1.ಕವಿ ಕಾದಂಬರಿಕಾರ ಶಾನಭಾಗ ರಾಮಯ್ಯ ನಾರಾಯಣರಾವ್ ಅವರ ಕಾವ್ಯನಾಮ
1)ಮಾತಾಸುತ. 2)ಸರಸ್ವತೀಸುತ. 3)ಭಾರತೀಸುತ
2.ಕವಿಯು ಜನಿಸಿದ ದಿನಾಂಕ
1)ಏಪ್ರಿಲ್-15, 1915 2)ಮೇ-15, 1915 3)ಜೂನ್-15, 1915
3.ಕವಿಯು ಹುಟ್ಟಿದ ಬಿಳಿಗೇರಿ ಗ್ರಾಮವು ಕೊಡಗು ಜಿಲ್ಲೆಯ ಈ ಸ್ಥಳದ ಸಮೀಪವಿದೆ.
1)ಮಡಿಕೇರಿ. 2)ವಿರಾಜಪೇಟೆ. 3)ಸೋಮವಾರಪೇಟೆ
4.ಕವಿಯ ತಂದೆಯ ಹೆಸರು
1)ರಾಮಯ್ಯ. 2)ಶ್ರೀನಿವಾಸಯ್ಯ. 3)ಕೃಷ್ಣಯ್ಯ
5.ಕವಿಯ ತಾಯಿಯ ಹೆಸರು
1)ತಿಮ್ಮಮ್ಮ. 2)ಹೊಂಬಮ್ಮ 3)ಸುಬ್ಬಮ್ಮ
6.ಕವಿಗೆ ಸಾಹಿತ್ಯ ಮತ್ತು ಸಂಸ್ಕಾರದ ಪ್ರಭಾವ ನೀಡಿದ ಗುರು
1)ಪಂಜೆ ಮಂಗೇಶರಾಯರು. 2)ಸಿಸು ಸಂಗಮೇಶ. 3)ದಿನಕರ ದೇಸಾಯಿ
7.ಕವಿಯ ಧರ್ಮಪತ್ನಿಯ ಹೆಸರು
1)ಕೃಷ್ಣವೇಣಿ. 2)ನೀಲವೇಣಿ. 3)ನಾಗವೇಣಿ
8.ಕವಿಯು 13 ನೇ ವಯಸ್ಸಿನಲ್ಲಿರುವಾಗಲೇ ಪ್ರಕಟಿಸಿದ ಕತೆ
1)ದೊರೆ ಮಗಳು. 2)ಬಂಗಾರದ ಬಳೆ. 3)ಬೆಳ್ಳಿ ಮೂಡಿತು
9.ಕವಿಯ ಮೊದಲ ಕಥಾಸಂಕಲನ
1)ದೂರ ಹೋದಳು. 2)ಹಾವಿನ ಹುತ್ತ. 3)ಗಿರಿಕನ್ನಿಕೆ
10.ಡಾ.ರಾಜ್ ಕುಮಾರ್ ಅಭಿನಯದ ಕವಿಯ ಕಾದಂಬರಿ ಆಧಾರಿತ ಚಲನಚಿತ್ರ
1)ಕವಿರತ್ನ ಕಾಳಿದಾಸ. 2)ಹುಲಿಯ ಹಾಲಿನ ಮೇವು. 3)ಮಯೂರ
11.ಪುಟ್ಟಣ್ಣ ಕಣಗಾಲ್ ನಿರ್ದೇಶನದಲ್ಲಿ ತೆರೆಕಂಡ ಕವಿಯ ಕಾದಂಬರಿ ಆಧಾರಿತ ಸಿನಿಮಾ
1)ಕರುಳಿನ ಕರೆ. 2)ಅಮೃತ ಘಳಿಗೆ. 3)ಎಡಕಲ್ಲು ಗುಡ್ಡದ ಮೇಲೆ
12.ಕವಿಯ ಕಾದಂಬರಿ ಆಧಾರಿತ ಚಲನಚಿತ್ರ ‘ಬಯಲು ದಾರಿ’ಯ ನಿರ್ದೇಶಕರು
1)ದೊರೆ ಭಗವಾನ್. 2)ಕೆ.ವಿ.ರಾಜು 3)ಕೆ.ವಿ.ಜಯರಾಮ್
13)ಕರ್ನಾಟಕ ರಾಜ್ಯ ಸಾಹಿತ್ಯ ಅಕಾಡೆಮಿ ಪುರಸ್ಕಾರ ಪಡೆದ ಕವಿಯ ಕಥಾಸಂಕಲನ
1)ವಕ್ರರೇಖೆ. 2)ಕಳ್ಳರ ಫಜೀತಿ. 3)ಜಿಂಬ ಹಿಡಿದ ಮೀನು
14.ಕವಿಯ ಗೌರವಾರ್ಥವಾಗಿ ಸಾಹಿತ್ಯಾಭಿಮಾನಿಗಳು ಪ್ರಕಟಿಸಿದ ಸಂಸ್ಮರಣ ಗ್ರಂಥ
1)ಭುವನೇಶ್ವರಿ ತನಯ. 2)ಬ್ರಹ್ಮಗಿರಿ. 3)ಭಾರತೀಸುತ
15.ಕವಿಯು ವಿಧಿವಶರಾದ ದಿನ
1)ಏಪ್ರಿಲ್-4, 1976 2)ಏಪ್ರಿಲ್-4, 1980 3)ಏಪ್ರಿಲ್-4, 1973
~~~~~~~~~~~~~~~~~~~~~~
★ಸರಿಯುತ್ತರಗಳು:-
1)ಭಾರತೀಸುತ. 2)ಮೇ-15, 1915 3)ಮಡಿಕೇರಿ 4)ರಾಮಯ್ಯ 5)ಸುಬ್ಬಮ್ಮ 6)ಪಂಜೆ ಮಂಗೇಶರಾಯರು 7)ನಾಗವೇಣಿ 8)ಬಂಗಾರದ ಬಳೆ 9)ದೂರ ಹೋದಳು 10)ಹುಲಿಯ ಹಾಲಿನ ಮೇವು 11)ಎಡಕಲ್ಲು ಗುಡ್ಡದ ಮೇಲೆ 12)ದೊರೆ ಭಗವಾನ್ 13)ಜಿಂಬ ಹಿಡಿದ ಮೀನು 14)ಬ್ರಹ್ಮಗಿರಿ 15)ಏಪ್ರಿಲ್-4, 1976
ಸಂ:-ಹೊ.ರಾ.ಪರಮೇಶ್ ಹೊಡೇನೂರು
ಅರಕಲಗೂಡು ತಾ. ಹಾಸನ ಜಿಲ್ಲೆ

[…] ಭಾರತೀಸುತ – ಕವಿ ಕೃತಿ ಪರಿಚಯ ಮಾಲಿಕೆ […]