ಟಿ.ನರಸೀಪುರ : ನನ್ನ ಸುದೀರ್ಘ ಹೋರಾಟದಲ್ಲಿ ಯಾವುದೇ ರೀತಿ ಫಲಾಪೇಕ್ಷೆ ಇಲ್ಲದೆ,ನನ್ನ ಆತ್ಮಸಾಕ್ಷಿ ಒಪ್ಪುವಂತೆ ನಿಸ್ವಾರ್ಥ ಪ್ರಾಮಾಣಿಕತೆ ಸ್ವಾಭಿಮಾನದಿಂದ ಜನಸೇವೆಯೇ ಜನಾರ್ದನ ಸೇವೆ ಎಂದು ತಿಳಿದು ಜನ ಒಳಿತಿಗಾಗಿಯೇ ಸಂಘಟನೆಯಲ್ಲಿ ತೊಡಗಿಸಿಕೊಂಡಿರುವುದಾಗಿ ಕರ್ನಾಟಕ ಭೂಷಣ ಪ್ರಶಸ್ತಿ ಪುರಸ್ಕೃತರಾದ ಆಲಗೂಡು ಎಸ್.ಚಂದ್ರಶೇಖರ್ ತಿಳಿಸಿದರು.
ತಾಲ್ಲೂಕು ದಲಿತ ಸಂಘರ್ಷ ಸಮಿತಿ ಒಕ್ಕೂಟದ ವತಿಯಿಂದ ಪಟ್ಟಣದ ನಳಂದ ಬುದ್ಧ ವಿಹಾರ ತ್ರಿವೇಣಿ ನಗರದಲ್ಲಿ ಆಯೋಜಿಸಿದ್ದ ಕರ್ನಾಟಕ ಮೀಡಿಯಾ ಕ್ಲಬ್ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯದೊಂದಿಗೆ ಕನಸಿನ ಭಾರತ ಇವರ ಜೊತೆಗೂಡಿ ಜು : 08 ಮಂಗಳವಾರದಂದು ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ಕರ್ನಾಟಕ ಭೂಷಣ ಪ್ರಶಸ್ತಿ ಪಡೆದ ನಿಮಿತ್ತ ಒಕ್ಕೂಟದ ಸನ್ಮಾನ ಸ್ವೀಕರಿಸಿ ಮಾತನಾಡಿ ನೊಂದ ಜನರ ಒಳಿತಿಗಾಗಿ ನ್ಯಾಯ ನೀತಿ ಧರ್ಮ ವಾಕ್ಯ ಪಾಲನೆ ಮಾಡುತ್ತಾ ಸಾಮಾಜಿಕ ನ್ಯಾಯ ಸಮಾನತೆ ಬದುಕಿಗಾಗಿ ಎಲ್ಲಾ ಶೋಷಿತರ ಏಳಿಗೆಗಾಗಿ ಸಮಾಜ ಸೇವೆಯ ಸಾಮಾಜಿಕ ಹೋರಾಟ ಮಾಡುತ್ತಾ ಸಕ್ರಿಯವಾಗಿದ್ದೇನೆಂದರು.
ಇದನ್ನು ಓದಿ: ಟಿ.ನರಸೀಪುರ : ಜನಸಂಖ್ಯೆ ಹೆಚ್ಚಳದಿಂದ ಅಸಮಾನತೆ, ಬಡತನ, ಅಹಿತಕರ ಘಟನೆಗಳಿಗೆ ಕಾರಣ: ಸಂಜೀವಿನಿ ಯೋಜನಾಧಿಕಾರಿ ರೂಪಶ್ರೀ
ಮುಂದುವರೆದು ಮಾತಾಡಿ ಕೆಇಬಿ ಇಲಾಖೆಯಲ್ಲಿ ನೌಕರನಾಗಿ ಕೆಲಸ ನಿರ್ವಹಿಸುತ್ತಿದ್ದೆ. ತದನಂತರ ಗ್ರೇಡ್ ಒನ್ ಗುತ್ತಿಗೆದಾರನಾಗಿ ಕೆಲಸ ಮಾಡುತ್ತಿದ್ದೆ. ನಾನು ಇದುವರೆಗೆ ನೌಕರಿಯಲ್ಲಿ ಕೆಲಸ ಮಾಡುತ್ತಿದ್ದರೆ 1.50. ಲಕ್ಷ ಸಂಬಳ ಪಡೆದುಕೊಂಡು ಸುಖವಾಗಿರಬಹುದಾಗಿತ್ತು.ಆದರೆ ನನ್ನ ಸ್ವ ಗ್ರಾಮ ಆಲಗೋಡಿನಲ್ಲಿ ನಡೆದ ಗಲಾಟೆ ಹಿನ್ನೆಲೆಯಲ್ಲಿ ಪ್ರತಿಭಟನೆಯಲ್ಲಿ ಭಾಗವಹಿಸಿದೆ. ಆ ಪ್ರತಿಭಟನೆ ನನಗೆ ಪ್ರೇರಣೆಯಾಗಿ ಹೋರಾಟಕ್ಕೆ ಇಳಿದೆ ಎಂದು ಹೋರಾಟದ ಹಾದಿಯನ್ನು ಸ್ಮರಿಸಿದರು.

ಅಂದಿನಿಂದ ಡಿಎಸ್ಎಸ್ ಸಂಘಟನೆಯಲ್ಲಿ ಪಾಲ್ಗೊಂಡು ಸಕ್ರಿಯ ಹೋರಾಟದಲ್ಲಿ ತೊಡಗಿಸಿಕೊಂಡು ಡಾ. ಬಿ ಆರ್ ಅಂಬೇಡ್ಕರ್ ರವರು ನೀಡಿದ ಸಂವಿಧಾನ ಮತ್ತು ಅವರ ಹೋರಾಟದ ಫಲದಿಂದ ಪಡೆದ ಹಕ್ಕುಗಳನ್ನು ಶೋಷಿತರಿಗೆ ನ್ಯಾಯ ಕೊಡಿಸುವ ನಿಟ್ಟಿನಲ್ಲಿ ಹೋರಾಟ ಮಾಡುತ್ತಾ ಬಂದೆ.ಆ ಹೋರಾಟದ ಫಲವೇ ಈ ಪ್ರಶಸ್ತಿಗಳು ನನಗೆ ದೊರೆಯಲು ಸಾಧ್ಯವಾಗಿದೆ. 30-08-2025. ರಂದು ಮೈಸೂರತ್ನ ಕಾಯಕ ಮೈಸೂರು ಪ್ರಶಸ್ತಿ,04-12-2018. ರಂದು ಭಾರತ ಜ್ಯೋತಿ ನವದೆಹಲಿ ಅವಾರ್ಡ್,15.09-2019. ರಂದು ಸರ್ಟಿಫಿಕೇಟ್ ಆಪ್ ಅಪ್ರಸಿಶಿಯೋಷನ್ ಪ್ರಶಸ್ತಿ ಪುವಾಲ್. 28-04-2029. ರಂದು ಐ. ಐ. ಎಫ್ ಎಸ್ ಇಂಟರ್ನ್ಯಾಷನಲ್ ಅವಾರ್ಡ್ ಕೊಲಂಬಿಯಾ. ಭಾರತ ರತ್ನ ಡಾಕ್ಟರ್ ಎಪಿಜಿ ಅಬ್ದುಲ್ ಕಲಾಂ ಎಕ್ಸಲೆನ್ಸ್ ಅವಾರ್ಡ್ ನವದೆಹಲಿ, 27-05-2019ಐ ಐ ಎಫ್ ಎಸ್ ಮಹಾತ್ಮ ಗಾಂಧಿ ಲೈಫ್ ಟೈಮರ್ ಅಚ್ಯಾಮೆಂಟ್ ಅವಾರ್ಡ್, ನವದೆಹಲಿ ,,05-07-2019. ಜೀವಲ್. ಆಪ್ ಇಂಡಿಯಾ ಅವಾರ್ಡ್, ದುಬೈ,14.07-2019. ರಂದು ಬೆಸ್ಟ್ ಸಿಟಿಜನ್ ಇಂಡಿಯಾ ನವ ದೆಹಲಿ,27-07-2021. ರಂದು ಗೌರವ ಡಾಕ್ಟರೇಟ್ ಪದವಿ ಐ ವಿ ಪಿ. ಯುನಿವರ್ಸಿಟಿ ಚೆನ್ನೈ ಈ ಪ್ರಶಸ್ತಿಗಳಿಗೆ ನಂದು ಅರ್ಜಿ ಹಾಕಿದವನಲ್ಲ ನನಗೆ ಗೊತ್ತಿಲ್ಲದೆ ನನ್ನ ಗಮನಕ್ಕೆ ಬಾರದೆ ಲಭಿಸಿದ ಪ್ರಶಸ್ತಿಗಳಾಗಿವೆ ಎಂದರು.
ಒಕ್ಕೂಟದ ಸಂಚಾಲಕ ಬನ್ನಹಳ್ಳಿ ಸೋಮಣ್ಣ,ಮುಖಂಡ ಕರೋಹಟ್ಟಿ ಪ್ರಭುಸ್ವಾಮಿ ಮಾತನಾಡಿ ಚಂದ್ರಶೇಖರ್ ಅವರು ಕ್ಲಾಸ್ ವನ್ ಗುತ್ತಿಗೆದರಾಗಿ ತಮ್ಮ ಕುಟುಂಬದೊಂದಿಗೆ ಸುಖದಿಂದ ಬದುಕಬೇಕಾದವರು ಸಮಾಜದಲ್ಲಿ ನಡೆಯುತ್ತಿರುವ ಅನ್ಯಾಯ ದಬ್ಬಾಳಿಕೆ ದೌರ್ಜನಗಳನ್ನು ಕಂಡು ಹೋರಾಟಕ್ಕೆ ಇಳಿದವರು.ಇವರ ಹೋರಾಟ ತತ್ವ ಸಿದ್ಧಾಂತಗಳು ನಮಗೆ ಸ್ಪೂರ್ತಿಯಾಗಿದೆ.
ಯಾವುದೇ ಪ್ರಶಸ್ತಿ ದೊರೆ ಬೇಕಾದರೆ ಶ್ರಮದ ಪ್ರತಿಫಲದ ಮೇಲೆ ಹಾಗಾಗಿ ಇವರು ಜನಸೇವೆಯಲ್ಲಿ ಫಲ ಅಪೇಕ್ಷೆ ಪಡೆಯದೆ ಹೋರಾಟದ ಫಲವಾಗಿ ದೊರೆತ ಪ್ರಶಸ್ತಿಗಳಾಗಿವೆ. ಇವುಗಳನ್ನು ಪಡೆಯಬೇಕಾದರೆ ಯೋಗ್ಯತೆ ಅರ್ಹತೆ ಇರಬೇಕು.ಇವೆರಡು ಡಾ. ಚಂದ್ರಶೇಖರವರಲ್ಲಿ ಇವೆ ಎಂದರು .
ಈ ಸಮಯದಲ್ಲಿ ಡಿಎಸ್ಎಸ್ ಜಿಲ್ಲಾ ಸಂಘಟನಾ ಸಂಚಾಲಕ ಯಡದೊರೆ ಮಹದೇವಯ್ಯ, ಜಿಲ್ಲಾ ಸಂಚಾಲಕ ಕೆಬ್ಬೆಹುಂಡಿ ಲಿಂಗರಾಜು,ತಾಲೂಕು ಸಂಚಾಲಕ ಕೆಂಪಯ್ಯನಹುಂಡಿ ರಾಜು, ಮಂಡ್ಯ ಜಿಲ್ಲೆ ಸಂಚಾಲಕಿ ಮೀನಾಕ್ಷಿ, ಮನೋಜ್ ಕುಮಾರ್, ಮರಿಸ್ವಾಮಿ, ತೊಟ್ಟುವಾಡಿ ರಾಜಪ್ಪ, ಪ್ರಭಾಕರ್ ಗವಿಸಿದ್ದಯ್ಯ, ಪ್ರೇಮ್ ಕುಮಾರ್, ಶಿವಲಿಂಗಯ್ಯ ಪ್ರಭಾಕರ್, ಮಹದೇವ ಪ್ರಸಾದ್, ಶಿವಕುಮಾರ್, ಬಸವರಾಜು ಪುಟ್ಟಸ್ವಾಮಿ, ರಂಗಸ್ವಾಮಿ ಸೇರಿದಂತೆ ಇತರೆ ಮುಖಂಡರು ಉಪಸ್ಥಿತರಿದ್ದರು.
– ಎಂ.ನಾಗೇಂದ್ರಕುಮಾರ್
