ಟಿ.ನರಸೀಪುರ, ಜುಲೈ 25 – ಪಟ್ಟಣದ ಪುರಸಭೆಯ ಸದಸ್ಯ ಟಿ.ಎನ್. ನಂಜುಂಡಸ್ವಾಮಿಗೆ ಸಂಬಂಧಿಸಿದ ಲಂಚದ ಹಗರಣವನ್ನು ಪುರಸಭೆ ಸ್ಥಾಯಿ ಸಮಿತಿ ಅಧ್ಯಕ್ಷರು ಸೇರಿದಂತೆ ಹಲವು ಸದಸ್ಯರು ತೀವ್ರವಾಗಿ ಖಂಡಿಸಿದ್ದಾರೆ. “ತಪ್ಪು ಯಾರೇ ಮಾಡಿದರು ತಪ್ಪೇ, ಕಾನೂನಿನ ಚೌಕಟ್ಟಿನಲ್ಲಿ ಶಿಕ್ಷೆ ತಪ್ಪಿಸಿಕೊಳ್ಳಲಾಗದು,” ಎಂದು ಅಧ್ಯಕ್ಷ ತುಂಬಲ ಸಿ. ಪ್ರಕಾಶ್ ತೀವ್ರ ಪ್ರತಿಕ್ರಿಯೆ ನೀಡಿದರು.
ಪುರಸಭೆ ಸಭಾಂಗಣದಲ್ಲಿ ನಡೆದ ತುರ್ತು ಸಭೆಯಲ್ಲಿ ಮಾತನಾಡಿದ ಅವರು, “ಮತದಾರರು ನಿಸ್ವಾರ್ಥ ಸೇವೆಗಾಗಿ ನಮ್ಮನ್ನು ಆಯ್ಕೆ ಮಾಡಿದ್ದು, ನಾವು ಅವರ ವಿಶ್ವಾಸಕ್ಕೆ ತಕ್ಕಂತೆ ವರ್ತಿಸಬೇಕು,” ಎಂದು ಹೇಳಿದರು. ನಂಜುಂಡಸ್ವಾಮಿ ಅವರು ಕೆನರಾ ಬ್ಯಾಂಕ್ ನಕಲಿ ಚಾನಲ್ ಹಾಗೂ ಸೀಲ್ ಬಳಸಿ ಆಸ್ತಿ ತೆರಿಗೆ ಹಣ ದುರುಪಯೋಗ ಪಡಿಸಿಕೊಂಡಿರುವ ಆರೋಪ ಎದುರಿಸುತ್ತಿದ್ದಾರೆ.
ಸಭೆಯಲ್ಲಿ ಪಾಲ್ಗೊಂಡ ಪುರಸಭೆ ಸದಸ್ಯ ಕಿರಣ್, “ಇದು ಪಟ್ಟಣದ ಹೆಗ್ಗಳಿಕೆಗೆ ಧಕ್ಕೆಯಾಗಿದ್ದು, ಆರೋಪಿತನ ಎಲ್ಲ ದಾಖಲೆಗಳನ್ನು ಪರಿಶೀಲಿಸಬೇಕು” ಎಂದು ಒತ್ತಾಯಿಸಿದರು. ಸದಸ್ಯ ಆಲಗೂಡು ಗುರುಸ್ವಾಮಿ, “ಪುರಸಭೆಯ ಭೂ ಸ್ವಾಧೀನವಾದ ಕಬಿನಿ ನಾಳೆಯ ಹದ್ದುಬಸ್ತು ತ್ವರಿತಗೊಳಿಸಬೇಕು,” ಎಂದು ಸರ್ಕಾರದ ನಾಮಿನೇಟ್ ಸದಸ್ಯರ ಬಗ್ಗೆಯೂ ಗಮನ ಸೆಳೆದರು.
ಸಭೆಯಲ್ಲಿ ಅಧ್ಯಕ್ಷ ವಸಂತ ಶ್ರೀಕಂಠ, ಉಪಾಧ್ಯಕ್ಷೆ ರಾಜೇಶ್ವರಿ ರಾಘವೇಂದ್ರ, ಸದಸ್ಯರು ಎಳವರಹುಂಡಿ ಸೋಮು, ಆಲಗೂಡು ಮದನ್ ರಾಜ್, ಎಲ್. ಮಂಜುನಾಥ್, ಸಯ್ಯದ್ ಅಹಮದ್, ಬೇಬಿ ಹೇಮಂತಕುಮಾರ್, ರೂಪ ಪರಮೇಶ್, ಮೆಡಿಕಲ್ ನಾಗರಾಜು, ಸಿದ್ದು ಹಾಗೂ ಸಿಬ್ಬಂದಿವರ್ಗದವರು ಹಾಜರಿದ್ದರು.
– ವರದಿ: ಎಂ. ನಾಗೇಂದ್ರಕುಮಾರ್

[…] ಟಿ.ನರಸೀಪುರ ಪುರಸಭೆ ಹಗರಣ: ಪುರಸಭಾ ಸದಸ್ಯನ … […]