
ನೀತಿ ಆಯೋಗದಿಂದ ಹಣಕಾಸಿನ ಆರೋಗ್ಯ ಸೂಚ್ಯಂಕ-2025 ಪ್ರಕಟ
ರಾಜ್ಯಗಳ ಹಣಕಾಸಿನ ಸದೃಢತೆಗೆ ಸಂಬಂಧಿಸಿದಂತೆ ನೀತಿ ಆಯೋಗ ಪ್ರಕಟಿಸಿರುವ ಸೂಚ್ಯಂಕದಲ್ಲಿ ಒಡಿಶಾ, ಛತ್ತೀಸಗಢ,ಗೋವಾ ಮತ್ತು ಜಾರ್ಖಂಡ್,’ಅತ್ಯುತ್ತಮ ಸಾಧಕ ರಾಜ್ಯ’ ಶ್ರೇಯಕ್ಕೆ ಭಾಜನವಾಗಿವೆ.
- ದೇಶದ ಒಟ್ಟು ಆಂತರಿಕ ಉತ್ಪನ್ನ (ಜಿಡಿಪಿ), ಜನಸಂಖ್ಯೆ, ಸಾರ್ವಜನಿಕ ವೆಚ್ಚ, ಆದಾಯ ಹಾಗೂ ಹಣಕಾಸಿನ ಸ್ಥಿರತೆಗೆ ರಾಜ್ಯಗಳು ನೀಡಿರುವ ಕೊಡುಗೆ ಆಧರಿಸಿ ಆಯೋಗವು ಮೊದಲ ಬಾರಿಗೆ ಈ ಹಣಕಾಸಿನ ಆರೋಗ್ಯ ಸೂಚ್ಯಂಕ- 2025 ಅನ್ನು ಸಿದ್ಧಪಡಿಸಿದೆ.
-ಈ ಸೂಚ್ಯಂಕದಲ್ಲಿ 18 ರಾಜ್ಯಗಳಿವೆ. ಇವು ದೇಶದ ಜಿಡಿಪಿಗೆ ಶೇ 85ರಷ್ಟು ಕೊಡುಗೆ ನೀಡುತ್ತವೆ - ರಾಜ್ಯಗಳ ಹಣಕಾಸಿನ ಸಾಮರ್ಥ್ಯದ ಅರಿಯುವುದು ಈ ವರದಿಯ ಉದ್ದೇಶವಾಗಿದೆ’ ಎಂದು 16ನೇ ಹಣಕಾಸು ಆಯೋಗದ ಅಧ್ಯಕ್ಷ ಅರವಿಂದ ಪನಗಾರಿಯಾ ಹೇಳಿದ್ದಾರೆ.