ಅರಸೀಕೆರೆ: ಮನೆಯ ರಿಪೇರಿ ನೆಪದಲ್ಲಿ 179 ಗ್ರಾಂ ಚಿನ್ನಾಭರಣ (ಸುಮಾರು ₹8.95 ಲಕ್ಷ ಮೌಲ್ಯ) ಕಳವು ಮಾಡಿದ ಘಟನೆ ಶ್ರೀನಗರದಲ್ಲಿ ನಡೆದಿದೆ.
ನಾರಾಯಣ ಅವರ ಪತ್ನಿ ಚಂದ್ರಕಲಾ ಮನೆಯಲ್ಲಿ ಒಬ್ಬರೇ ಇದ್ದಾಗ, ಇಬ್ಬರು ಅಪರಿಚಿತರು ನಗರಸಭೆ ಸಿಬ್ಬಂದಿ ಎಂದು ಸುಳ್ಳು ಹೇಳಿ, ನೀರಿನ ಸಿಂಟೆಕ್ಸ್ ಹತ್ತಿರ ಫಿಲ್ಟರ್ ಅಳವಡಿಸಬೇಕೆಂದು ಮೇಲ್ಮಹಡಿಗೆ ಕರೆದುಕೊಂಡು ಹೋಗಿ ಅವರ ಗಮನ ಬೇರೆಡೆ ಸೆಳೆದರು. ಈ ವೇಳೆ ಬೀರುವಿನಲ್ಲಿದ್ದ ಚಿನ್ನಾಭರಣ ಕಳವು ಮಾಡಿ ಪರಾರಿಯಾದರು.
ಇನ್ನೊಂದು ಪ್ರಕರಣದಲ್ಲಿ ವಿಜಯನಗರ ಬಡಾವಣೆಯ ಮಹೇಂದ್ರ-ಶೀಲಾ ದಂಪತಿಯ ಮನೆಯಲ್ಲಿ ಬೀಗ ಮುರಿದು 2.20 ಲಕ್ಷ ಮೌಲ್ಯದ ಚಿನ್ನ-ಬೆಳ್ಳಿಯ ಆಭರಣ ಕಳವು ಮಾಡಲಾಗಿದೆ. ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
