
ಜಯಲಲಿತಾ ರ ಹನ್ನೊಂದು ಸಾವಿರ ರೇಷ್ಮೇ ಸೀರೆ ಸರ್ಕಾರದ ವಶಕ್ಕೆ….!!!
ಇಲ್ಲಿ ಬರೀ ಸೀರೆ ಮಾತ್ರ ಲೆಕ್ಕಾಚಾರ ಮಾಡಿ ಅಚ್ಚರಿ ಪಟ್ಟರೆ ಸಾಲದು..!?? ಈ ಹನ್ನೊಂದು ಸಾವಿರ ಸೀರೆಗೆ ಕುಪ್ಪಸ ಕಣ ಹೊಲಸದು ಲೆಕ್ಕಾಚಾರ ಮಾಡಿದರೆ ನೀವು ದಿಗಲು ಬೀಳ್ತೀರ….? ಹನ್ನೊಂದು ಸಾವಿರ ಸೀರೆ ಲಿ ಅದೆಷ್ಟೋ ಉಚಿತವಾಗಿ ಉಡುಗೊರೆ ಬಂದದ್ದಾಗಿರುತ್ತದೆ.
ಆದರೆ ಕುಪ್ಪಸ ಮಾತ್ರ ಪ್ರತಿ ಸೀರೆಗೂ ಹೊಲಿಸಬೇಕಾಗುತ್ತದೆ. ಒಂದು ಕುಪ್ಪಸದ ಕಣಕ್ಕೆ ಕನಿಷ್ಟ ನಾಲ್ಕು ನೂರು ರೂಪಾಯಿ ಕುಪ್ಪಸ ಹೊಲಿದ ಮಜೂರಿ .
ವಿಪರ್ಯಾಸವೆಂದರೆ ಹೀಗೆ ಉಡುಗೊರೆ ಬಂದ ಕೆಲವು ಸೀರೆ ಗಿಂತ ಕುಪ್ಪಸದ ಮಜೂರಿಯೇ ಹೆಚ್ಚು…!!! ಮೊನ್ನೆ ನನ್ನ ದೊಡ್ಡಪ್ಪ ನ ಮಗನ ಮಗಳ ಮದುವೆ ಲಿ ನನ್ನ ಕಸೀನ್ ಬ್ರದರ್ಸ್ ನ ಹೆಣ್ಣು ಮಕ್ಕಳು ಮದುವೆ ಗಾಗಿ ಹುಲಿಸಿದ ವಿಶೇಷ ಕುಪ್ಪಸ ದ ಮಜೂರಿ ಬೆಲೆ ಹದಿನಾರು ಸಾವಿರ ರೂಪಾಯಿಯಂತೆ…!!
ಮದುಮಗಳ ದಾರೆ ಸೀರೆಯ ಕುಪ್ಪಸದ ಮಜೂರಿಯೂ ಈ ಬೆಲೆಯದ್ದೇ ಆಗಿರುತ್ತದೆ. ಆದರೆ ನಮ್ಮ ಅಮ್ಮ ರ ಕಾಲದಲ್ಲಿ ವರ್ಷಕ್ಕೆ ಒಂದೋ ಎರಡೋ ಸೀರೆ ಕೊಳ್ಳುವುದು ಅಚ್ಚರಿಯ ಸಾಹಸದ ಸಂಗತಿಯಾಗಿತ್ತು…!!
ಇವತ್ತು ನಮ್ಮ “ಮನೆಯವರ” ಕಾಲದಲ್ಲಿ ವರ್ಷಕ್ಕೊಂದು ವಾರ್ಡು ರೋಬು ತುಂಬುತ್ತಿದೆ…!!!
ಆದರೆ ಸದಾ ನೈಟಿ ಚೂಡಿದಾರ ಹಾಕುವ ಈ ಕಾಲದ ಹೆಣ್ಣು ಮಕ್ಕಳಿಗೆ ಈ ಪರಿ “ಸೀರೆ ವ್ಯಾಮೋಹ” ಯಾಕೆ ಅಂತ ಗೊತ್ತಾಗುತ್ತಿಲ್ಲ…!! ಈ ಸಾವಿರ ಸಾವಿರ ಸೀರೆ ತೊಟ್ಟು ಗೊಳ್ಳುವುದೆಂದು…? ಯಾವತ್ತೋ ಹೊಲಿಸಿದ ಕುಪ್ಪಸ ಇನ್ಯಾವತ್ತೋ ಹಾಕುವಾಗ ಅನ್ ಸೈಜು ಆದಾಗ ಗಂಡಂದಿರ ಜಾಗತಿಕ ನಷ್ಟ ತುಂಬುವವರಾರು….? ಈ ಗಂಡಸರ ಕಷ್ಟ ಹೆಂಗಸಿರಿಗೆ ಅರ್ಥ ಮಾಡಿಸೋರು ಯಾರು ಹೇಳಿ 😅🤗
-ಪ್ರಬಂಧ ಅಂಬುತೀರ್ಥ.
9481801869