ಕೆಎನ್ಎನ್ ಡಿಜಿಟಲ್ ಡೆಸ್ಕ್ : ಇತ್ತೀಚೆಗೆ ಅನೇಕ ಸ್ಮಾರ್ಟ್ಫೋನ್ ಬಳಕೆದಾರರು ತಮ್ಮ ಮೊಬೈಲ್ ಪರದೆ ಮೇಲೆ ಅಸಾಧಾರಣ ಬದಲಾವಣೆಗಳನ್ನು ಗಮನಿಸಿ ಗಾಬರಿಗೊಂಡಿದ್ದಾರೆ. ಕರೆ ಮಾಡಿದಾಗ ಪರದೆಯ ಮೇಲೆ ದೊಡ್ಡ ಅಕ್ಷರಗಳಲ್ಲಿ ಮಾಹಿತಿ ಕಾಣಿಸಿಕೊಳ್ಳುವುದು, “ಕಾಲ್, ವಿಡಿಯೋ ಕಾಲ್, ರೆಕಾರ್ಡ್, ಹೋಲ್ಡ್, ಆಡ್ ಮೈ ಕ್ಯಾಮೆರಾ, ಸ್ಪ್ಯಾಮ್, ಎಲ್ಲಾ ಕರೆಗಳು, ಮಿಸ್ಡ್ ಕಾಲ್” ಮುಂತಾದ ಆಯ್ಕೆಗಳು ತಕ್ಷಣವೇ ತೆರೆಮೇಲೆ ತೋರಿಬರುವುದರಿಂದ ಕೆಲವರಿಗೆ ಇದು ಸ್ಕ್ಯಾಮ್ ಎಂದು ಭ್ರಮೆ ಮೂಡಿಸಿದೆ.
ಆದರೆ ತಜ್ಞರ ಪ್ರಕಾರ, ಇದು ಯಾವುದೇ ಸ್ಕ್ಯಾಮ್ ಅಲ್ಲ, ನವೀಕರಣದ (Update) ಭಾಗ. ಈ ಬದಲಾವಣೆಗಳು ಮುಖ್ಯವಾಗಿ OnePlus, Realme, Moto ಮತ್ತು Oppo ಫೋನ್ಗಳಲ್ಲಿ ಕಾಣಿಸಿಕೊಂಡಿದ್ದು, ಬಳಕೆದಾರರ ಅನುಭವ ಸುಲಭಗೊಳಿಸುವುದು ಮತ್ತು ಕರೆ ಇಂಟರ್ಫೇಸ್ ಸುಧಾರಿಸುವುದೇ ಉದ್ದೇಶವಾಗಿದೆ.
- Realme : Realme UI 3.0 ಮತ್ತು 4.0 ಆವೃತ್ತಿಗಳಲ್ಲಿ Google Phone ಅಪ್ಲಿಕೇಶನ್ ಸೇರಿಸಲಾಗಿದೆ. ಕೆಲ ಮಾದರಿಗಳಲ್ಲಿ ತಮ್ಮದೇ ಡಯಲರ್ಗೆ ಸ್ಪ್ಯಾಮ್ ಪತ್ತೆ ವ್ಯವಸ್ಥೆಯನ್ನೂ ಸೇರಿಸಲಾಗಿದೆ.
- OnePlus : OxygenOS 12 ಮತ್ತು 13 ರಲ್ಲಿ Google Phone ಅಪ್ಲಿಕೇಶನ್ ಪೂರ್ವನಿಯೋಜಿತವಾಗಿದೆ. ಸೈಡ್ ಸ್ಲೈಡ್ ಹಾಗೂ ಸ್ಪ್ಯಾಮ್ ಫಿಲ್ಟರಿಂಗ್ ವೈಶಿಷ್ಟ್ಯಗಳೂ ಲಭ್ಯ.
- Moto : Motorola ಸ್ಟಾಕ್ ಆಂಡ್ರಾಯ್ಡ್ಗೆ ಹತ್ತಿರವಿರುವುದರಿಂದ Google Phone ಅಪ್ಲಿಕೇಶನ್ನ ಹೊಸ ವೈಶಿಷ್ಟ್ಯಗಳು ಬಳಕೆದಾರರಿಗೆ ಗೋಚರಿಸುತ್ತಿವೆ.
- Oppo : ColorOS 12 ಮತ್ತು 13 ಮೂಲಕ Google Phone ಅಥವಾ ತನ್ನದೇ ಡಯಲರ್ನಲ್ಲಿ ಸ್ಪ್ಯಾಮ್ ಪತ್ತೆ ಹಾಗೂ ಸೈಡ್ ಸ್ಲೈಡ್ ವೈಶಿಷ್ಟ್ಯಗಳನ್ನು ಒದಗಿಸಿದೆ.
ಸ್ಪ್ಯಾಮ್ ಕರೆ ನಿರ್ವಹಣೆ :
ಈ ಬ್ರ್ಯಾಂಡ್ಗಳು Truecaller ಅಥವಾ Google Spam Protection ಮೂಲಕ ಸ್ಪ್ಯಾಮ್ ಕರೆಗಳನ್ನು ಪತ್ತೆಮಾಡುತ್ತವೆ. ಜೊತೆಗೆ, Jio, Airtel, BSNL ಮುಂತಾದ ನೆಟ್ವರ್ಕ್ಗಳಲ್ಲಿ “Do Not Disturb (DND)” ಸೆಟ್ಟಿಂಗ್ ಆನ್ ಮಾಡಿದರೆ ಹೆಚ್ಚಿನ ಸ್ಪ್ಯಾಮ್ ಕರೆಗಳಿಂದ ಮುಕ್ತಿ ಪಡೆಯಬಹುದು.
👉 ತಜ್ಞರ ಅಭಿಪ್ರಾಯದಲ್ಲಿ, ಬಳಕೆದಾರರು ಆತಂಕಪಡುವ ಅಗತ್ಯವಿಲ್ಲ. ಈ ಬದಲಾವಣೆಗಳು ಫೋನ್ಗಳ ಕಾರ್ಯಕ್ಷಮತೆ ಸುಧಾರಿಸುವ ನವೀಕರಣದ ಭಾಗ ಮಾತ್ರ.
