
ಯಾರಿದ್ದರೇನು..?
ಯಾರಿಲ್ಲದಿದ್ದರೇನು..?
ಇವನೊಬ್ಬನಿದ್ದರೆ
ಪ್ರಪಂಚವನ್ನೇ ಗೆಲ್ಲುವೆ ನಾನು..!!
ದುಡಿಮೆಯಲಿ
ಬಡವನಾದರೇನು..?
ದೇಹದಲಿ
ಹಸಿವಿದ್ದರೇನು..?
ಇವನೊಬ್ಬನಿದ್ದರೆ
ಹೃದಯದಲ್ಲಿ ಶ್ರೀಮಂತ ನಾನು..!!
ಕೈಯಲಿ
ಕಾಸಿಲ್ಲದಿದ್ದರೇನು..?
ಹಣೆಬರಹದಲಿ
ಆಯುಷ್ಯವಿಲ್ಲದಿದ್ದರೇನು..?
ಇವನೊಬ್ಬನಿದ್ದರೆ
ಇತಿಹಾಸದಲಿ ಅಜರಾಮರ ನಾನು..!!
ನನ್ನಪ್ಪನಿವನು….
ದುಡಿಯಲು ಶಕ್ತಿ ನೀಡಿದವನು..
ಬಾಳಲು ಸಂಸ್ಕೃತಿ ನೀಡಿದವನು..
ಹೆಚ್ಚೇನು ಬಯಸೆನು
ಇವನೊಬ್ಬನಿದ್ದರೆ
ಮತ್ತೇನು ಬೇಡೆನು..!!
–ಅಪರಿಚಿತ ಮೌನಿ