಕ್ಕ ಮಹಾದೇವಿ 3)ಶರಣೆ ಸುಂಕವ್ವೆ
2.ಅಕ್ಕ ಮಹಾದೇವಿಯು ಲೌಕಿಕ ಸುಖವನ್ನು ತ್ಯಜಿಸಿ ಇವನನ್ನು ಪತಿಯೆಂದು ನಂಬಿದ್ದಳು
1)ಶ್ರೀಶೈಲ ಮಲ್ಲಿಕಾರ್ಜುನ 2) ಹಂಪಿ ವಿರೂಪಾಕ್ಷ 3)ಕಾಶಿ ವಿಶ್ವನಾಥ
3.ಅಕ್ಕ ಮಹಾದೇವಿಯು ಉಡುಗೆಯಲ್ಲಿ ಹೀಗೆ ಇದ್ದಳು.
1)ದಿಗಂಬರೆ 2)ಶ್ವೇತಾಂಬರೆ 3)ಕೇಶಾಂಬರೆ
4.ಅಕ್ಕ ಮಹಾದೇವಿಯು ಹುಟ್ಟಿದ ಸ್ಥಳ ಶಿವಮೊಗ್ಗ ಜಿಲ್ಲೆಯ
1)ಉಡುತಡಿ 2)ಶಿರಾಳ ಕೊಪ್ಪ 3)ಶಿಕಾರಿಪುರ
5.ಅಕ್ಕ ಮಹಾದೇವಿಯ ತಂದೆ ಮತ್ತು ತಾಯಿ
1)ನಿರ್ಮಲ ಶೆಟ್ಟಿ -ಸುಮತಿ 2)ಶಮಂತ ಶೆಟ್ಟಿ-ವಿಮಲ 3)ಕೌಶಿಕ ಶ್ರೇಷ್ಠಿ -ಕಮಲ
6.ಅಕ್ಕ ಮಹಾದೇವಿಯ ಅಂಕಿತ ನಾಮ
1)ಶಾಂತ ಮಲ್ಲಿಕಾರ್ಜುನ 2)ಚೆನ್ನಮಲ್ಲಿಕಾರ್ಜುನ 3)ಮಲ್ಲಿಕಾರ್ಜುನ
7.ಅಕ್ಕ ಮಹಾದೇವಿಯು ಬಾಲ್ಯದಲ್ಲಿಯೇ ಲಗ್ನವಾದ ಪತಿಯ ಹೆಸರು
1)ಕೌಶಿಕ 2)ಶ್ರೇಣಿಕ 3)ಕರಣಿಕ
8.’ಮಹಾದೇವಿಯಕ್ಕಗಳ ರಗಳೆ’ ಕೃತಿಯನ್ನು ರಚಿಸಿದ ಕವಿ
1)ಹರಿಹರ 2)ರಾಘವಾಂಕ 3)ನಾಗವರ್ಮ
9.ಅಕ್ಕ ಮಹಾದೇವಿಯ ವ್ಯಕ್ತಿತ್ವವನ್ನು ಬಿಂಬಿಸುವ ‘ಕದಳಿಯ ಕರ್ಪೂರ’ ಬರಹದ ಕರ್ತೃ
1)ಹೆಚ್.ಎಲ್. ನಾಗೇಗೌಡ 2)ಹಾ.ಮಾ.ನಾಯಕ 3)ಹೆಚ್. ತಿಪ್ಪೇರುದ್ರಸ್ವಾಮಿ
10.ಅಕ್ಕ ಮಹಾದೇವಿಯ ಪ್ರಸಿದ್ಧ ಕೃತಿ
1)ಯೋಗಾಂಗ ತ್ರಿವಿಧಿ 2)ಅಷ್ಟಾಂಗ ತ್ರಿವಿಧಿ 3)ಶರಣಾಂಗ ಚತುರ್ವಿಧಿ
11. ಸಮಗ್ರ ವಚನ ಸಂಪುಟದಲ್ಲಿರುವ ಅಕ್ಕ ಮಹಾದೇವಿಯವರ ವಚನಗಳ ಸಂಖ್ಯೆ
1) 370 2) 515 3) 434
12.ಅಕ್ಕ ಮಹಾದೇವಿಯು ಅಂತ್ಯ ಕಾಲದಲ್ಲಿ ಐಕ್ಯಳಾದ ಕದಳಿಯು ಈ ಕ್ಷೇತ್ರದಲ್ಲಿದೆ.
1) ಹೃಷಿಕೇಶ. 2)ಶ್ರೀಶೈಲಂ 3)ಮಂತ್ರಾಲಯ
13.ಅಕ್ಕ ಮಹಾದೇವಿಯು ಜೀವಿಸಿದ ಕಾಲಾವಧಿ
1)ಕ್ರಿ.ಶ. 1130 – 1160 2)ಕ್ರಿ.ಶ.430- 460 3)ಕ್ರಿ.ಶ.980 – 1110
14.ಅಕ್ಕ ಮಹಾದೇವಿ ಸೇರಿದಂತೆ 39 ವಚನಕಾರ್ತಿಯರ ಇತಿವೃತ್ತಗಳನ್ನು ಒಳಗೊಂಡ ‘ಶಿವಶರಣೆಯರ ಸಾಹಿತ್ಯ ಚರಿತ್ರೆ’ ಕೃತಿಯ ಲೇಖಕಿ
1)ಡಾ.ವಿಜಯಶ್ರೀ ಸಬರದ 2)ಬಾನುಮುಷ್ತಾಕ್ 3)ಡಾ.ವಿಜಯಾದಬ್ಬೆ
15.ಅಕ್ಕ ಮಹಾದೇವಿ ಮಹಿಳಾ ವಿಶ್ವ ವಿದ್ಯಾಲಯ ಇರುವ ನಗರ
1)ಬಾಗಲಕೋಟೆ 2)ವಿಜಯಪುರ 3)ಕಲಬುರ್ಗಿ
~~~~~~~~~~~~~~~~~~~~~~~~
★ಸರಿಯುತ್ತರಗಳು:-
1.ಅಕ್ಕ ಮಹಾದೇವಿ 2.ಶ್ರೀಶೈಲ ಮಲ್ಲಿಕಾರ್ಜುನ 3.ಕೇಶಾಂಬರೆ 4.ಉಡುತಡಿ 5.ನಿರ್ಮಲ ಶೆಟ್ಟಿ -ಸುಮತಿ 6.ಚೆನ್ನಮಲ್ಲಿಕಾರ್ಜುನ 7.ಕೌಶಿಕ 8.ಹರಿಹರ 9.ಹೆಚ್. ತಿಪ್ಪೇರುದ್ರಸ್ವಾಮಿ 10.ಯೋಗಾಂಗ ತ್ರಿವಿಧಿ 11) 434 12.ಶ್ರೀಶೈಲಂ 13.ಕ್ರಿ.ಶ. 1130 – 1160 14.ಡಾ.ವಿಜಯಶ್ರೀ ಸಬರದ 15.ವಿಜಯಪುರ
******
-ಸಂ:-ಹೊ.ರಾ.ಪರಮೇಶ್ ಹೊಡೇನೂರು
ಅರಕಲಗೂಡು ತಾ.ಹಾಸನ ಜಿಲ್ಲೆ
7022765372
ಇದನ್ನು ಓದಿ: ಪ್ರಮುಖ ಕನ್ನಡ ಕವಿಗಳ – ಕವಿ ಪರಿಚಯ ಮಾಲಿಕೆ (ಕನಕದಾಸರು)
