ಚನ್ನರಾಯಪಟ್ಟಣ:ಹಾಸನ ಜಿಲ್ಲೆ ಚನ್ನರಾಯಪಟ್ಟಣದ ಗಾಂಧಿ ಸರ್ಕಲ್ ನಲ್ಲಿ ಮಂತ್ರಾಲಯದ ಶ್ರೀ ರಾಘವೇಂದ್ರ ಸ್ವಾಮಿಗಳವರ ಮಠದ ಪೀಠಾಧಿಪತಿಗಳಾದ ಪರಮಪೂಜ್ಯ ಶ್ರೀ ಶ್ರೀ ಡಾ.ಸುಭುದೇಂದ್ರ ತೀರ್ಥ ಶ್ರೀಪಾದಂಗಳವರ ಆಶೀರ್ವಾದ ಹಾಗೂ ಪಾದಸ್ಪರ್ಶ ಅಮೃತ ಹಸ್ತದಿಂದ ಸ್ಥಾಪನೆಗೊಂಡಿರುವ ರಾಯರ ರಂಗಮಂದಿರದಲ್ಲಿ ಆಗಸ್ಟ್ 10 ರಿಂದ 13 ರವರೆಗೆ ಮೂರು ದಿವಸಗಳ ಕಾಲ 354 ನೇ ಗುರುಸಾರ್ವಭೌಮ ಶ್ರೀ ರಾಘವೇಂದ್ರ ಸ್ವಾಮಿಗಳ ಆರಾಧನಾ ಮಹೋತ್ಸವದಲ್ಲಿ ಪ್ರತಿದಿನ ಬೆಳಗ್ಗೆ ಪಂಚಾಮೃತ ಅಭಿಷೇಕ ಪಾದಪೂಜೆ ಶ್ರೀ ರಾಘವೇಂದ್ರ ಸ್ವಾಮಿಗಳವರಿಗೆ ವಿಶೇಷ ಅಲಂಕಾರ ಮಹಾಮಂಗಳಾರತಿ ಪ್ರತಿದಿನ ಮಧ್ಯಾಹ್ನ ಅನ್ನಪ್ರಸಾದ ಸೋಮವಾರ ಸಂಜೆ ಚನ್ನರಾಯಪಟ್ಟಣದ ಪ್ರಮುಖ ರಸ್ತೆಗಳಲ್ಲಿ ಶ್ರೀ ರಾಘವೇಂದ್ರ ಸ್ವಾಮಿಗಳವರೋದಿಗೆ ಕಾಮದೇನು- ರಾಧೆಯೊಂದಿಗೆ ಅದ್ದೂರಿ ಉತ್ಸವ ಜೊತೆಗೆ 1000 ದೀಪದೊಂದಿಗೆ ದೀಪೋತ್ಸವವನ್ನು ಹಾಗು ಪ್ರತಿದಿನ ಬೆಳಗ್ಗೆ ಏಳು ಗಂಟೆಯಿಂದ 9 ಗಂಟೆವರೆಗೆ ಸ್ಥಳೀಯ ಭಜನ ತಂಡದವರೊಂದಿಗೆ ಭಜನಾ ಕಾರ್ಯಕ್ರಮ ಪ್ರತಿದಿನ ಬೆಳಗ್ಗೆ 9:00 ರಿಂದ ರಾತ್ರಿ 7:00ವರೆಗೆ ಕರ್ನಾಟಕ ರಾಜ್ಯದ ಪ್ರಸಿದ್ಧ ಕಲಾತಂಡಗಳಿಂದ ಸಂಗೀತ ಮತ್ತು ಭರತನಾಟ್ಯ ಕಾರ್ಯಕ್ರಮವನ್ನು ಭಕ್ತರ ಸಹಕಾರದಿಂದ ಏರ್ಪಡಿಸಲಾಗಿದೆ ಹಾಗು ಶ್ರೀ ರಾಘವೇಂದ್ರ ಸ್ವಾಮಿಗಳು ನೀಡುವ ಮಂತ್ರಾಕ್ಷತೆಗೆ ಅಪಾರ ಶಕ್ತಿಯಿದೆ. ಒಮ್ಮೆ ಒಬ್ಬ ಬಡ ವಿದ್ಯಾರ್ಥಿ ಕಷ್ಟದಲ್ಲಿದ್ದಾಗ ಸ್ವಾಮಿಗಳು ನೀಡಿದ ಮಂತ್ರಾಕ್ಷತೆಯು ದಾರಿಯಲ್ಲಿ ಪಿಶಾಚಿಯನ್ನು ನಾಶಪಡಿಸಿತು. ಇದರ ಮೂಲಕ ದುಷ್ಟಶಕ್ತಿಗಳ ವಿನಾಶ ಮತ್ತು ಕಷ್ಟಗಳ ಪರಿಹಾರ ಸಾಧ್ಯ ಎಂದು ನಂಬಿದ್ದೇವೆ .
ಕಷ್ಟಗಳನ್ನು ನಿವಾರಿಸುವುದು:
ಕಲ್ಪವೃಕ್ಷ ಮತ್ತು ಕಾಮಧೇನುವಿನಂತೆ ರಾಘವೇಂದ್ರ ಸ್ವಾಮಿಗಳು ಭಕ್ತರ ಇಷ್ಟಾರ್ಥಗಳನ್ನು ಈಡೇರಿಸುತ್ತಾರೆ. ಏಕಾಗ್ರತೆ ಮತ್ತು ಪವಿತ್ರ ಮನಸ್ಸಿನಿಂದ ಅವರ ಸ್ತೋತ್ರಗಳನ್ನು ಪಠಿಸುವುದರಿಂದ ಜೀವನದ ತೊಂದರೆಗಳು ನಿವಾರಣೆಯಾಗುತ್ತವೆ ಎಂದು ನಂಬಲಾಗಿದೆ.
ಭೌತಿಕ ಮತ್ತು ಆಧ್ಯಾತ್ಮಿಕ ಉಪಸ್ಥಿತಿಯಲ್ಲಿ 16ನೇ ಶತಮಾನದ ಸಂತರು ಮಾಧ್ವ ಸನ್ಯಾಸಿಗಳಲ್ಲಿ ಪ್ರಮುಖರಾದ ರಾಘವೇಂದ್ರ ಸ್ವಾಮಿಗಳು ತಮ್ಮ ಭೌತಿಕ ದೇಹವನ್ನು 1671ರಲ್ಲಿ ಮಂತ್ರಾಲಯದ ಬೃಂದಾವನದಲ್ಲಿ ಸ್ವೀಕರಿಸಿದರು. ಇಂದಿಗೂ ಲಕ್ಷಾಂತರ ಭಕ್ತರು ಈ ಬೃಂದಾವನದಲ್ಲಿ ಭೌತಿಕ ಅಥವಾ ಆಧ್ಯಾತ್ಮಿಕ ರೂಪದಲ್ಲಿ ಸ್ವಾಮಿಗಳ ಉಪಸ್ಥಿತಿ ಮತ್ತು ಅನುಗ್ರಹವನ್ನು ಅನುಭವಿಸುತ್ತಾರೆ ಎಂದು ನಂಬುತ್ತೇವೆ.
ಶ್ರೀ ರಾಘವೇಂದ್ರ ಸ್ವಾಮಿಗಳು ಸತ್ಯ ಮತ್ತು ಧರ್ಮದ ಜೀವಂತ ಉದಾಹರಣೆಯಾಗಿದ್ದಾರೆ. ಅವರ ಅನುಯಾಯಿಗಳು ಮಧ್ವಾಚಾರ್ಯರ ದ್ವೈತ ತತ್ತ್ವಶಾಸ್ತ್ರವನ್ನು ಅನುಸರಿಸಿ, ವಿಷ್ಣುವನ್ನು ಸರ್ವೋಚ್ಚ ದೇವರಾಗಿ ಪೂಜಿಸುತ್ತಿದ್ದೇವೆ ಎಂದು ರಂಗಮಂದಿರದ ಕಾರ್ಯದರ್ಶಿ ಅನಿತಾ ಪ್ರಕಾಶ್ ತಿಳಿಸಿದರು.
