
ಮಾರ್ನಿಂಗ್ ಕ್ವಿಕ್ ನ್ಯೂಸ್ ಟೈಮ್
1.ಬಾಂಗ್ಲಾದೇಶ ವಿಚಾರವನ್ನು ಮೋದಿಗೆ ಬಿಟ್ಟಿದ್ದೀವಿ, ಅವರೇ ನೋಡಿಕೊಳ್ತಾರೆ ಎಂದ ಟ್ರಂಪ್
ಶೇಖ್ ಹಸೀನಾ ಸರ್ಕಾರದ ಪತನದ ನಂತರ ಬಾಂಗ್ಲಾದೇಶದಲ್ಲಿ ಅವ್ಯವಸ್ಥೆ ಮುಂದುವರೆದಿದೆ. ಈ ಇಸ್ಲಾಮಿಕ್ ದೇಶಗಳಲ್ಲಿ ಜಿಹಾದಿ ಶಕ್ತಿಗಳು ತಲೆ ಎತ್ತಲು ಪ್ರಾರಂಭಿಸಿವೆ, ಇದರಿಂದಾಗಿ ಅಂತಾರಾಷ್ಟ್ರೀಯ ಬೆದರಿಕೆ ಎದುರಾಗಿದೆ. ಹಿಂದಿನ ಬೈಡನ್ ಆಡಳಿತವು ಈ ನಿಲುವನ್ನು ಬೆಂಬಲಿಸಿದ್ದರಿಂದ ಇದು ಡೊನಾಲ್ಡ್ ಟ್ರಂಪ್ ಅವರ ವಿದೇಶಾಂಗ ನೀತಿಗೆ ಸವಾಲಾಗಿ ಪರಿಣಮಿಸಿದೆ. ವಾಷಿಂಗ್ಟನ್ನಲ್ಲಿ ವ್ಯಾಪಾರ ಮತ್ತು ಭಾರತ-ಯುಎಸ್ ಸಂಬಂಧಗಳ ಬಗ್ಗೆ ಚರ್ಚಿಸಿದ ನಂತರ ನಡೆದ ಜಂಟಿ ಪತ್ರಿಕಾಗೋಷ್ಠಿಯಲ್ಲಿ ಟ್ರಂಪ್ ಹೇಳಿದರು.
*****
2.2030ರ ವೇಳೆ 500 ಬಿಲಿಯನ್ ಡಾಲರ್ ತಲುಪಲಿದೆ ಇಂಡೋ-ಯುಎಸ್ ಟ್ರೇಡ್!
2030 ರ ವೇಳೆಗೆ ಭಾರತ ಮತ್ತು ಅಮೆರಿಕ ತಮ್ಮ ದ್ವಿಪಕ್ಷೀಯ ವ್ಯಾಪಾರವನ್ನು 500 ಬಿಲಿಯನ್ ಡಾಲರ್ಗಳಿಗೆ ಹೆಚ್ಚಿಸಲು ಒಪ್ಪಿಕೊಂಡಿವೆ. ರಕ್ಷಣೆಯಿಂದ ಹಿಡಿದು ಕೃತಕ ಬುದ್ಧಿಮತ್ತೆಯವರೆಗೆ ಎರಡೂ ದೇಶಗಳ ನಡುವಿನ ದ್ವಿಪಕ್ಷೀಯ ಸಹಕಾರವನ್ನು ವಿವರಿಸಲಾಗಿದೆ. ತೈಲ ಮತ್ತು ಅನಿಲ ವ್ಯಾಪಾರ, ನವೀಕರಿಸಬಹುದಾದ ಇಂಧನ ಹೂಡಿಕೆಗಳು ಮತ್ತು ರಕ್ಷಣಾ ಸಹಕಾರವನ್ನು ಹೆಚ್ಚಿಸಲು ಎರಡೂ ದೇಶಗಳು ಪ್ರತಿಜ್ಞೆ ಮಾಡಿವೆ.
*****
3.ರಾಜ್ಯದಲ್ಲಿನ 9 ಹೊಸ ವಿಶ್ವವಿದ್ಯಾಲಯಗಳನ್ನು ಮುಚ್ಚಲು ಸಂಪುಟ ಉಪಸಮಿತಿ ತೀರ್ಮಾನ!
ಕರ್ನಾಟಕ ಸರ್ಕಾರವು ಬಿಜೆಪಿ ಆಡಳಿತಾವಧಿಯಲ್ಲಿ ಸ್ಥಾಪಿಸಲಾದ ಹತ್ತು ಹೊಸ ವಿಶ್ವವಿದ್ಯಾಲಯಗಳ ಪೈಕಿ ಒಂಭತ್ತು ವಿಶ್ವವಿದ್ಯಾಲಯಗಳನ್ನು ಮುಚ್ಚಲು ನಿರ್ಧರಿಸಿದೆ. ಆರ್ಥಿಕ ಸಂಕಷ್ಟ ಮತ್ತು ಭೂ ಕೊರತೆಯೇ ಇದಕ್ಕೆ ಕಾರಣ ಎಂದು ವರದಿಯಲ್ಲಿ ಉಲ್ಲೇಖವಾಗಿದೆ ಎಂದು ಮೂಲಗಳಿಂದ ತಿಳಿದುಬಂದಿದೆ. ಬೀದರ್ ವಿಶ್ವವಿದ್ಯಾಲಯವನ್ನು ಮಾತ್ರ ಉಳಿಸಿಕೊಳ್ಳಲಾಗಿದೆ.
*****
4. ಮುಖ್ಯಮಂತ್ರಿ ಬದಲಾವಣೆ ಬಗ್ಗೆ ಹೈಕಮಾಂಡ್ ಯೋಚಿಸುತ್ತಿಲ್ಲವಾದ್ದರಿಂದ ಆ ಪ್ರಶ್ನೆಯೇ ಅಪ್ರಸ್ತುತ: ಡಿಕೆ ಸುರೇಶ್
ಬೆಂಗಳೂರು: ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ಬಗ್ಗೆ ಯಾವುದೇ ಮಾತುಕತೆ ನಡೆದಿಲ್ಲ ಮತ್ತು ಅದು ಎಐಸಿಸಿ ವಿವೇಚನೆಗೆ ಬಿಟ್ಟ ವಿಚಾರ, ವರಿಷ್ಠರು ತೆಗೆದುಕೊಳ್ಳುವ ನಿರ್ಣಯಕ್ಕೆ ಎಲ್ಲರೂ ಬದ್ಧರಾಗಿರುತ್ತಾರೆ ಎಂದು ಮಾಜಿ ಸಂಸದ ಡಿಕೆ ಸುರೇಶ್ ಹೇಳಿದರು.
*****
5.ಮಾವನ ಆಸ್ತಿಗೆ ಅಳಿಯ ಉತ್ತರಾಧಿಕಾರಿ ಅಲ್ಲ: ಕಾನೂನು ಬದ್ಧ ಉತ್ತರಾಧಿಕಾರಿ ಮಾತ್ರ ಆಸ್ತಿಗೆ ಪ್ರತಿನಿಧಿ: ಹೈಕೋರ್ಟ್
ಮೃತ ಮಾವನ ಆಸ್ತಿಯನ್ನು ಪ್ರತಿನಿಧಿಸಲು ಮತ್ತು ಹಿತಾಸಕ್ತಿ ರಕ್ಷಣೆ ಮಾಡಲು ಕಾನೂನುಬದ್ಧ ಉತ್ತರಾಧಿಕಾರಿ ಎಂದು ಘೋಷಿಸುವಂತೆ ಮೊದಲ ಪುತ್ರಿಯ ಪತಿ ಸಲ್ಲಿಸಿದ್ದ ಅರ್ಜಿಯನ್ನು ಹೈಕೋರ್ಟ್ ವಜಾಗೊಳಿಸಿದೆ. ಕಾನೂನುಬದ್ಧ ಉತ್ತರಾಧಿಕಾರಿ ಮಾತ್ರ ಆಸ್ತಿಯನ್ನು ಪ್ರತಿನಿಧಿಸಬಹುದು ಮತ್ತು ಅರ್ಜಿದಾರರು ಆಸ್ತಿಯಲ್ಲಿ ಭಾಗಕ್ಕೆ ಅರ್ಹರಾಗಿದ್ದಾರೆಯೇ ಹೊರತು ಉತ್ತರಾಧಿಕಾರಿಯಲ್ಲ ಎಂದು ನ್ಯಾಯಾಲಯ ತಿಳಿಸಿದೆ.
******
6.ಮಣಿಪುರದಲ್ಲಿ ರಾಷ್ಟ್ರಪತಿ ಆಳ್ವಿಕೆ ಹೇರಲು ಸಾಂವಿಧಾನಿಕ ಬಿಕ್ಕಟ್ಟು ಕಾರಣ: ಕಾಂಗ್ರೆಸ್
ಈ ಕುರಿತು X ನಲ್ಲಿ ಪೋಸ್ಟ್ ಮಾಡಿರುವ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಮಣಿಪುರದಲ್ಲಿ ಸಾಂವಿಧಾನಿಕ ಬಿಕ್ಕಟ್ಟು ಸೃಷ್ಟಿಯಾಗಿತ್ತು. ಇದು ರಾಷ್ಟ್ರಪತಿ ಆಳ್ವಿಕೆ ಹೇರಲು ಕಾರಣವಾಯಿತು ಎಂದು ಹೇಳಿದ್ದಾರೆ.
******
7. 3 ಟರ್ಮಿನಲ್ ಮೂಲಕ ವಾರ್ಷಿಕ 115 ಮಿ. ಪ್ರಯಾಣಿಕರ ಸೆಳೆಯುವ ನಿರೀಕ್ಷೆಯಲ್ಲಿ KIA: ಆರ್ಥಿಕತೆಗೆ ಒತ್ತು
ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ(BIAL)ದ ಅಂಗಸಂಸ್ಥೆಯಾದ ಬೆಂಗಳೂರು ವಿಮಾನ ನಿಲ್ದಾಣ ನಗರ ಲಿಮಿಟೆಡ್ (BACL) ನ ಕಾರ್ಯನಿರ್ವಾಹಕ ನಿರ್ದೇಶಕ ಮತ್ತು ಸಿಇಒ ರಾವ್ ಮುನುಕುಟ್ಲ, ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ಟರ್ಮಿನಲ್ 2 ರ ಎರಡನೇ ಹಂತದ ವಿನ್ಯಾಸ ಕೆಲಸ ಆರಂಭವಾಗಿದ್ದು, ಈ ವರ್ಷಾಂತ್ಯ ವೇಳೆಗೆ ಕೆಲಸವನ್ನು ಪ್ರಾರಂಭಿಸುವ ಭರವಸೆಯಿದೆ ಎಂದರು.
*******
8. ಸಣ್ಣ – ಮಧ್ಯಮ ಕೈಗಾರಿಕೆಗಳು ನಮ್ಮ ಆಸ್ತಿ: 2ನೇ ಹಾಗೂ 3ನೇ ಹಂತದ ನಗರಗಳತ್ತ ಮುಖ ಮಾಡಿ; ಉದ್ಯಮಿಗಳಿಗೆ DCM ಸಲಹೆ
“ಇಲ್ಲಿರುವ ಎಲ್ಲಾ ಉದ್ಯಮಿಗಳು ನಮ್ಮ ರಾಜ್ಯದ ಆಸ್ತಿ. ನೀವು ಬಲಿಷ್ವಾದಷ್ಟು ನಾವು ಬಲಿಷ್ಠವಾಗಿರುತ್ತದೆ. ನೀವು ದುರ್ಬಲವಾದರೆ ನಾವು ದುರ್ಬಲವಾಗುತ್ತೇವೆ ಎಂದು ನಮ್ಮ ಸರ್ಕಾರ ನಂಬಿದೆ.
******
9.ನಾಡಪ್ರಭು ಕೆಂಪೇಗೌಡರ ಬೆಂಗಳೂರಿನ ಅಸ್ತಿತ್ವ ಕಳೆದು ಹೋಗುತ್ತಿದೆ: ನಗರದ ಒಳಿತಿಗಾಗಿ ಉಸ್ತುವಾರಿ ಸಚಿವರನ್ನು ಬದಲಿಸಿ; CM ಗೆ ಮುನಿರತ್ನ ಪತ್ರ
ಆಯವ್ಯಯದಲ್ಲಿ ಬೆಂಗಳೂರು ನಗರಕ್ಕೆ ನೀಡುವ ಅನುದಾನದ ಕುರಿತು ಈಗಾಗಲೇ ವ್ಯವಹಾರ ಕುದುರಿಸಲಾಗಿದೆ. ಆಂಧ್ರ ಪ್ರದೇಶದ ಗುತ್ತಿಗೆದಾರರು ರಾಜ್ಯದ ಗುತ್ತಿಗೆದಾರರ ಮೇಲೆ ಸವಾರಿ ಮಾಡುತ್ತಿದ್ದಾರೆ.
*******