ಬೆಂಗಳೂರು, ಜುಲೈ 12 – ಇತ್ತೀಚಿನ ದಿನಗಳಲ್ಲಿ ಹೃದಯಾಘಾತದ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ, ಜನರು ತಮ್ಮ ಹೃದಯ ಆರೋಗ್ಯದ ಕಡೆ ಹೆಚ್ಚಿನ ಗಮನ ಹರಿಸುತ್ತಿರುವುದು ಸ್ಪಷ್ಟವಾಗಿದೆ. ಖ್ಯಾತ ಹೃದ್ರೋಗ ತಜ್ಞರಾದ ಡಾ. ಸಿ.ಎನ್. ಮಂಜುನಾಥ್ ಅವರು ಈ ಹಿನ್ನೆಲೆಯಲ್ಲಿ ಬಹುಮುಖ್ಯ ಸಲಹೆ ನೀಡಿದ್ದು, ದಿನವೂ 45 ನಿಮಿಷಗಳಷ್ಟು ವಾಕಿಂಗ್ ಮಾಡುವುದರಿಂದ ಹೃದಯ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು ಎಂದು ತಿಳಿಸಿದ್ದಾರೆ.
ಹೃದಯದ ಆರೋಗ್ಯ ಉತ್ತಮವಾಗಿರಬೇಕಾದರೆ ದೈಹಿಕ ಚಟುವಟಿಕೆ ಬಹಳ ಅಗತ್ಯವಿದೆ. ನಿಯಮಿತ ವ್ಯಾಯಾಮ ಮತ್ತು ನಡೆಯುವುದು ರಕ್ತನಾಳಗಳ ಚೌಕಟ್ಟು ಸುಧಾರಿಸುತ್ತಿದ್ದು, ಹೃದಯಕ್ಕೆ ರಕ್ತ ಪೂರೈಕೆ ಸಮರ್ಪಕವಾಗಿ ನಡೆಯುತ್ತದೆ. ಹೀಗಾಗಿ, ದಿನಕ್ಕೆ ಕನಿಷ್ಠ 45 ನಿಮಿಷ ನಡೆಯುವ ಅಭ್ಯಾಸವನ್ನು ಬೆಳೆಸಬೇಕು ಎಂದು ಡಾ. ಮಂಜುನಾಥ್ ಸೂಚಿಸಿದ್ದಾರೆ.
ಇದನ್ನು ಓದು: ಗೋಕರ್ಣದ ಕಾಡಿನ ಗುಹೆಯಲ್ಲಿ ವಾಸವಿದ್ದ ರಷ್ಯಾ ಮಹಿಳೆ, ಇಬ್ಬರು ಮಕ್ಕಳ ರಕ್ಷಣೆ
“ಹೃದಯ ನಮಗೆ ಹೇಳುತ್ತದಂತೆ: ನೀನು ನನಗಾಗಿ ಚಲಿಸು, ನಾನು ನಿನಗಾಗಿ ನಿರಂತರವಾಗಿ ಚಲಿಸುತ್ತೇನೆ” ಎಂಬುದಾಗಿ ಅವರು ಸ್ಪಷ್ಟಪಡಿಸಿದ್ದಾರೆ. ಬೆಳಿಗ್ಗೆ ನಡೆಯಲೇಬೇಕೆಂಬ ನಿಯಮವಿಲ್ಲ, ಸಮಯಕ್ಕೆ ಸೀಮಿತವಿಲ್ಲ — ಯಾವುದೇ ಸಮಯದಲ್ಲಿ ನಡೆಯಬಹುದು.
ಪರಿಸರದಲ್ಲಿ ಇರುವ ‘ಆರು ವೈದ್ಯರು’ – ಆರೋಗ್ಯದ ರಹಸ್ಯ
ಡಾ. ಮಂಜುನಾಥ್ ಅವರ ಅಭಿಪ್ರಾಯದಲ್ಲಿ ಪರಿಸರವೇ ಉಚಿತ ವೈದ್ಯರಾಗಿದ್ದು, ಆರೋಗ್ಯ ರಕ್ಷಿಸುವ ಆರು ಮಹತ್ವದ ಅಂಶಗಳನ್ನು ಅವರು ಹೀಗೆ ವಿವರಿಸಿದ್ದಾರೆ:
-
ಸೂರ್ಯನ ಕಿರಣ – ವಿಟಮಿನ್ ಡಿ ದಿಂದ immunity ಗೂ ಸಹಾಯ.
-
ಆಹಾರ – ಸಮತೋಲನಪೂರ್ಣ ಆಹಾರ ನಿತ್ಯವಿರಲಿ.
-
ವಿಶ್ರಾಂತಿ – ಸಮರ್ಪಕ ನಿದ್ರೆ ಹಾಗೂ ವಿಶ್ರಾಂತಿ ಅಗತ್ಯ.
-
ಸ್ನೇಹ – ಹೃದಯವನ್ನು ಹಗುರಗೊಳಿಸುವ ಮಾನವ ಸಂಬಂಧ.
-
ಆತ್ಮಸ್ಥೈರ್ಯ – ಆತ್ಮವಿಶ್ವಾಸದಿಂದ ಜೀವನ ನಿರ್ವಹಣೆ ಸುಲಭ.
-
ನಗು – ವಿಶ್ವವ್ಯಾಪಿ ಭಾಷೆ, ಒತ್ತಡ ಕಡಿಮೆ ಮಾಡುವ ಶಕ್ತಿಯುಳ್ಳದು.
ಇವುಗಳನ್ನು ಪಾಲಿಸಿಕೊಂಡು ಬರುವುದು ಆರೋಗ್ಯವಂತ ಜೀವನದ ದಾರಿ ಎಂದು ಡಾ. ಮಂಜುನಾಥ್ ಹೇಳುತ್ತಾರೆ.
ಹೃದಯವನ್ನು ನಿರಂತರ ಕಾರ್ಯನಿರ್ವಹಣೆಗೆ ಉತ್ತೇಜಿಸುವಂತಹ ಚಟುವಟಿಕೆಗಳನ್ನು ಜೀವನಶೈಲಿಯೊಂದಿಗೇ ಸೇರಿಸಿಕೊಂಡು ಬಂದ್ರೆ, ಅಕಾಲಿಕ ಹೃದಯಸಂಬಂಧಿ ಸಮಸ್ಯೆಗಳನ್ನು ದೂರವಿಡಬಹುದು ಎಂಬುದು ವೈದ್ಯರ ಸಲಹೆ.

[…] ಇದನ್ನು ಓದಿ: ಹೃದಯ ಆರೋಗ್ಯಕ್ಕೆ ದಿನಕ್ಕೆ 45 ನಿಮಿಷ ವಾಕಿಂ… […]
[…] ಇದನ್ನೂ ಓದಿ: ಹೃದಯ ಆರೋಗ್ಯಕ್ಕೆ ದಿನಕ್ಕೆ 45 ನಿಮಿಷ ವಾಕಿಂ… […]