
ಈ ಹೊಸ ಖಂಡದ ದೇಶಗಳಲ್ಲೊಂದಾದ ಗ್ರೀಸ್ ದೇಶದಲ್ಲಿ ‘Olympics’ ಎಂಬುವಳೇ ಪ್ರೀತಿ ಪ್ರೇಮದ ಆರಾಧ್ಯ ದೇವತೆ. ನಮ್ಮ ದೇಶದಲ್ಲಿ ಸ್ತ್ರೀ ಗೆ ಶಕ್ತಿ ಸ್ವರೂಪಿ ಹಾಗೂ ಪೂಜನೀಯ ಸ್ಥಾನವನ್ನು ನೀಡಿದ್ದೇವೆ. ಭಾರತೀಯರು ಪೂರ್ವ ಕಾಲದಿಂದಲೂ ಭಾರತವನ್ನು ‘ಭಾರತ ಮಾತೆ’ ಎಂದು ಭಾವಿಸಿ ಪೂಜಿಸಿಕೊಂಡು ಬಂದಿದ್ದಾರೆ.
ಇಡೀ ವಿಶ್ವದಲ್ಲಿ ಹೀಗೆ ಸ್ತ್ರೀ ಯರನ್ನು ದೇವತೆಯ ದೃಷ್ಟಿಯಿಂದ ನೋಡುವ ರಾಷ್ಟçವೆಂದರೆ ಗ್ರೀಸ್ ದೇಶ. ಈ ದೇಶದ ಮುಕ್ಕಾಲು ಭೂಮಿಯು ಕರಾವಳಿ ಪ್ರದೇಶದಿಂದ ಕೂಡಿದೆ. ಆದ್ದರಿಂದ ಅಲ್ಲಿಯ ಆದಾಯದ ಆರ್ಥಿಕ ಮೂಲ ಕಸುಬು ಮೀನುಗಾರಿಕೆ. ಆ ಕಾರಣದಿಂದಲೇ ಅಲ್ಲಿನ ಜನರು ಸಮುದ್ರವನ್ನು ಸ್ತ್ರೀ ಸ್ವರೂಪದಲ್ಲಿ ಆರಾಧಿಸುವರು. ಮಾನವ ಸಂಪನ್ಮೂಲ, ಮಾನವೀಯ ತತ್ವಗಳ ವಿಚಾರ, ಜ್ಞಾನ, ಇತಿಹಾಸ, ಜೀವನ ಸಿದ್ಧಾಂತಗಳಲ್ಲಿ ಗ್ರೀಸ್ ದೇಶವು ಭಾರತವನ್ನು ಹೋಲುತ್ತದೆ.
ಸುಮಾರು 25೦೦ ವರ್ಷಗಳ ಹಿಂದೆ ಬುದ್ಧನ ತತ್ವಗಳನ್ನು ಆರಾಧಿಸಿದ ಸಮಕಾಲೀನ ತತ್ವಜ್ಞಾನಿಗಳಲ್ಲಿ ಪೈಥೋಗರಾಸ್ ಮತ್ತು ಹೆಫ್ರಿಸಿಯನ್ ಪ್ರಮುಖರು. ಶರೀರ ವೈದ್ಯ, ಮನೋ ವೈದ್ಯ, ಇತಿಹಾಸ ಮತ್ತು ಇತರೆ ಪದ್ಧತಿಗಳಲ್ಲಿ ಅವರದೇ ಆದ ಚಾಪು ಮೂಡಿಸಿದ್ದರು. ಅವರ ಕೃತಿಗಳನ್ನು ನಮ್ಮವುಗಳೊಂದಿಗೆ ಹೋಲಿಸಬಹುದಾಗಿದೆ. ಇಲ್ಲಿಯ ಮಹಾ ಪುರುಷರು ಪ್ರೀತಿ ಮನೋಭಾವದವರು ಮತ್ತು ಶಾಂತಿಪ್ರಿಯರು. ಅನೇಕ ವರ್ಷಗಳ ಹಿಂದೆ ಆ ದೇಶದ ನೆರೆಯ ದೇಶವಾದ ರೋಮ್ನಲ್ಲಿ (ಈಗಿನ ಇಟಲಿ) ಆ ದೇಶದ ಮೂರ್ಖ, ಅಹಂಕಾರ ಮತ್ತು ವಿಕೃತ ಮನೋಭಾವದ ರಾಜರಿಗೆ ಮೋಜಿಗಾಗಿ, ಬಲಿಷ್ಠ ದಷ್ಟಪುಷ್ಟ ಮತ್ತು ಪರಾಕ್ರಮಿಗಳಿಗೆ ಪಂದ್ಯಾವಳಿಗಳನ್ನು ಏರ್ಪಡಿಸಲಾಗುತ್ತಿತ್ತು. ಅದಕ್ಕಾಗಿಯೇ ವಿಶಾಲವಾದ ಅಂಕಣವನ್ನು ನಿರ್ಮಿಸಲಾಗುತ್ತಿತ್ತು. ಅಲ್ಲಿಗೆ ಆಫ್ರಿಕ ಮತ್ತು ದಕ್ಷಿಣ ಏಷ್ಯಾ ಖಂಡಗಳಿಂದ ಗಟ್ಟಿಮುಟ್ಟಾದ ಯುವಕರನ್ನು ಖರೀದಿಸಿ ತಂದು ಒತ್ತೆಯಾಳುಗಳನ್ನಾಗಿ ಬಂಧಿಸಿ ವಿವಿಧ ಮಾದರಿಯ ಅಸ್ತçಗಳನ್ನು ನೀಡಿ, ಹಲವು ತಂತ್ರಗಳಿಂದ ತರಬೇತಿಗೊಳಿಸುತ್ತಿದ್ದರು.
ಈ ಪಂದ್ಯಾವಳಿಗಳು ಮಾನವ ಹಕ್ಕು, ಮಾನವೀಯತೆ ಮತ್ತು ಧರ್ಮಗಳಿಗೆ ತಿಲಾಂಜಲಿ ಇಟ್ಟಿದ್ದವು. ಅಲ್ಲಿಯ ಕ್ರೌರ್ಯ, ದಬ್ಬಾಳಿಕೆ, ಹಿಂಸೆ ಅಸಹನೀಯಾವಾದುದಾಗಿತ್ತು. ಪಂದ್ಯದಲ್ಲಿ ಸಾವಪ್ಪಿದವರನ್ನು ಅಲ್ಲಿಯ ಸಿಂಹಗಳಿಗೆ ಮತ್ತು ಹುಲಿಗಳಿಗೆ ಆಹಾರವಾಗಿ ನೀಡುತ್ತಿದ್ದರು. ವಿವಿಧ ಅಸ್ತçಗಳಿಂದ ಚಿಮ್ಮುವ ರಕ್ತ, ಮಾಂಸ, ಅಂಗಾಂಗಗಳ ಬೇರ್ಪಡಿಸುವಿಕೆ, ರುಂಡವನ್ನು ತುಂಡರಿಸುವಿಕೆ, ಕೊಲ್ಲುವ ತಂತ್ರಗಳು, ಅಲ್ಲಿ ನೆರೆಯುತ್ತಿದ್ದ ಸಾವಿರಾರು ಪ್ರೇಕ್ಷಕರಿಗೆ ಮತ್ತು ಪಂದ್ಯಾವಳಿಯನ್ನು ಆಯೋಜಿಸುತ್ತಿದ್ದವರಿಗೆ ವಿಕೃತ ಮನೋರಂಜನೆಯನ್ನು ನೀಡುತ್ತಿತ್ತು. ಅಂತಹ ಪಂದ್ಯಗಳಿಗೆ ಬಾಜಿ ರೂಪದಲ್ಲಿ ಬೆಲೆ ಬಾಳುವ ವಸ್ತು ಮತ್ತು ಹೆಣ್ಣನ್ನು ಪಣವಾಗಿ ಇಡುತ್ತಿದ್ದರು. ಇಂತಹ ಪಂದ್ಯಗಳ ಹುರಿಯಾಳುಗಳನ್ನು ‘Gladiators ಮತ್ತು Spartans ಎಂಬುದಾಗಿ ಕರೆಯುತ್ತಿದ್ದರು.
ಇಂತಹ ಪಂದ್ಯಾವಳಿಗಳು ಸಾವಿರಾರು ವರ್ಷಗಳಿಂದ ನಡೆದಿರಬಹುದು. ಆದರೆ ಈ ಪುಟ್ಟ ರಾಷ್ಟ್ರವಾದ ಗ್ರೀಸ್ನ ರಾಜರು ಮತ್ತು ಹಿರಿಯರು ಇಂತಹ ವಿಚಿತ್ರ ಮನೋರಂಜನೆಯನ್ನು ಅರಿತಿದ್ದರು. ಆದರೆ ಚಕಾರವೆತ್ತುವ ಸ್ಥಿತಿಯಲ್ಲಿರಲಿಲ್ಲ. ಪ್ರಶ್ನಿಸಿದರೆ ಇವರ ಬುಡಕ್ಕೆ ಕೊಡಲಿ ಏಟು ಬೀಳುವ ಸ್ಥಿತಿ ಇತ್ತು. ಆದ್ದರಿಂದ ಅಲ್ಲಿಯ ನಾಗರಿಕರಿಗೆ ಅಹಿಂಸೆ ಮತ್ತು ನೋವಿಲ್ಲದ ಪಂದ್ಯಾವಳಿಗಳನ್ನು ನಡೆಸಬೇಕೆಂಬ ಹಂಬಲಕ್ಕೆ ಓಟ, ಜಿಗಿತ, ಗುಂಡು ಎಸೆತ, ತಟ್ಟೆ ಎಸೆತ, ಕುಸ್ತಿ ಮತ್ತು ಬಿಲ್ಲುಗಾರಿಕೆಯಂತಹ ಅಸ್ತ್ರರಹಿತ ಕ್ರೀಡೆಗಳನ್ನು ಪ್ರಾರಂಭಿಸಿದರು.
ಕಾಲಕ್ರಮೇಣ ಈ ಪಂದ್ಯಾವಳಿಗಳು ಜಾಗತಿಕ ಮಟ್ಟದಲ್ಲಿ ನಡೆಯಲಾರಂಭಿಸಿದವು. ವಿದೇಶಿ ಕ್ರೀಡಾಪಟುಗಳು ಭಾಗವಹಿಸಲಾರಂಭಿಸಿದರು. ಇಲ್ಲಿ ಪ್ರೀತಿ, ಪ್ರೇಮ, ಸ್ಪರ್ಧಾ ಮನೋಭಾವನೆ ಮಾತ್ರ ಅಸ್ತಿತ್ವಕ್ಕೆ ಬಂದವು. ಈ ಕ್ರೀಡಾ ಕೂಟ ಈರೋಪ್ ದೇಶಗಳಲ್ಲೆಲ್ಲ ವಿಸ್ತರಿಸಿ ರೋಮ್ನ ಮೂಲ ಕ್ರೀಡೆಗಳು ತಮ್ಮ ಅಸ್ತಿತ್ವ ಕಳೆದುಕೊಂಡು, ಮೊದಲನೇ ಜಾಗತಿಕ ಕ್ರೀಡಾಕೂಟವನ್ನು ಗ್ರೀಸ್ ದೇಶ ವಹಿಸಿಕೊಂಡು, ಪ್ರೇಮ ‘ಓಲಿಂಪಿಕ್ಸ್’ ದೇವರ ಹೆಸರನ್ನೇ ಕ್ರೀಡಾಕೂಟಕ್ಕೆ ಇಟ್ಟರು. ಅಂದಿನಿಂದ ವಿವಿಧ ದೇಶಗಳ ಕ್ರೀಡಾಪಟುಗಳು ಭಾಗವಹಿಸುವ ಈ ಪಂದ್ಯಾವಳಿಗೆ Olympics ಎಂದೇ ಹೆಸರಿಟ್ಟರು.
ಕ್ರಿ.ಶ. 1886 ರಲ್ಲಿ ಮೊದಲು ನಿಯೋಜಿಸಲ್ಪಟ್ಟಿತು. ಪ್ರತಿ ನಾಲ್ಕು ವರ್ಷಗಳಿಗೊಮ್ಮೆ ನಡೆಯುವ ಈ ಪಂದ್ಯಾವಳಿಗೆ 2012 Olympicsನ ಆತಿಥ್ಯವನ್ನು ಯುನೈಟೆಡ್ ಕಿಂಗ್ಡಮ್ ದೇಶವು ವಹಿಸಿತ್ತು. ಈ ಕ್ರೀಡಾಕೂಟವು ಸುರಕ್ಷಿತವಾಗಿ, ವಿಜೃಂಭಣೆಯಿಂದ ನಡೆಯಿತು. ನೂರ ಇಪ್ಪತ್ತು ಕೋಟಿ ಜನಸಂಖ್ಯೆ ಹೊಂದಿರುವ ಭಾರತವು ಮುಂದಿನ ದಿನಗಳಲ್ಲಿ ಹೆಚ್ಚುಹೆಚ್ಚು ಬಂಗಾರದ ಪದಕಗಳನ್ನಾದರೂ ಗೆಲ್ಲಲಿ.
ಸ್ನೇಹಿತರೆ, ಜೀವನವೆಂಬುದು ಬೃಹತ್ ಪಂದ್ಯದ ಅಂಕಣವೆನಿಸಿದರೆ ಬದುಕು ಆಟವೇ ಸರಿ. ಸೋಲು, ಗೆಲುವು, ನೋವು, ನಲಿವು, ಸುಖ, ದುಃಖಗಳೆಲ್ಲವೂ ಸಾಮಾನ್ಯ. ಯಾವುದೇ ಸ್ಪರ್ಧಾತ್ಮಕ ಪಂದ್ಯಗಳೂ ತಿಳಿಸಿದ ತತ್ವಗಳಿಗೆ ಭಿನ್ನವಲ್ಲ.Olympics ಕ್ರೀಡಾಕೂಟ ತನ್ನದೇ ಆದ ಜಾಗತಿಕ ಸಾರ್ವಭೌಮತ್ವವನ್ನು ಪಡೆದಿದೆ. ಇಲ್ಲಿ ಇಡೀ ಪ್ರಪಂಚದ ಶ್ರೇಷ್ಠ ಕ್ರೀಡಾಪಟುಗಳು ಭಾಗವಹಿಸಿ ಆಯಾ ದೇಶಗಳ ಕೀರ್ತಿ ಪತಾಕೆಯನ್ನು ಹಾರಿಸುತ್ತಾರೆ.

ಆಟದಲ್ಲಿ ಸಮಾನತೆ, ಪ್ರೀತಿ ಸಂದೇಶ ಮತ್ತು ಪ್ರೇಮಾನುಬಂಧವೇ ಹೊರತು ಸೋಲು ಗೆಲುವು ಮುಖ್ಯವಲ್ಲ. ಈ ಕ್ರೀಡಾಕೂಟದಲ್ಲಿ ಅನೇಕ ಕ್ರೀಡೆಗಳು ಜೀವನ ಮತ್ತು ಬದುಕಿನ ರೀತಿಯನ್ನು ಹೋಲುತ್ತವೆ. ಅಂತಹ ಪಂದ್ಯಗಳಿಗೆ ಉದಾಹರಣೆಯೆಂದರೆ:
110 ಮೀಟರ್ ಅಡ್ಡ ತಡೆಯ ಓಟ
4೦೦ ಮೀಟರ್ ಅಡ್ಡ ತಡೆಯ ಓಟ
3೦೦೦ ಮೀಟರ್ Steeple Chase
1೦೦ ಮತ್ತು 4೦೦ ಮೀಟರ್ Relay ಓಟ ಇತ್ಯಾದಿಗಳು.
ಜೀವನವೆಂಬುದು ಓಟವೇ ಸರಿ. ಬದುಕಿಗೆ ರತ್ನಗಂಬಳಿ ಹಾಸಿರುವುದಿಲ್ಲ. ಈ ಎಲ್ಲಾ ಆಟಗಳಲ್ಲೂ ಮುಳ್ಳು, ಕಲ್ಲು, ಬೆಟ್ಟ ಗುಡ್ಡ, ನೀರು, ಮರಳು, ಎಡರು ತೊಡರುಗಳು ಎದುರಾಗುತ್ತಲೇ ಇರುತ್ತವೆ. ಬಂದಂತಹ ಅಡೆತಡೆಗಳನ್ನು ಸ್ಪರ್ಧಾತ್ಮಕವಾಗಿ ಎದುರಿಸಿ, ಸ್ವೀಕರಿಸಿ ಸೋಲನ್ನು ಕಂಡು ಇತರರಿಗೆ ಮಾದರಿಯಾಗುವುದು, ಮಾರ್ಗದರ್ಶನವನ್ನು ಕೊಡುವುದು ಅದೇ ಮುಖ್ಯ ಮತ್ತು ಜ್ಞಾನವಂತ ವ್ಯಕ್ತಿಯ ಲಕ್ಷಣ.
ನಮ್ಮ ಜೀವನ ಜೀವಾನುಬಂಧ. ಅಂದರೆ ಇಡೀ ಜೀವಿ ಸಂಕುಲವು ಒಂದಲ್ಲ ಒಂದು ರೀತಿಯಲ್ಲಿ ಬಂಧನವಾಗಿರುತ್ತದೆ. ನೆಂಟರು, ಸ್ನೇಹಿತರು ಅಥವಾ ಯಾವುದೇ ಸಂಬಂಧವಿರಬಹುದು. ಇಬ್ಬರ ಮಧ್ಯೆ ಅಥವಾ ಎರಡು ಜೀವಿಗಳ ಮಧ್ಯೆ ಅಗೋಚರವಾದ ಭಾವನ ಬಂಧನವಿರದಿದ್ದರೆ ಕ್ರೌರ್ಯ, ಹಿಂಸೆ, ದಳ್ಳುರಿ, ವಿಕೃತ ಮನಸ್ಸುಗಳು ಅರಿವಿಲ್ಲದೆ ಸೃಷ್ಟಿಯಾಗುತ್ತವೆ. ಹಿಂದೂ ಧರ್ಮದ ಕರ್ಮ ಸಿದ್ಧಾಂತದಡಿ ನೋಡಿದಾಗ ಜೀವನ ಮುಕ್ತಿಯು ತಲೆಮಾರಿನಿಂದ ತಲೆಮಾರಿಗೆ ಬರಬೇಕಾದರೆ ಅನೇಕ ಶತಮಾನಗಳೇ ಬೇಕಾಗಬಹುದು.
ಈ ಕಾರಣದಿಂದ ತ್ವರಿತವಾಗಿ ನೋಡುವಂತಹ ಸಾಧನವನ್ನು ಕಂಡುಕೊಳ್ಳಬೇಕಾಗುತ್ತದೆ. ಇದು ಜ್ಞಾನ, ಸಕಾರಾತ್ಮಕ ಸಂಬಂಧಗಳಲ್ಲಿ ಮಾತ್ರ ಸಾಧ್ಯ. ಒಬ್ಬರಿಂದ ಮತ್ತೊಬ್ಬರಿಗೆ ಅಥವಾ ಒಂದು ಜೀವಿಯಿಂದ ಒಂದು ಜೀವಿಗೆ ಪ್ರವಹಿಸಿದಲ್ಲಿ ಪರಮಾನಂದವಾಗುತ್ತದೆ. ಇದನ್ನು Relay Raceನಲ್ಲಿ ಕಾಣಬಹುದಾಗಿದೆ. ಬೇಗ ತಲುಪಿದ ಕ್ರೀಡಾಳುವಿನ ಮಂದಹಾಸ ಮತ್ತು ಆನಂದವೇ ಇದಕ್ಕೆ ಸಾಕ್ಷಿ.
ಎಲ್ಲರೂ ಮೊದಲಿಗರಾಗಲು ಸಾಧ್ಯವಿಲ್ಲ. ಆದರೆ ಸತತ ಪ್ರಯತ್ನ ಮತ್ತು ಸಮೀಪ ಸ್ಪರ್ಧಿಯಾಗುವುದು ಸಹ ಗೆದ್ದದ್ದಕ್ಕೆ ಸಮನಾಗಬಹುದಲ್ಲವೆ?
ಜೀವನವೊಂದು ಆಟ
- ಮುಂದುವರೆಯುವುದು
– ಡಾ|| ಎ.ಎಂ. ನಾಗೇಶ್