ಬೆಂಗಳೂರು: ‘ಅನುಕಂಪದ ಆಧಾರ’ದಲ್ಲಿ ಸರ್ಕಾರಿ ಉದ್ಯೋಗ ನೀಡುವ ಹಕ್ಕುಪತ್ರದಲ್ಲಿ ‘ವಿವಾಹಿತ ಮಗಳು’ ಎಂಬ ಸಂಬಂಧವನ್ನೂ ಸೇರಿಸಲು ಕರ್ನಾಟಕ ಸರ್ಕಾರ ನಿರ್ಧರಿಸಿದೆ. ಸಿಎಂ ಸಿದ್ದರಾಮಯ್ಯ ಅವರ ನೇತೃತ್ವದಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಈ ಮಹತ್ವದ ತೀರ್ಮಾನ ಕೈಗೊಳ್ಳಲಾಗಿದೆ.
ಇದುವರೆಗೆ, ಮೃತರ ಸಹೋದರರು, ಸಹೋದರಿಯರು, ಮೊಮ್ಮಗ, ಅವಿವಾಹಿತ ಮೊಮ್ಮಗಳು, ಸೊಸೆ, ವಿಧವಾ ಮಗಳು ಮತ್ತು ವಿಧವಾ ಮೊಮ್ಮಗಳು ಮಾತ್ರ ಅರ್ಹರಾಗಿದ್ದರು. ಇದೀಗ ಈ ಪಟ್ಟಿಗೆ ‘ವಿವಾಹಿತ ಮಗಳು’ಯನ್ನೂ ಸೇರಿಸಲಾಗಿದೆ.
ಇದನ್ನು ಓದಿ: 2026–27ರಿಂದ CBSE 9ನೇ ತರಗತಿಯಲ್ಲಿ ಓಪನ್ ಬುಕ್ ಅಸೆಸ್ಮೆಂಟ್ ಪರಿಚಯ
ಸಮಾಜಮುಖಿ ನಿರ್ಧಾರಗಳ ಭಾಗವಾಗಿ, ರಾಜ್ಯದ 15 ಕಡೆ ಅಲ್ಪಸಂಖ್ಯಾತ ಸಮುದಾಯದ ಹೆಣ್ಣುಮಕ್ಕಳ ಶಿಕ್ಷಣಕ್ಕಾಗಿ ಮಹಿಳಾ ಕಾಲೇಜು ನಿರ್ಮಿಸಲು ₹87.60 ಕೋಟಿ ಪರಿಷ್ಕೃತ ಅಂದಾಜಿಗೆ ಸಂಪುಟ ಅನುಮೋದನೆ ನೀಡಿದೆ.
ಅದರೊಂದಿಗೆ, ಕಾರ್ಕಳದ ನಕ್ಸಲ್ ನಿಗ್ರಹ ದಳದ ದ್ವಿತೀಯ ದರ್ಜೆ ಸಹಾಯಕ ಪಿ. ಜಗದೀಶ್ ಅವರ ಅವಿವಾಹಿತ ಸಹೋದರಿ ತಾರಾ ಅವರಿಗೆ ಅನುಕಂಪದ ಆಧಾರದಲ್ಲಿ ನೇಮಕಾತಿ ಮಾಡಲು, ಕರ್ನಾಟಕ ಸಿವಿಲ್ ಸೇವಾ ನಿಯಮ 5ನ್ನು ಸಡಿಲಿಸುವ ನಿರ್ಧಾರವೂ ಕೈಗೊಳ್ಳಲಾಗಿದೆ.
ಶೇ 50 ರಷ್ಟು ವೆಚ್ಚ ಭರಿಸಬೇಕಿದ್ದ ಕೇಂದ್ರದಿಂದ ನೆರವು ಸಿಕ್ಕಿಲ್ಲ – ಪ್ರಧಾನಿ ಮೋದಿಯೆದುರೇ ಸಿಎಂ ಗುಡುಗು!
