ಬೆಂಗಳೂರು, ಜುಲೈ 20: ಬಹುಚರ್ಚಿತ ಧರ್ಮಸ್ಥಳದ ಶಂಕಿತ ಶವ ಹೂತಿರುವ ಪ್ರಕರಣ ಹಾಗೂ ಸೌಜ್ಯನ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕರ್ನಾಟಕ ಸರ್ಕಾರ ವಿಶೇಷ ತನಿಖಾ ತಂಡ (SIT) ರಚನೆ ಮಾಡಿ ಅಧಿಕೃತ ಆದೇಶ ಹೊರಡಿಸಿದೆ. ಈ ಮೂಲಕ ಪ್ರಕರಣಕ್ಕೆ ತೀವ್ರತೆ ಮತ್ತು ನವ ಸಂಧರ್ಭ ಸಿಕ್ಕಿದ್ದು, ಸರ್ಕಾರ ತನಿಖೆಯ ಗಂಭೀರತೆಯತ್ತ ಮುನ್ನಡೆಯುತ್ತಿದೆ.
ಇನ್ನೂ ನೆನ್ನೆಯಷ್ಟೇ ಗೃಹ ಸಚಿವರು ಮತ್ತು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು “ತನಿಖೆಗೆ ತೀರ್ಮಾನ ಆಗಿಲ್ಲ” ಎಂದಿದ್ದರೂ, ಅದರ ಬೆನ್ನಲ್ಲೇ ಸರ್ಕಾರ ತನ್ನ ನಿಲುವು ಬದಲಿಸಿ ಅಧಿಕೃತವಾಗಿ SIT ರಚನೆ ಮಾಡಿರುವುದು ಪ್ರಮುಖ ಬೆಳವಣಿಗೆ.
🔎 ತನಿಖೆಗೆ ನೇಮಕವಾದ SIT ಅಧಿಕಾರಿಗಳು:
- ಡಾ. ಪ್ರಣವ್ ಮೊಹಾಂತಿ, ಐಪಿಎಸ್ – ಪೊಲೀಸ್ ಮಹಾ ನಿರ್ದೇಶಕರು, ಆಂತರಿಕ ಭದ್ರತಾ ವಿಭಾಗ, ಬೆಂಗಳೂರು (ತಂಡದ ಮುಖ್ಯಸ್ಥ)
- ಎಂ.ಎನ್. ಅನುಚೇತ್, ಐಪಿಎಸ್ – ಉಪ ಪೊಲೀಸ್ ಮಹಾ ನಿರೀಕ್ಷಕರು, ನೇಮಕಾತಿ, ಬೆಂಗಳೂರು
- ಸೌಮ್ಯಲತಾ, ಐಪಿಎಸ್ – ಉಪ ಪೊಲೀಸ್ ಆಯುಕ್ತರು, ಸಿ.ಎ.ಆರ್ ಕೇಂದ್ರಸ್ಥಾನ, ಬೆಂಗಳೂರು
- ಜಿತೇಂದ್ರ ಕುಮಾರ್ ದಯಾಮ, ಐಪಿಎಸ್ – ಪೊಲೀಸ್ ಅಧೀಕ್ಷಕರು, ಆಂತರಿಕ ಭದ್ರತಾ ವಿಭಾಗ
📜 ಸರ್ಕಾರಿ ಆದೇಶದ ತತ್ವಗಳು:
- ಧರ್ಮಸ್ಥಳ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ದಾಖಲಾಗಿರುವ ಮೊ.ಸಂ. 39/2025ರಂತೆ, ಭಾರತೀಯ ದಂಡ ಸಂಹಿತೆ (BNS) ಕಲಂ 211(ಎ) ಅಡಿಯಲ್ಲಿ ಪ್ರಕರಣ ದಾಖಲಾಗಿದೆ.
- ಕರ್ನಾಟಕ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷರು ಸಲ್ಲಿಸಿದ ಪತ್ರದ ಪ್ರಕಾರ, ನೂರಾರು ಶವಗಳು ಹೂತಿರುವ ಬಗ್ಗೆ ನ್ಯಾಯಾಲಯದಲ್ಲಿ ವ್ಯಕ್ತಿಯೊಬ್ಬರ ಹೇಳಿಕೆ ದಾಖಲಾಗಿದ್ದು, ಜುಲೈ 12ರಂದು ಮಾಧ್ಯಮಗಳಲ್ಲಿ ತಲೆಬುರುಡೆ ಪತ್ತೆಯಾದ ವರದಿಗಳು ಪ್ರಸಾರವಾಗಿದೆ.
- ಕಳೆದ 20 ವರ್ಷಗಳಿಂದಲೂ ಧರ್ಮಸ್ಥಳದಲ್ಲಿ ಮಹಿಳೆಯರು, ವೈದ್ಯಕೀಯ ವಿದ್ಯಾರ್ಥಿನಿಯರು ನಾಪತ್ತೆಯಾಗಿರುವ ಪ್ರಕರಣಗಳು, ಕೊಲೆ, ಅತ್ಯಾಚಾರ, ಅಸ್ವಾಭಾವಿಕ ಸಾವುಗಳ ಬಗ್ಗೆ ಸಮಗ್ರ ತನಿಖೆ ನಡೆಸುವಂತೆ ಸೂಚಿಸಲಾಗಿದೆ.
📌 ಸರ್ಕಾರದ ನಿಲುವು:
ಈ ಎಲ್ಲಾ ವಿಚಾರಗಳನ್ನು ಪರಿಗಣಿಸಿ, ರಾಜ್ಯ ಸರ್ಕಾರವು ನ್ಯಾಯೋಚಿತ ತನಿಖೆಗೆ SIT ರಚನೆ ಮಾಡುವುದು ಸೂಕ್ತವೆಂದು ತೀರ್ಮಾನಿಸಿದೆ. ತನಿಖೆಗೆ ನೇಮಕಗೊಂಡ ಅಧಿಕಾರಿಗಳಿಗೆ ಸಂಪೂರ್ಣ ಸಹಕಾರ ನೀಡಲಾಗುವುದು ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.
