ದೆಹಲಿ: ಕೇಂದ್ರೀಯ ಮಾಧ್ಯಮಿಕ ಶಿಕ್ಷಣ ಮಂಡಳಿ (CBSE) ತನ್ನ ವಿದ್ಯಾರ್ಥಿಗಳು, ಶಿಕ್ಷಕರು ಮತ್ತು ಇತರ ಪಾಲುದಾರರಿಗಾಗಿ ಪ್ರತ್ಯೇಕ ಸಮುದಾಯ ರೇಡಿಯೋ ಕೇಂದ್ರವನ್ನು ಸ್ಥಾಪಿಸಲು ಮುಂದಾಗಿದೆ. ಇತ್ತೀಚಿನ ಆಡಳಿತ ಮಂಡಳಿ ಸಭೆಯಲ್ಲಿ ಈ ಪ್ರಸ್ತಾವನೆಗೆ ಅನುಮೋದನೆ ದೊರೆತಿದ್ದು, ಪರವಾನಗಿ ಪಡೆಯಲು ಅರ್ಜಿ ಸಲ್ಲಿಸುವ ನಿರ್ಧಾರ ಕೈಗೊಳ್ಳಲಾಗಿದೆ. ಮುಂದಿನ ಆರು ತಿಂಗಳಲ್ಲಿ ತಜ್ಞರು ಮತ್ತು ಪಾಲುದಾರರೊಂದಿಗೆ ಸಮಾಲೋಚನೆ ನಡೆಸಿ, ಕಾರ್ಯಯೋಜನೆ ರೂಪಿಸಲಾಗುವುದು.
CBSE ಈಗಾಗಲೇ “ಶಿಕ್ಷಾ ವಾಣಿ” ಪಾಡ್ಕಾಸ್ಟ್ ಮೂಲಕ 9 ರಿಂದ 12ನೇ ತರಗತಿ ವಿದ್ಯಾರ್ಥಿಗಳಿಗೆ NCERT ಪಠ್ಯಕ್ರಮ ಆಧಾರಿತ 400ಕ್ಕೂ ಹೆಚ್ಚು ವಿಷಯಗಳ ಆಡಿಯೋ ಪಾಠಗಳನ್ನು ಪ್ಲೇ ಸ್ಟೋರ್ನಲ್ಲಿ ಲಭ್ಯವಾಗುವಂತೆ ಮಾಡಿದೆ. ಹೊಸ ಸಮುದಾಯ ರೇಡಿಯೋ ಕೇಂದ್ರವು ಶಿಕ್ಷಣ, ಆರೋಗ್ಯ, ಪೋಷಣೆ, ಕೃಷಿ ಮುಂತಾದ ವಿಷಯಗಳಲ್ಲಿ ಸ್ಥಳೀಯ ಭಾಷೆಗಳಲ್ಲಿ ಕಾರ್ಯಕ್ರಮಗಳನ್ನು ಪ್ರಸಾರ ಮಾಡಲಿದೆ.
ಇದನ್ನು ಓದಿ : ಬರೋಬ್ಬರಿ 550 ಬಾರಿ ರೀ-ರಿಲೀಸ್ ಆದ ಕನ್ನಡ ಸಿನಿಮಾ! ಇದುವರೆಗೂ ಯಾರು ಟಚ್ ಕೂಡ ಮಾಡದ ದಾಖಲೆಯಿದು..
ಸಮುದಾಯ ರೇಡಿಯೋಗಳು ಕಡಿಮೆ-ಶಕ್ತಿಯ ಪ್ರಸಾರ ಕೇಂದ್ರಗಳಾಗಿದ್ದು, ಸ್ಥಳೀಯ ಸಮುದಾಯಗಳಿಗೆ ತಮ್ಮ ಧ್ವನಿಯನ್ನು ಹಂಚಿಕೊಳ್ಳಲು ವೇದಿಕೆ ಒದಗಿಸುತ್ತವೆ. ಭಾರತದಲ್ಲಿ ಪ್ರಸ್ತುತ 540 ಸಮುದಾಯ ರೇಡಿಯೋ ಕೇಂದ್ರಗಳಿದ್ದು, ಇವುಗಳಲ್ಲಿ ಹೆಚ್ಚಿನವನ್ನು ಶಿಕ್ಷಣ ಸಂಸ್ಥೆಗಳು ಮತ್ತು ಲಾಭರಹಿತ ಸಂಘಟನೆಗಳು ನಿರ್ವಹಿಸುತ್ತಿವೆ.
BREAKING: ನಮ್ಮ ಮೆಟ್ರೋ 3ನೇ ಹಂತದ ಯೋಜನೆಗೆ ಶಂಕುಸ್ಥಾಪನೆ ನೆರವೇರಿಸಿದ ಪ್ರಧಾನಿ ಮೋದಿ

[…] […]