ರಾಮನಗರ :-ಬಡವರು, ಅನ್ಯಾಯಕ್ಕೆ ಒಳಗಾದವರು ಮತ್ತು ತುಳಿತಕ್ಕೀಡಾದವರಿಗೆ ನ್ಯಾಯ ಒದಗಿಸುವಲ್ಲಿ ನ್ಯಾಯಾಧೀಶರು ಕೇವಲ ಕಾನೂನಿನ ಚೌಕಟ್ಟಿನಲ್ಲಿ ಕಾರ್ಯನಿರ್ವಹಿಸದೆ, ಸಂತ್ರಸ್ತರ ಬಳಿಗೆ ತೆರಳಿ ಅವರ ನೋವು, ನಿರಾಸೆಯನ್ನು ಅರ್ಥಮಾಡಿಕೊಳ್ಳಬೇಕು. ಕೇವಲ ತಾಂತ್ರಿಕವಾಗಿ ನ್ಯಾಯದಾನ ಮಾಡುವುದು ಸಮಾಜದಲ್ಲಿ ವಿಶ್ವಾಸವನ್ನು ಕುಂದಿಸುತ್ತದೆ. ನ್ಯಾಯಾಧೀಶರು ಕಾನೂನಿನ ಕಠಿಣ ನಿಯಮಗಳನ್ನು ಜಾರಿಗೊಳಿಸುವಾಗಲೂ ಸಹಾನುಭೂತಿ, ಕರುಣೆ ಮತ್ತು ನೀತಿಯನ್ನು ಹೇಗೆ ಕಾಪಾಡಿಕೊಳ್ಳಬೇಕು, ಸಂತ್ರಸ್ತರ ದುಃಖಕ್ಕೆ ಹೇಗೆ ಕಿವಿಯಾಗಬಹುದು ಎಂಬುದುಕ್ಕೆ ಇಲ್ಲೊಂದು ಹೃದಯಸ್ಪರ್ಶ ಘಟನೆ ನಡೆದಿದೆ.
ರಾಮನಗರದಲ್ಲಿ ಅಪಘಾತದಲ್ಲಿ ಗಾಯಗೊಂಡು ಕೋರ್ಟ್ಗೆ ಬರಲಾಗದ ಮಹಿಳೆಗೆ ನ್ಯಾಯಾಧೀಶರೇ ಆಕೆಯ ಬಳಿಗೆ ತೆರಳಿ ವಿಚಾರಣೆ ನಡೆಸಿ ಪರಿಹಾರ ನೀಡಿದ್ದಾರೆ. ಮೃತ ವ್ಯಕ್ತಿಯ ಹತ್ತು ಮಕ್ಕಳಿಗೆ ಪರಿಹಾರ ನೀಡುವಂತೆ ನ್ಯಾಯಾಲಯ ಆದೇಶಿಸಿತ್ತು
ರಾಮನಗರದ ಪ್ರಧಾನ ಸಿವಿಲ್ ನ್ಯಾಯಾಧೀಶ ಮತ್ತು ಪ್ರಥಮ ದರ್ಜೆ ನ್ಯಾಯಿಕ ದಂಡಾಧಿಕಾರಿ ಎಚ್. ಅವಿನಾಶ್ ಚಿಂದು ಮಾನವೀಯತೆ ಮೆರೆದ ನ್ಯಾಯಾದಿಶರು
