ಬೆಂಗಳೂರು, ಜುಲೈ 13, 2025: ರಾಜ್ಯದ ಹಲವೆಡೆ ಧಾರಾಕಾರ ಮಳೆಯ ಹಿನ್ನೆಲೆ, ಶಾಲಾ ಮಕ್ಕಳ ಶೈಕ್ಷಣಿಕ ಹಾಗೂ ಜೀವಭದ್ರತೆಗಾಗಿ ಶಿಕ್ಷಣ ಇಲಾಖೆ ಮಹತ್ವದ ನಿರ್ಧಾರ ಕೈಗೊಂಡಿದ್ದು, ಎಲ್ಲಾ ಸರ್ಕಾರಿ ಶಾಲೆಗಳಲ್ಲಿ ಕಟ್ಟುನಿಟ್ಟಿನ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳುವಂತೆ ಆದೇಶಿಸಿದೆ.
2025-26ನೇ ಶೈಕ್ಷಣಿಕ ವರ್ಷದಲ್ಲಿ ಶಾಲೆಗಳು ಆರಂಭವಾಗಿರುವುದರಿಂದ ಮಳೆಗಾಲದಲ್ಲಿ ವಿದ್ಯಾರ್ಥಿಗಳ ಸುರಕ್ಷತೆಗೆ ಸಂಬಂಧಿಸಿದಂತೆ ಈಗಾಗಲೇ ದಿನಾಂಕ 15.06.2024 ರಂದು 7 ಪ್ರಮುಖ ಅಂಶಗಳನ್ನು ಪಾಲಿಸುವಂತೆ ತಿಳಿಸಲಾಗಿತ್ತು. ಈಗ ರಾಜ್ಯದ ಬಹುತೇಕ ಭಾಗಗಳಲ್ಲಿ ಮಳೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಶಾಲಾ ಕಟ್ಟಡಗಳ ಸುರಕ್ಷತೆ ಕುರಿತು ವಿಶೇಷ ಸೂಚನೆ ನೀಡಲಾಗಿದೆ.

ಮುಖ್ಯ ಮುಂಜಾಗ್ರತಾ ಕ್ರಮಗಳು:
-
ಕಟ್ಟಡದ ಪರಿಶೀಲನೆ: ಲೋಕೆೋಪಯೋಗಿ ಮತ್ತು ಪಂಚಾಯತ್ರಾಜ್ ಇಲಾಖೆಗಳ ಇಂಜಿನಿಯರ್ಗಳ ಮೂಲಕ ಕಟ್ಟಡದ ಸ್ಥಿತಿಯ ಪರಿಶೀಲನೆ ನಡೆಸಿ, ಸುರಕ್ಷತಾ ಪ್ರಮಾಣ ಪತ್ರ ಪಡೆಯಬೇಕು.
-
ಶಿಥಿಲ ಕೊಠಡಿಗಳಿಂದ ಬದಲಾವಣೆ: ಯಾವುದೇ ಶಿಥಿಲ ಕೊಠಡಿಗಳು ಬಳಸಬಹುದಾದ ಸ್ಥಿತಿಯಲ್ಲದಿದ್ದರೆ, ಬದಲಾವಣೆ ವ್ಯವಸ್ಥೆ ಮಾಡಬೇಕು.
-
ತಕ್ಷಣ ದುರಸ್ತಿ ಕಾರ್ಯ: ಜಿಲ್ಲಾ ಮತ್ತು ತಾಲ್ಲೂಕು ಮಟ್ಟದ ವರದಿಗಳನ್ನು ಆಧರಿಸಿ ತ್ವರಿತ ದುರಸ್ತಿಗೆ ಕ್ರಮ.
-
ಅವು ನಿರ್ಮಿತ ಶಾಲಾ ಕಟ್ಟಡದ ರಕ್ಷಣಾ ಕ್ರಮ: ನಿರ್ಮಾಣ ಕಾರ್ಯ ನಡೆಯುತ್ತಿರುವ ಶಾಲಾ ಆವರಣದಲ್ಲಿ ವಿದ್ಯಾರ್ಥಿಗಳು ಅಪಾಯದ ಕಡೆ ಹೋಗದಂತೆ ಕ್ರಮ.
-
ಪ್ರತಿವಾರ ಸಭೆ ಮತ್ತು ಪರಿಶೀಲನೆ: ಸಂಬಂಧಿಸಿದ ಅಧಿಕಾರಿಗಳು ವಾರದಿಂದ ವಾರ ಸಭೆ ನಡೆಸಿ ಕಾರ್ಯಗಳ ಪ್ರಗತಿ ಪರಿಶೀಲನೆ ಮಾಡಬೇಕು.
ಇದನ್ನೂ ಓದಿ: ಹೃದಯ ಆರೋಗ್ಯಕ್ಕೆ ದಿನಕ್ಕೆ 45 ನಿಮಿಷ ವಾಕಿಂಗ್ ಸಾಕು: ಡಾ. ಸಿ.ಎನ್. ಮಂಜುನಾಥ್ ಸಲಹೆ
ಹೆಚ್ಚಿನ ಜವಾಬ್ದಾರಿ ಮತ್ತು ನಿಯಮಾನುಸಾರ ಕ್ರಮ:
ಈ ಸೂಚನೆಗಳ ಪಾಲನೆಗೆ ವಿಫಲರಾದರೆ ಸಂಬಂಧಿಸಿದ ಅಧಿಕಾರಿಗಳೇ ನೇರ ಹೊಣೆಗಾರರಾಗುತ್ತಾರೆ ಎಂಬುದನ್ನು ಇಲಾಖೆಯು ಸ್ಪಷ್ಟಪಡಿಸಿದೆ. ಜಿಲ್ಲಾ ನೋಡಲ್ ಅಧಿಕಾರಿಗಳಿಗೆ 14.07.2025ರೊಳಗೆ ಸ್ಥಳೀಯ ಸತ್ಯಾವಸ್ಥೆಯ ವರದಿ ಸಲ್ಲಿಸುವಂತೆ ಸೂಚಿಸಲಾಗಿದೆ.
ಮಳೆಗಾಲದಲ್ಲಿ ಮಕ್ಕಳು ಅಪಾಯಕ್ಕೆ ಒಳಗಾಗದಂತೆ ಈ ಮುಂಜಾಗ್ರತಾ ಕ್ರಮಗಳು ಅತ್ಯಂತ ಅಗತ್ಯವಾಗಿವೆ ಎಂಬುದನ್ನು ಇಲಾಖೆ ಪುನರುಚ್ಚರಿಸಿದೆ.
ಸರ್ಕಾರಿ ಶಾಲೆಗಳಲ್ಲಿ ಕೈಗೊಳ್ಳಬೇಕಾದ ಅಗತ್ಯ ಮುನ್ನೆಚ್ಚರಿಕಾ ಕ್ರಮಗಳ ಕುರಿತು (1)
