ಟಿ.ನರಸೀಪುರ : ಮುಖ್ಯಮಂತ್ರಿ ಸಿದ್ದರಾಮಯ್ಯರವರು ಬಲಗೈ ಸಮುದಾಯವನ್ನು ಹೊಡೆಯಲು ಸಾಹಿತಿ ದೇವನೂರು ಮಹದೇವ್ ರವರನ್ನು ಬಳಸಿಕೊಂಡಿರುವ ಬಗ್ಗೆ ಅನುಮಾನ ಮೂಡಿದೆ ಎಂದು ಅಖಿಲ ಕರ್ನಾಟಕ ಪರಿಶಿಷ್ಟ ಮಹಾಸಭಾದ ರಾಜ್ಯಾದ್ಯಕ್ಷ ಸೋಸಲೆ ಶಶಿಕಾಂತ್ ಗಂಭೀರ ಆರೋಪ ಮಾಡಿದ್ದಾರೆ.
ಪಟ್ಟಣದ ಡಾ.ಬಿ.ಆರ್.ಅಂಬೇಡ್ಕರ್ ಸಮುದಾಯ ಭವನದಲ್ಲಿ ಕರೆದಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ ನಾಗಮೋಹನ್ ದಾಸ್ ರವರ ವರದಿಯನ್ನು ಯಥಾವತ್ತಾಗಿ ಜಾರಿಗೊಳಿಸಲು ಕಾಂಗ್ರೆಸ್ ಸರ್ಕಾರ ಮುನ್ನುಡಿ ಇಡಬೇಕೆಂದು ಸಾಹಿತಿ ದೇವನೂರ ಮಹದೇವ್ ರವರು ತಿಳಿಸಿದ್ದಾರೆ.ಇದರಲ್ಲಿ ಸಿದ್ದರಾಮಯ್ಯರವರ ಪಾತ್ರವಿದೆ ಎಂಬ ಅನುಮಾನ ದಟ್ಚವಾಗಿ ಕಾಡಿದೆ.ರಾಜಕೀಯವಾಗಿ ಮುಖ್ಯಮಂತ್ರಿಗಳ ನಿರ್ದೇಶನದಲ್ಲಿ ಈ ರೀತಿಯ ವರದಿ ನೀಡಿರಬಹುದೆಂದೆನಿಸಿದೆ.ಹಾಗಾಗಿ ಸಿದ್ದರಾಮಯ್ಯರವರು ಇದಕ್ಕೆ ಉತ್ತರ ನೀಡಬೇಕಿದೆ ಎಂದರು.

ಒಳ ಮೀಸಲಾತಿ ಎಂಬುದು ಅಸಂವಿಧಾನಿಕವಾದದ್ದು ಇದು ಸಂವಿಧಾನದಲ್ಲಿ ಮಾನ್ಯತೆ ಇಲ್ಲದ್ದು.ಆದರೆ ಸುಪ್ರೀಂಕೋರ್ಟ್ ಮೀಸಲಾತಿಯಲ್ಲಿ ಒಳ ಮೀಸಲಾತಿ ಪಡೆಯಬಹುದೆಂದು ಆದೇಶ ನೀಡಿದ ಮೇಲೆ ಒಳ ಮೀಸಲಾತಿಯನ್ನು ನಮ್ಮ ನೆರೆಯ ರಾಜ್ಯಗಳಾದ ಆಂದ್ರ ಪ್ರದೇಶ ಮತ್ತು ತೆಲಂಗಾಣ ಒಳ ಮೀಸಲಾತಿ ನೀಡಿದೆ.ಆದರೆ ಕರ್ನಾಟಕದ ಪರಿಸ್ಥಿತಿ ಬೇರೆಯದ್ದೇ ಇದೆ ಹೊಲೆಯ ಸಮುದಾಯ ನಮ್ಮರಾಜ್ಯದಲ್ಲಿ ಹೆಚ್ಚಿದ್ದರೂ ಸಮೀಕ್ಷೆ ವೇಳೆ ದತ್ತಾಂಶ ಕ್ರೂಡೀಕರಣ ಮಾಡುವಾಗ ಸಂಪೂರ್ಣವಾಗಿ ಸಂಗ್ರಹವಾಗಿಲ್ಲ ಆದ್ದರಿಂದ ಸರ್ಕಾರ ನಾಗಮೋಹನ್ ದಾಸ್ ರವರ ವರದಿಯನ್ನು ಅಂಗೀಕರಿಸಬಾರದು.
2011ರ ಜನಗಣತಿಯ ಪ್ರಕಾರ 101 ಜಾತಿಯ ದಲಿತ ಸಮುದಾಯಗಳಲ್ಲಿ 1.47 ಕೋಟಿ ಜನಸಂಖ್ಯೆ ಇದೆ ಎಂಬ ಸಮೀಕ್ಷೆ ಇತ್ತು.ನಾಗಮೋಹನ್ ದಾಸ್ ಆಯೋಗ 1.16 ಕೋಟಿಗೆ ನಿಗದಿ ಮಾಡಿತು.ಅಂತಿಮವಾಗಿ ಈಗ ಸಮೀಕ್ಷೆ ವರದಿ ಬಂದ ನಂತರ ಕೇವಲ1.05 ಕೋಟಿ ಜನಸಂಖ್ಯೆಯನ್ನು ಮಾತ್ರ ಸಮೀಕ್ಷೆಗೆ ಒಳ ಪಡಿಸಿದ್ದಾರೆ.ಸುಮಾರು 40 ಲಕ್ಷಕ್ಕೂ ಅಧಿಕ ಜನ ಮೀಸಲಾತಿ ಸಮೀಕ್ಷೆಯಿಂದ ಹೊರಗುಳಿದಿದ್ದಾರೆಂದು ಆತಂಕ ವ್ಯಕ್ತಪಡಿಸಿದರು.
ರಾಜ್ಯದಲ್ಲಿ ಬಲಗೈ ಸಮುದಾಯದ ಜನಸಂಖ್ಯೆ ಹೆಚ್ಚಿದೆ ಅದಕ್ಕೆ ಅನುಗುಣವಾಗಿ ನ್ಯಾಯಯುತವಾದತ್ತಂಹ ಮೀಸಲಾತಿ ಹಂಚಿಕೆಯಾಗಬೇಕು.ಎಡಗೈ ಸಮುದಾಯಕ್ಕೆ ಶೇ.6 ಮೀಸಲಾತಿ ನೀಡಿ,ಬಲಗೈ ಸಮುದಾಯಕ್ಕೆ ಒಳಪಡುವ ಕೆಲವು ಜಾತಿಗಳನ್ನು ಕೈ ಬಿಟ್ಚಿರುವುದರಿಂದ ಮೀಸಲಾತಿ ಹಂಚಿಕೆ ಕಡಿಮೆಯಾಗುತ್ತದೆ.ಆಗ ಭವಿಷ್ಯದಲ್ಲಿ ಬರತ್ತಕ್ಕಂತಹ ಮಕ್ಕಳ ಶಿಕ್ಷಣ,ಉದ್ಯೋಗ ಹಾಗೂ ಆರ್ಥಿಕ ಪರಿಸ್ಥಿತಿಗೆ ದೊಡ್ಜ ಹೊಡೆತ ಬೀಳುತ್ತದೆ.ಆಗ ನಮ್ಮ ಸಮುದಾಯ ಮತ್ತಷ್ಚು ಹಿಂದೆ ಹೋಗುವಂತ್ತಹ ಪರಿಸ್ಥಿತಿ ನಿರ್ಮಾಣವಾಗುತ್ತದೆ ಎಂದು ಆತಂಕ ವ್ಯಕ್ತಪಡಿಸಿದರು.

ಮುಂದಿನ ದಿನಗಳಲ್ಲಿ ಸರ್ಕಾರದ ನಡೆಯನ್ನು ಅವಲೋಕಿಸಿ ನಮ್ಮ ಸಮುದಾಯದ ಶಾಸಕರು,ಸಚಿವರು ಹಾಗೂ ಸಂಸದರನ್ನು ಅವರ ಸ್ಥಾನಕ್ಕೆ ರಾಜೀನಾಮೆ ನೀಡಿಸುವಂತ್ತಹ ಕ್ರಮಕ್ಕೆ ನಮ್ಮ ಸಮುದಾಯದ ಸಂಘಟನೆಗಳು ಮುಂದಾಗಲಿದ್ದು ಸರಕ್ಕಾರ ಮಾಡಿರುವ ತಪ್ಪುಗಳನ್ನು ಸರಿಪಡಿಸಿ ಬಲಗೈ ಸಮುದಾಯಕ್ಕೆ ನ್ಯಾಯ ಹೊದಗಿಸಲು ಮುಂದಾಗಬೇಕು.
ನಾಗಮೋಹನ್ ದಾಸ್ ವರದಿ ಬಲಗೈ ಸಮುದಾಯಕ್ಕೆ ಮಾರಕವಾಗಿದ್ದು ದುರುದ್ದೇಶಪೂರಕವಾಗಿ ಸರ್ಕಾರಕ್ಕೆ ವರದಿಯನ್ನು ನೀಡಿದೆ.ಅವರು ಸಂಗ್ರಹಿಸಿರುವ ದತ್ತಾಂಶ ವರದಿಯನ್ನು ನಾವು ವಿರೋಧಿಸುತ್ತೇವೆ.ನಾಗಮೋಹನ್ ದಾಸ್ ಆಯೋಗ ಸಮೀಕ್ಷೆಯಲ್ಲಿ ಹಲವಾರು ತಪ್ಪುಗಳನ್ನು ಎಸಗಿದೆ.ಪ್ರಮುಖವಾಗಿ ಬಲಗೈ ವರ್ಗಕ್ಕೆ ಸೇರಿದ ಆದಿ ಕರ್ನಾಟಕ,ಛಲವಾಧಿ,ಆದಿ ದ್ರಾವಿಡ,ಪರಯ ಸೇರಿದಂತೆ ಇತರೆ ಹೆಸರಿನಿಂದ ಕರೆಯುವ ಬಲಗೈ ಸಮುದಾಯಗಳನ್ನು ಪ್ರತ್ಯೇಕ ವರ್ಗವಾಗಿ ವಿಂಗಡಿಸಿದೆ.ಇದರಲ್ಲಿ ರಾಜಕೀಯ ಹುನ್ನಾರ ನಡೆದಿರುವುದು ಸ್ಪಷ್ಟವಾಗಿದೆ ಎಂದು ದೂರಿ ಅಂಕಿ,ಅಂಶಗಳ ದತ್ತಾಂಶದಲ್ಲಿ ಬಲಗೈ ಸಮುದಾಯ ಕಡಿಮೆ ಇದೆ ಎಂದು ತೋರಿಸುವ ವ್ಯವಸ್ಥಿತ ಪಿತೂರಿ ನಡೆದಿದೆ ಎಂದು ಆರೋಪಿಸಿ ಇದನ್ನು ಸರಿ ಪಡಿಸದಿದ್ದರೆ ರಾಜ್ಯದಲ್ಲಿ ಹೋರಾಟದ ಕಾವು ತೀರ್ವಗೊಳ್ಳಲಿದೆ ಎಂದು ಸರ್ಕಾರಕ್ಕೆ ಎಚ್ಚರಿಸಿದರು.
ಈ ಸಂದರ್ಭದಲ್ಲಿ ಮುಖಂಡರುಗಳಾದ ಸೋಸಲೆ ಎನ್ ಶ್ರೀಧರ್,ಎಸ್.ನಂಜುಂಡಯ್ಯ,ದೊಡ್ಡಪುರ ಲಕ್ಮಣ,ಚೌಹಳ್ಳಿ ಜಯರಾಮ್,ರುಕ್ಮಿಣಿ, ಡಿ.ದೀಪಾ,ಕೈಯಂಬಳ್ಳಿ ಕೃಷ್ಣ,ಚಿದರವಳ್ಳಿ ಶಿವಣ್ಣ,ಚಂದ್ರು,ಸೋಸಲೆ ಗಂಗಾಧರ್,ಬೆನಕನಹಳ್ಳಿ ಚಿನ್ನಸ್ವಾಮಿ,ಮಾಂಬಳ್ಳಿ ಮಂಜುನಾಥ, ರಂಗಸ್ವಾಮಿ, ಚಂದ್ರು,ಎಂ.ಶಿವಣ್ಣ,ಎಸ್.ಮಂಜುನಾಥಬೆಟ್ಚಹಳ್ಳಿ ರುದ್ರ,ಗಂಗಾಧರ ಸೇರಿದಂತೆ ಇತರೆ ಮುಖಂಡರಿದ್ದರು.
ಎಂ.ನಾಗೇಂದ್ರಕುಮಾರ್
